For Quick Alerts
ALLOW NOTIFICATIONS  
For Daily Alerts

ತೈಲಕ್ಕೆ ಬಿದ್ದ ಬೆಂಕಿ, ಪೆಟ್ರೋಲ್ ಡೀಸೆಲ್ ಬೆಲೆ ರೂ. 6 ಏರಿಕೆ!

|

ಸೌದಿ ಅರೆಬಿಯಾದ ತೈಲ ಉತ್ಪಾದನಾ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದಿರುವುದರಿಂದ ಜಾಗತಿಕ ತೈಲ ಬಿಕ್ಕಟ್ಟು ಎದುರಾಗಿದೆ. ಬಂಡುಕೋರರು ತೈಲ ಸಂಸ್ಕರಣಾ ಘಟಕಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ ಸಂಘರ್ಷ ಆರಂಭವಾಗಿದೆ. ಇದು ಜಾಗತಿಕವಾಗಿ ತೈಲ ದರಗಳ ಮೇಲೆ ಕೆಟ್ಟ್ ಪರಿಣಾಮ ಬೀರಿದೆ.

ಡ್ರೋನ್ ದಾಳಿ ಎಫೆಕ್ಟ್ 19.5 ಡಾಲರ್ ಏರಿಕೆ
 

ಡ್ರೋನ್ ದಾಳಿ ಎಫೆಕ್ಟ್ 19.5 ಡಾಲರ್ ಏರಿಕೆ

ತೈಲ ಸಂಸ್ಕರಣಾ ಘಟಕಗಳ ಮೇಲಿನ ಡ್ರೋನ್ ದಾಳಿಯ ಮುನ್ನ ಪ್ರತಿ ಬ್ಯಾರೆಲ್ ಕಚ್ಚಾತೈಲದ ಜಾಗತಿಕ ಬೆಲೆ 59 ಡಾಲರ್ ನಷ್ಟಿತ್ತು. ಆದರೆ ಸೋಮವಾರದ ನಂತರ ಪ್ರತಿ ಬ್ಯಾರೆಲ್ ಬೆಲೆ 71.95 ಡಾಲರ್ ಆಗಿದೆ. ಅಂದರೆ ಒಟ್ಟಾರೆ 19.5 ಡಾಲರ್ ಹೆಚ್ಚಳ ಕಂಡಿದೆ.

5-6 ರೂಪಾಯಿ ಹೆಚ್ಚಳ

5-6 ರೂಪಾಯಿ ಹೆಚ್ಚಳ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿರುವುದರ ಪರಿಣಾಮ ಭಾರತದ ಮೇಲೂ ಬೀರಿದ್ದು, ಪೆಟ್ರೋಲ್-ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ ರೂ. 5 ರಿಂದ 6 ಏರಿಕೆಯಾಗುವ ಸಂಭವವಿದೆ ಎಂದು ಅಂದಾಜಿಸಲಾಗಿದೆ.

ದಾಳಿ ನಂತರ ತೈಲ ಉತ್ಪಾದನೆಯ ಸ್ಥಿತಿ

ದಾಳಿ ನಂತರ ತೈಲ ಉತ್ಪಾದನೆಯ ಸ್ಥಿತಿ

ಸೌದಿ ಅರೆಬಿಯಾದ ತೈಲ ಉತ್ಪಾದನಾ ಘಟಕಗಳ ಮೇಲೆ ದಾಳಿ ನಡೆದು ಹಾನಿಯಾದ ನಂತರ ಪ್ರತಿದಿನ ೫೭ ಲಕ್ಷ ಬ್ಯಾರೆಲ್ ತೈಲ ಉತ್ಪಾದನೆಯ ಮಟ್ಟದಲ್ಲಿ ಕುಸಿತ ಕಂಡಿದೆ. ಡ್ರೋನ್ ದಾಳಿಯ ನಂತರ ಶೇಕಡಾ ೪೦ರಷ್ಟು ಮಾತ್ರ ತೈಲ ಉತ್ಪಾದನೆ ಸಾಧ್ಯವಾಗುತ್ತಿದೆ.

ಬಂಡುಕೋರರ ಡ್ರೋನ್ ದಾಳಿಗೆ ಒಳಗಾಗಿರುವ ಎರಡು ಘಟಕಗಳ ಮತ್ತೆ ಪ್ರಾರಂಭವಾಗಲು ಎರಡು ವಾರಗಳು ಬೇಕಾಗಬಹುದು.

