For Quick Alerts
ALLOW NOTIFICATIONS  
For Daily Alerts

ವಿದೇಶಿ ಕಂಪೆನಿಗೆ ಭಾರತ್ ಪೆಟ್ರೋಲಿಯಂ ಷೇರು ಮಾರಾಟಕ್ಕೆ ಕೇಂದ್ರ ಸಿದ್ಧತೆ?

|

ನವದೆಹಲಿ, ಸೆಪ್ಟೆಂಬರ್ 14: ದೇಶದ ಎರಡನೆಯ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿ ಭಾರತ್ ಪೆಟ್ರೋಲಿಯಂನ (ಬಿಪಿಸಿಎಲ್‌) ಷೇರುಗಳನ್ನು ವಿದೇಶಿ ತೈಲ ಸಂಸ್ಥೆಯೊಂದಕ್ಕೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

ಸ್ಪರ್ಧೆಯನ್ನು ಹೆಚ್ಚಿಸಲು ಮತ್ತು ಸುದೀರ್ಘಕಾಲದಿಂದ ಸರ್ಕಾರಿ ಸ್ವಾಮ್ಯದ ಕಂಪೆನಿಗಳೇ ಪ್ರಾಬಲ್ಯ ಸಾಧಿಸಿರುವ ವಲಯದಲ್ಲಿ ಬದಲಾವಣೆ ತರಲು ಸರ್ಕಾರವು ಬಹುರಾಷ್ಟ್ರೀಯ ಕಂಪೆನಿಗಳನ್ನು ಸೆಳೆಯಲು ಮುಂದಾಗಿದೆ ಎಂದು ಸಂಸ್ಥೆಗೆ ಸಂಬಂಧಿಸಿರುವ ಕೆಲವು ವ್ಯಕ್ತಿಗಳು ಹೇಳಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಫ್ಲಿಪ್ ಕಾರ್ಟ್, ಅಮೆಜಾನ್ ಗ್ರಾಹಕರಿಗೆ ಕಹಿಸುದ್ದಿ, ಹಬ್ಬಕ್ಕೆ ಆಫರ್ ಇಲ್ಲ?!

 

ಮೂಲಗಳ ಪ್ರಕಾರಸರ್ಕಾರವು ಕಂಪೆನಿಯಲ್ಲಿ ತನ್ನ ಹಿಡಿತದಲ್ಲಿರುವ ಶೇ 53.3ರಷ್ಟು ಷೇರುಗಳನ್ನು ಮಾರಾಟ ಮಾಡಲು ಚಿಂತನೆ ನಡೆಸಿದೆ.

ವಿದೇಶಿ ಕಂಪೆನಿಗೆ ಬಿಪಿ.ಷೇರು ಮಾರಾಟಕ್ಕೆ ಕೇಂದ್ರ ಸಿದ್ಧತೆ?

ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳ ಮಾರಾಟದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ 1.05 ಟ್ರಿಲಿಯನ್ ರೂಪಾಯಿಗಳನ್ನು ಎತ್ತಲು ನರೇಂದ್ರ ಮೋದಿ ಸರ್ಕಾರ ಗುರಿ ಹೊಂದಿದೆ. ಷೇರುಗಳ ಮಾರಾಟದ ವರದಿ ಬಹಿರಂಗವಾಗುತ್ತಿದ್ದಂತೆಯೇ ಭಾರತ್ ಪೆಟ್ರೋಲಿಯಂನ ಷೇರುಗಳ ಮೌಲ್ಯ ಶೇ 7ರಷ್ಟು ಹೆಚ್ಚಳಗೊಂಡಿವೆ.

Read more about: fuel share ಷೇರು
English summary

Centre Planning To Sell BPCL Stakes To Overseas Oil Company

Reports says the central government is planning to sell its stakes in the Bharat Petroleum Corp to a overseas oil firm
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more