For Quick Alerts
ALLOW NOTIFICATIONS  
For Daily Alerts

ಟಾಟಾ ಸ್ಕೈ, ಡಿಶ್ ಟಿವಿ, ಡಿ2ಎಚ್ ಉಚಿತ ಸೇವೆಗಳ ಧಮಾಕಾ! ಪಡೆಯುವುದು ಹೇಗೆ?

|

ಟ್ರಾಯ್ ಹೊಸ ಟ್ಯಾರಿಪ್ ನಿಯಮವನ್ನು ಜಾರಿಗೆ ತರುವ ಮೊದಲು ದೇಶದ ಡಿಟಿಎಚ್ ಸೇವಾ ಪೂರೈಕೆದಾರರು ತಮ್ಮ ಚಂದಾದಾರರಿಗೆ ಹೆಚ್ಚುವರಿ ಪ್ರಯೋಜನಗಳೊಂದಿಗೆ ದೀರ್ಘಾವಧಿಯ ಯೋಜನೆಗಳನ್ನು ನೀಡುತ್ತಿದ್ದರು. ಆದಾಗ್ಯೂ, ಹೊಸ ನಿಯಮಗಳ ಪ್ರಕಾರ, ಡಿಟಿಎಚ್ ಆಪರೇಟರ್‌ಗಳು ತಮ್ಮ ಬಳಕೆದಾರರಿಗೆ ದೀರ್ಘಾವಧಿಯ ಯೋಜನೆಗಳೊಂದಿಗೆ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಒದಗಿಸುತ್ತಿದ್ದಾರೆ.

ಈ ಹೊಸ ರೀತಿಯ ದೀರ್ಘಕಾಲೀನ ಪ್ಯಾಕ್ ಅಡಿಯಲ್ಲಿ, ಟಾಟಾ ಸ್ಕೈ, ಡಿಶ್ ಟಿವಿ ಮತ್ತು ಡಿ 2 ಹೆಚ್ ತಮ್ಮ ಚಂದಾದಾರರಿಗೆ ಉಚಿತ ಸೇವೆಯನ್ನು ಒದಗಿಸುತ್ತಿದ್ದು, ದೀರ್ಘಾವಧಿಯ 120 ದಿನಗಳ ಉಚಿತ ಚಂದಾದಾರಿಕೆ ಒಳಗೊಂಡಿದೆ.

ಜಿಯೋ ಪೈಬರ್ ಪ್ರವೇಶಾತಿ ನಂತರ ಗ್ರಾಹಕರು ಇತ್ತ ಕಡೆ ಆಕರ್ಷಿಸುತ್ತಿದ್ದು,ದೂರದರ್ಶನ ವಲಯವನ್ನು ವಿಡಿಯೊ ಸ್ಟ್ರೀಮಿಂಗ್ ಸೇವೆಯು ಪ್ರವೇಶಿಸಿ, ಭರ್ಜರಿ ಮನರಂಜನೆಯನ್ನು ಒದಗಿಸುತ್ತಿದೆ. ಇದೀಗ ಈ ನಿಟ್ಟಿನಲ್ಲಿ ಟಾಟಾಸ್ಕೈ, ಡಿಶ್‌ ಟಿವಿ ಮತ್ತು ಡಿ2ಎಚ್ ಕಂಪನಿಗಳು ತಮ್ಮ ದೀರ್ಘಾವಧಿಯ ರೀಚಾರ್ಜ್ ಪ್ಲ್ಯಾನ್‌ಗಳಿಗೆ ಹೆಚ್ಚುವರಿ ಅವಧಿಯ ಉಚಿತ ಸೇವೆಯನ್ನು ಪೂರೈಸಲಿವೆ. ಈ ಕಂಪನಿಗಳು ನೀಡುತ್ತಿರುವ ಯೋಜನೆಗಳ ಬಗ್ಗೆ ತಿಳಿಯೋಣ ಬನ್ನಿ..