ಟೆಕ್ಸಾಸ್, ಬ್ರೆಂಟ್​ ಕಚ್ಚಾ ತೈಲ ದರ
 

ಟೆಕ್ಸಾಸ್, ಬ್ರೆಂಟ್​ ಕಚ್ಚಾ ತೈಲ ದರ

ವೆಸ್ಟ್ ಟೆಕ್ಸಾಸ್ ಇಂಟರ್​ಮೀಡಿಯೇಟ್ (ಡಬ್ಲ್ಯೂಟಿಐ)ನ ಕಚ್ಛಾ ತೈಲ ದರವು ಶೇ. 15.5ರಷ್ಟು ಹೆಚ್ಚಳಗೊಂಡು, ಪ್ರತಿ ಬ್ಯಾರೆಲ್​ಗೆ 63.34 ಡಾಲರ್ ಹೆಚ್ಚಾಗಿದೆ.

ಜಗತ್ತಿನ ಹೆಚ್ಚಿನ ಕಚ್ಛಾ ತೈಲದ ಬೆಲೆ ನಿರ್ಧಾರ ಮಾಡುವ ಬ್ರೆಂಟ್​ ಕಚ್ಚಾ ತೈಲ ದರ ಶೇ. 19.5ರಷ್ಟು ಹೆಚ್ಚಳವಾಗಿದೆ. ಬ್ರೆಂಟ್​ನ ಕಚ್ಛಾ ತೈಲ ಬೆಲೆ ಪ್ರತೀ ಬ್ಯಾರೆಲ್​ಗೆ 71.95 ಡಾಲರ್ ತಲುಪಿದೆ.

ತೈಲ ಬೆಲೆ ಏರಿಳಿತಕ್ಕೆ ಕಾರಣ

ತೈಲ ಬೆಲೆ ಏರಿಳಿತಕ್ಕೆ ಕಾರಣ

ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ-ಇಳಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್, ಡೀಸೆಲ್ ದರಗಳ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ. ಇದೀಗ ತೈಲ ಉತ್ಪಾದನಾ ಘಟಕಗಳ ಮೇಲಿನ ದಾಳಿಯಿಂದಾಗಿ ಜಾಗತಿಕ ತೈಲದ ದರ ಏರಿಕೆಯಾಗಿದೆ.

ಭಾರತದ ಮೇಲೂ ಪರಿಣಾಮ

ಭಾರತದ ಮೇಲೂ ಪರಿಣಾಮ

ಶೇಕಡಾ 83ರಷ್ಟು ಕಚ್ಚಾತೈಲವನ್ನು ಅಮದು ಮಾಡಿಕೊಳ್ಳುತ್ತದೆ. ಇರಾಕ್ ನಿಂದ ಹೆಚ್ಚಿನ ತೈಲವನ್ನು ಭಾರತವು ಅಮದು ಮಾಡಿಕೊಳ್ಳುತ್ತದೆ. ಇದರಿಂದಾಗಿ ಕಚ್ಚಾತೈಲ ಅಮದಿಗೆ ಭಾರತ ಮಾಡುವ ವೆಚ್ಚದ ಪ್ರಮಾಣ ಹೆಚ್ಚಾಗಲಿದೆ.

ಚಿನ್ನದ ದರ ಏರಿಕೆ

ಚಿನ್ನದ ದರ ಏರಿಕೆ

ಜಾಗತಿಕ ತೈಲ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ದೆಹಲಿ ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ ರೂ. 460 ಏರಿಕೆ ಕಂಡಿದೆ. ಹೀಗಾಗಿ 10 ಗ್ರಾಂ ಚಿನ್ನಕ್ಕೆ ರೂ. 38,400 ಆಗಿದೆ. ಪ್ರತಿ ಕೆಜಿ ಬೆಳ್ಳಿಗೆ ರೂ. 1,096 ಏರಿಕೆ ಕಂಡು ರೂ. 47, 957ಕ್ಕೆ ತಲುಪಿದೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು:ಪೆಟ್ರೋಲ್: 74.89/ಲೀಟರ್

ಡೀಸೆಲ್: 68.06/ಲೀಟರ್

ಹುಬ್ಬಳ್ಳಿ:

ಪೆಟ್ರೋಲ್: 74.88/ಲೀಟರ್

ಡೀಸೆಲ್: 68.06/ಲೀಟರ್

ಧಾರವಾಡ:

