For Quick Alerts
ALLOW NOTIFICATIONS  
For Daily Alerts

ಜಿಯೋ ಫೈಬರ್ ಡೈಮಂಡ್ ಪ್ಲಾನ್ ಮೂಲಕ ಉಚಿತ ಟಿವಿ ಪಡೆಯಿರಿ

|

ಜಿಯೋ ತನ್ನ ಬಹುನಿರೀಕ್ಷಿತ ಬ್ರಾಡ್‌ಬ್ಯಾಂಡ್ ಸೇವೆ ಜಿಯೋ ಫೈಬರ್ ಅನ್ನು ಪ್ರಾರಂಭಿಸಿದೆ. ಇದರ ಕನಿಷ್ಠ ಮಾಸಿಕ ಬಾಡಿಗೆ ರೂ. 699 ಮತ್ತು ಗರಿಷ್ಠ ಮಾಸಿಕ ಬಾಡಿಗೆ ರೂ. 8499 ಆಗಿದೆ. ಎಲ್ಲಾ ಜಿಯೋ ಫೈಬರ್ ಯೋಜನೆಗಳಲ್ಲಿ ಉಚಿತ ಸೆಟ್-ಟಾಪ್ ಬಾಕ್ಸ್ ಮತ್ತು ಗ್ರಾಹಕರಿಗೆ ಉಡುಗೊರೆಯನ್ನು ಘೋಷಿಸಿದೆ. ಇದಲ್ಲದೆ, ರಿಲಯನ್ಸ್ ರೂ. 1299 ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ಯೋಜನೆಯನ್ನು ತೆಗೆದುಕೊಳ್ಳುವವರಿಗೆ ವೆಲ್ಕಂ ಕೊಡುಗೆಯೊಂದಿಗೆ ಉಚಿತ ಟಿವಿಯನ್ನು ಘೋಷಿಸಿದೆ.

ಜಿಯೋ ಫೈಬರ್ ಡೈಮಂಡ್ ಪ್ಲಾನ್ ಮೂಲಕ ಉಚಿತ ಟಿವಿ ಪಡೆಯಿರಿ

 

ಇಂದು ನಾವು ಜಿಯೋ ಫೈಬರ್ ಡೈಮಂಡ್ ಯೋಜನೆಯ ಬಗ್ಗೆ ಹೇಳಲಿದ್ದೇವೆ. ನಿಮಗೆ ಉಚಿತ ಟಿವಿ, 500 ಎಮ್‌ಬಿಪಿಎಸ್ ವೇಗ, ಅನಿಯಮಿತ ಡೇಟಾ (1250 ಜಿಬಿ + 250 ಜಿಬಿ ಹೆಚ್ಚುವರಿ), ಉಚಿತ ಧ್ವನಿ ಕರೆ ಸೌಲಭ್ಯವೂ ಸಿಗುತ್ತದೆ.

ಜಿಯೋ ಫೈಬರ್ ಡೈಮಂಡ್ ಯೋಜನೆ

ಜಿಯೋ ಫೈಬರ್ ಡೈಮಂಡ್ ಯೋಜನೆಯಲ್ಲಿ, ಬಳಕೆದಾರರಿಗೆ 500 ಎಮ್‌ಬಿಪಿಎಸ್ ವೇಗದಲ್ಲಿ ಅನಿಯಮಿತ ಡೇಟಾವನ್ನು ನೀಡಲಾಗುತ್ತಿದೆ. ಈ ಯೋಜನೆಯಲ್ಲಿ 1,250GB ಯ FUP (ನ್ಯಾಯಯುತ ಬಳಕೆ ನೀತಿ) ಮಿತಿಯನ್ನು ನಿಗದಿಪಡಿಸಲಾಗಿದೆ. ಅಂದರೆ, 1,250GB ವರೆಗಿನ ಡೇಟಾ ಬಳಕೆಯವರೆಗೆ 500 Mbps ವರೆಗೆ ವೇಗವನ್ನು ಪಡೆಯುತ್ತೀರಿ. ಇದರ ನಂತರ ಇಂಟರ್ನೆಟ್ ವೇಗ ಕಡಿಮೆಯಾಗುತ್ತದೆ. ವೆಲ್ಕಮ್ ಕೊಡುಗೆಯೊಂದಿಗೆ, ಬಳಕೆದಾರರಿಗೆ 6 ತಿಂಗಳವರೆಗೆ ಹೆಚ್ಚುವರಿ 250 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಜಿಯೋ ಫೈಬರ್ ಡೈಮಂಡ್ ಜೊತೆಗೆ ಜಿಯೋ ಆ್ಯಪ್ (ಜಿಯೋ ಸಿನೆಮಾ ಮತ್ತು ಜಿಯೋ ಸಾವನ್) ಸಹ ನೀಡಲಾಗುತ್ತಿದೆ. ಈ ಯೋಜನೆಗೆ ಮಾಸಿಕ ರೂ. 2,499. ನೀವು ಜಿಯೋ ಫೈಬರ್ ಡೈಮಂಡ್‌ನ ವಾರ್ಷಿಕ ಯೋಜನೆಯನ್ನು ತೆಗೆದುಕೊಂಡರೆ, ಇದಕ್ಕಾಗಿ 29,988 ಶುಲ್ಕ ಭರಿಸಬೇಕಾಗಿದೆ. ಜಿಯೋ ಫೈಬರ್ ಡೈಮಂಡ್‌ನ ವಾರ್ಷಿಕ ವೆಲ್ಕಂ ಆಫರ್ ನೊಂದಿಗೆ ಎಚ್‌ಡಿ ಟಿವಿಯನ್ನು ಸಹ ನೀಡಲಾಗುತ್ತಿದೆ.

Read more about: jio reliance jio business telecom
English summary

JioFiber: Is it worth getting GigaFiber connection for free TV?

Mukesh Ambani led Reliance Jio finally revealed the details of the JioFiber broadband plans earlier this month.
Story first published: Thursday, September 12, 2019, 16:03 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more