ಟಾಟಾ ಸ್ಕೈ ಕ್ಯಾಶ್‌ಬ್ಯಾಕ್ ಆಫರ್
 

ಟಾಟಾ ಸ್ಕೈ ಕ್ಯಾಶ್‌ಬ್ಯಾಕ್ ಆಫರ್

ಟಾಟಾ ಸ್ಕೈ ತನ್ನ ಚಂದಾದಾರರಿಗೆ ಒಂದು ವಿಶಿಷ್ಟವಾದ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಘೋಷಿಸಿದೆ. ಇದು ದೀರ್ಘಾವಧಿಯ ಕೊಡುಗೆಯಾಗಿದ್ದು, ಕ್ಯಾಶ್‌ಬ್ಯಾಕ್ ಕೊಡುಗೆಗೆ ಚಂದಾದಾರರು 12 ತಿಂಗಳ ಚಂದಾದಾರಿಕೆ ರೀಚಾರ್ಜ್ ಮಾಡಬೇಕಾಗುತ್ತದೆ. ನಂತರ ಚಂದಾದಾರರು ಒಂದು ತಿಂಗಳ ಉಚಿತ ಸೇವೆಯ ರೂಪದಲ್ಲಿ ಕ್ಯಾಶ್‌ಬ್ಯಾಕ್ ಅನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಟಾಟಾ ಸ್ಕೈ ಚಂದಾದಾರರು 12 ತಿಂಗಳ ರೀಚಾರ್ಜ್ ಮಾಡಿದರೆ ಹೆಚ್ಚುವರಿ ತಿಂಗಳ ಸೇವೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಕ್ಯಾಶ್‌ಬ್ಯಾಕ್ ಕೊಡುಗೆ ಅಡಿಯಲ್ಲಿ, ಚಂದಾದಾರರು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಅನ್ನು ಕೇವಲ 48 ಗಂಟೆಗಳ ಒಳಗೆ ಸ್ವೀಕರಿಸುತ್ತಾರೆ.

ಡಿ2ಎಚ್ ದೀರ್ಘಾವಧಿ ಯೋಜನೆ

ಡಿ2ಎಚ್ ದೀರ್ಘಾವಧಿ ಯೋಜನೆ

ಎಲ್ಲಾ ಡಿಟಿಎಚ್ ಆಪರೇಟರ್‌ಗಳಲ್ಲಿ, ಡಿ2ಎಚ್ ಅತ್ಯಂತ ವಿಸ್ತಾರವಾದ ಮತ್ತು ಆಕರ್ಷಕ ದೀರ್ಘಕಾಲೀನ ಯೋಜನೆಗಳನ್ನು ಒಳಗೊಂಡಿದೆ. 3 ತಿಂಗಳ ಚಂದಾದಾರಿಕೆಯನ್ನು ಹೊಂದಿರುವ ಚಂದಾದಾರರು 7 ದಿನಗಳ ಉಚಿತ ಚಂದಾದಾರಿಕೆಯನ್ನು ಆನಂದಿಸುತ್ತಾರೆ. 6 ತಿಂಗಳ ಚಂದಾದಾರಿಕೆಯೊಂದಿಗೆ ಅವರು ಹೆಚ್ಚುವರಿ 15 ದಿನಗಳ ಚಂದಾದಾರಿಕೆಯನ್ನು ಆನಂದಿಸುತ್ತಾರೆ. 11 ತಿಂಗಳ ಚಂದಾದಾರಿಕೆಗೆ 30 ದಿನಗಳ ಹೆಚ್ಚುವರಿ ಉಚಿತ ಸೇವೆ ಪಡೆಯುತ್ತಾರೆ. ಚಂದಾದಾರರು 22 ತಿಂಗಳ ಚಂದಾದಾರಿಕೆಗೆ 60 ದಿನಗಳ ಹೆಚ್ಚುವರಿ ಸೇವೆಯನ್ನು ಪಡೆಯುತ್ತಾರೆ. 33 ತಿಂಗಳ ಯೋಜನೆಗೆ 90 ದಿನಗಳ ಉಚಿತ ಸೇವೆಹಾಗು 44 ತಿಂಗಳ ಯೋಜನೆಗೆ 120 ದಿನಗಳ ಹೆಚ್ಚುವರಿ ಸೇವೆಯನ್ನುಯನ್ನು ಪಡೆಯುತ್ತಾರೆ.

ಡಿಶ್ ಟಿವಿ ದೀರ್ಘಾವಧಿ ಯೋಜನೆ

ಡಿಶ್ ಟಿವಿ ದೀರ್ಘಾವಧಿ ಯೋಜನೆ

ಡಿಶ್ ಟಿವಿಯ ದೀರ್ಘಾವಧಿಯ ಯೋಜನೆಯು ಡಿ2ಎಚ್‌ನಂತೆಯೇ ಇರುತ್ತದೆ. ಇದು ಕೂಡ ಹೆಚ್ಚುವರಿ ಉಚಿತ ಸೇವೆಗಳನ್ನು ನೀಡುತ್ತಿದೆ. 3 ತಿಂಗಳ ಚಂದಾದಾರಿಕೆಯನ್ನು ಹೊಂದಿರುವ ಡಿಶ್ ಟಿವಿ ಚಂದಾದಾರರು 7 ದಿನಗಳ ಉಚಿತ ಸೇವೆ ಪಡೆಯುತ್ತಾರೆ. 6 ತಿಂಗಳ ಚಂದಾದಾರಿಕೆಗೆ 15 ಹೆಚ್ಚುವರಿ ದಿನಗಳ ಸೇವೆ, 11 ತಿಂಗಳುಗಳ ಚಂದಾದರಿಕೆಗೆ 30 ದಿನಗಳ ಹೆಚ್ಚುವರಿ ಸೇವೆಯನ್ನು ಪಡೆಯುತ್ತಾರೆ.