ಪೆಟ್ರೋಲ್: 74.88/ಲೀಟರ್

ಡೀಸೆಲ್: 68.06/ಲೀಟರ್

ಮೈಸೂರು:

ಪೆಟ್ರೋಲ್: 74.63/ಲೀಟರ್

ಡೀಸೆಲ್: 67.79/ಲೀಟರ್

ಮಂಗಳೂರು:

ಪೆಟ್ರೋಲ್: 73.92/ಲೀಟರ್

ಡೀಸೆಲ್: 67.12/ಲೀಟರ್

ಬೆಳಗಾವಿ:

ಪೆಟ್ರೋಲ್: 75.25/ಲೀಟರ್

ಡೀಸೆಲ್: 68.41/ಲೀಟರ್

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

ಕೋಲಾರ:

ಪೆಟ್ರೋಲ್: 74.83/ಲೀಟರ್

ಡೀಸೆಲ್: 68/ಲೀಟರ್

ರಾಮನಗರ:

ಪೆಟ್ರೋಲ್: 75.22/ಲೀಟರ್

ಡೀಸೆಲ್: 68.36/ಲೀಟರ್

ಚಿಕ್ಕಬಳ್ಳಾಪುರ:

ಪೆಟ್ರೋಲ್: 75.78/ಲೀಟರ್

ಡೀಸೆಲ್: 68.8/ಲೀಟರ್

ಮಂಡ್ಯ:

ಪೆಟ್ರೋಲ್: 74.85/ಲೀಟರ್

ಡೀಸೆಲ್: 68.02/ಲೀಟರ್

ತುಮಕೂರು:

ಪೆಟ್ರೋಲ್: 75.31/ಲೀಟರ್

ಡೀಸೆಲ್: 68.47/ಲೀಟರ್

ದಾವಣಗೆರೆ:

ಪೆಟ್ರೋಲ್: 76.10/ಲೀಟರ್

ಡೀಸೆಲ್: 69.03/ಲೀಟರ್

ದೇಶದ ಪ್ರಮುಖ ನಗರಗಳು

ದೇಶದ ಪ್ರಮುಖ ನಗರಗಳು

ಮುಂಬೈ:

ಪೆಟ್ರೋಲ್: 78.1/ಲೀಟರ್

ಡೀಸೆಲ್: 69.04/ಲೀಟರ್

ದೆಹಲಿ:

ಪೆಟ್ರೋಲ್: 72.42/ಲೀಟರ್

ಡೀಸೆಲ್: 65.82/ಲೀಟರ್

ಚೆನ್ನೈ:

ಪೆಟ್ರೋಲ್: 75.26/ಲೀಟರ್

ಡೀಸೆಲ್: 69.57/ಲೀಟರ್

ಹೈದರಾಬಾದ್:

ಪೆಟ್ರೋಲ್: 76.99/ಲೀಟರ್

ಡೀಸೆಲ್: 71.75/ಲೀಟರ್

ಕೊಲ್ಕತ್ತಾ:

ಪೆಟ್ರೋಲ್: 75.14/ಲೀಟರ್

ಡೀಸೆಲ್: 68.23/ಲೀಟರ್

ಗುವಾಹಟಿ:

ಪೆಟ್ರೋಲ್: 74.80/ಲೀಟರ್

ಡೀಸೆಲ್: 69.05/ಲೀಟರ್

ಗಾಂಧಿನಗರ (ಗುಜರಾತ)

ಪೆಟ್ರೋಲ್: 70.06/ಲೀಟರ್

ಡೀಸೆಲ್: 69.09/ಲೀಟರ್

ಜೈಪುರ:

ಪೆಟ್ರೋಲ್: 76.30/ಲೀಟರ್

ಡೀಸೆಲ್: 70.90/ಲೀಟರ್

ಪಣಜಿ:

ಪೆಟ್ರೋಲ್: 68.57/ಲೀಟರ್

ಡೀಸೆಲ್: 66.63/ಲೀಟರ್

ಲಖನೌ:

ಪೆಟ್ರೋಲ್: 74.14/ಲೀಟರ್

ಡೀಸೆಲ್: 66.01/ಲೀಟರ್

English summary

Global oil crisis: Petrol, Diesel prices hikes by 6

Global benchmark Brent crude rose 19% to almost $72 per barrel after the market opened for the first time after the drone strike at the heart of Saudi Arabia’s oil industry.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more