ಟಾಟಾ ಸ್ಕೈ ಒಂದು ತಿಂಗಳ ಉಚಿತ ಸೇವೆ
 

ಟಾಟಾ ಸ್ಕೈ ಒಂದು ತಿಂಗಳ ಉಚಿತ ಸೇವೆ

ಒಂದೇ ಬಾರಿ 12 ತಿಂಗಳ ಚಂದಾದಾರಿಕೆಯನ್ನು ಪಾವತಿಸಿದರೆ ಟಾಟಾ ಸ್ಕೈ ತನ್ನ ಗ್ರಾಹಕರಿಗೆ ಒಂದು ತಿಂಗಳ ಉಚಿತ ಟಿವಿ ವೀಕ್ಷಣೆ ಸೇವೆಯನ್ನು ನೀಡುತ್ತಿದೆ. ಅಂದರೆ ಒಂದು ತಿಂಗಳ ಉಚಿತ ಸೇವೆಯನ್ನು ಕ್ಯಾಶ್‌ಬ್ಯಾಕ್ ರೂಪದಲ್ಲಿ ಒದಗಿಸುತ್ತದೆ. ರೀಚಾರ್ಜ್ ಮಾಡಿದ 48 ಗಂಟೆಗಳ ಒಳಗೆ ಒಂದು ತಿಂಗಳ ಉಚಿತ ರೀಚಾರ್ಜ್ ಬೋನಸ್ ಅನ್ನು ಚಂದಾದಾರರ ಟಾಟಾ ಸ್ಕೈ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಡಿಟಿಎಚ್ ಕಂಪನಿ ಹೇಳಿದೆ.

ಟ್ರಾಯ್ ಎಫೆಕ್ಟ್ ಆಫರ್‌ ಆಕರ್ಷಣೆ

ಟ್ರಾಯ್ ಎಫೆಕ್ಟ್ ಆಫರ್‌ ಆಕರ್ಷಣೆ

ಟ್ರಾಯ್ ಹೊಸ ನಿಯಮ ಜಾರಿಯಾದ ನಂತರ ದೀರ್ಘಾವಧಿಯ ಯೋಜನೆಗಳು ಯಶಸ್ವಿಯಾಗುವುದಿಲ್ಲ ಎನ್ನಲಾಗುತ್ತಿತ್ತು. ಆದರೆ ಡಿ2ಎಚ್ ಸಂಸ್ಥೆಗಳು ದೀರ್ಘಾವಧಿಯ ಯೋಜನೆಗಳನ್ನು ತನ್ನ ಗ್ರಾಹಕರಿಗೆ ಘೋಷಿಸುತ್ತಲೇ ಇವೆ. ಒಂದೇಡೆ ಜಿಯೋ ಪೈಬರ್ ಪೈಪೋಟಿ ನೀಡುತ್ತಿದ್ದರೆ, ಇನ್ನೊಂದೆಡೆ ಇನ್ನಿತರ ಡಿ2ಎಚ್ ಸಂಸ್ಥೆಗಳು ಹೆಚ್ಚುವರಿ ವ್ಯಾಲಿಡಿಟಿಯ ಆಫರ್‌ ನೀಡಿ ಗ್ರಾಹಕರನ್ನು ಉಳಿಸಿಕೊಳ್ಳುವ ಪ್ಲಾನ್ ಗಳನ್ನು ಘೋಷಿಸುತ್ತಿವೆ. ಟಾಟಾಸ್ಕೈ, ಡಿಶ್‌ಟಿವಿ ಮತ್ತು ಡಿ2ಎಚ್‌ ಅಪರೇಟರ್ ಗಳು ಗ್ರಾಹಕರನ್ನು ಆಕರ್ಷಿಸಲು ಮುಂದಾಗಿವೆ.

Read more about: trai money business
English summary

Tata Sky, Dish TV, D2h long term plans offer free service: How to get

DTH service providers in the country used to offer long term plans with additional benefits to their subscribers before the new tariff regime was implemented by TRAI.
Story first published: Thursday, September 19, 2019, 10:03 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more