For Quick Alerts
ALLOW NOTIFICATIONS  
For Daily Alerts

ಕಾರ್ಪೋರೇಟ್ ತೆರಿಗೆಯಲ್ಲಿ ಭಾರೀ ಕಡಿತ, ಸೆನ್ಸೆಕ್ಸ್ 1,600 ಪಾಯಿಂಟ್‌ ಏರಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶೀ ಕಂಪನಿಗಳಿಗೆ ಕಾರ್ಪೋರೇಟ್ ತೆರಿಗೆಯಲ್ಲಿ ಭಾರೀ ಕಡಿತ ಮಾಡುವುದಾಗಿ ಘೋಷಿಸಿದ್ದಾರೆ.

|

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶೀ ಕಂಪನಿಗಳಿಗೆ ಕಾರ್ಪೋರೇಟ್ ತೆರಿಗೆಯಲ್ಲಿ ಭಾರೀ ಕಡಿತ ಮಾಡುವುದಾಗಿ ಘೋಷಿಸಿದ್ದಾರೆ.
ಇಂದು ಗೋವಾದ ಪಣಜಿಯಲ್ಲಿ ನಡೆಯುತ್ತಿರುವ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿಯ ಸಭೆಯ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ತಿಳಿಸಿದ್ದಾರೆ.

ಕಾರ್ಪೋರೇಟ್ ತೆರಿಗೆಯಲ್ಲಿ ಕಡಿತ, ಸೆನ್ಸೆಕ್ಸ್ 1,600 ಪಾಯಿಂಟ್‌ ಏರಿಕೆ

ಎಲ್ಲಾ ಹೊಸ ಕಂಪನಿಗಳಿಗೂ ಅಂದರೆ 2019ರ ಅಕ್ಟೋಬರ್‌ 1 ರಿಂದ 2023ರ ಮಾರ್ಚ್‌ 31ರೊಳಗೆ ಹೊಸದಾಗಿ ಸ್ಥಾಪನೆಯಾಗಿ ಉತ್ಪಾದನೆಯನ್ನು ಪ್ರಾರಂಭಿಸುವ ಕಂಪನಿಗಳಿಗೆ ಆದಾಯ ತೆರಿಗೆಯನ್ನು ಶೇಕಡಾ 15ಕ್ಕೆ ಇಳಿಕೆ ಮಾಡುವುದಾಗಿ ತಿಳಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ತೆರಿಗೆ ಕಡಿತ ಘೋಷಿಸಿದ ನಂತರರ ಮಾರುಕಟ್ಟೆಗಳು ತಕ್ಷಣವೇ ಏರಿಕೆ ಕಂಡವು. ಸೆನ್ಸೆಕ್ಸ್ 1,600 ಪಾಯಿಂಟ್‌ ಏರಿಕೆ ಕಂಡರೆ, ನಿಫ್ಟಿ 11000 ಅಂಕಗಳಿಗಿಂತ ಹೆಚ್ಚಾಗಿದೆ.

ಹಣಕಾಸು ವರ್ಷ 2020ರಿಂದ ಯಾವುದೇ ವಿನಾಯಿತಿ ಅಥವಾ ಪ್ರೋತ್ಸಾಹವನ್ನು ಪಡೆಯದಿದ್ದಲ್ಲಿ ಕಂಪನಿಯು ಆದಾಯ ತೆರಿಗೆಯನ್ನು ಶೇಕಡಾ 22 ರಷ್ಟು ಪಾವತಿಸುವ ಆಯ್ಕೆಯನ್ನು ಹೊಂದಿರುತ್ತದೆ. ಈ ಕಂಪನಿಗಳಿಗೆ ತೆರಿಗೆ ದರ ಎಲ್ಲಾ ಸರ್ಚಾರ್ಜ್ ಮತ್ತು ಸೆಸ್‌ಗಳನ್ನು ಒಳಗೊಂಡಂತೆ 25.17 ಪ್ರತಿಶತದಷ್ಟು ಇರುತ್ತದೆ. ಕಾರ್ಪೋರೇಟ್ ಕಂಪನಿಗಳಿಗೆ ನೀಡಲಿರುವ ತೆರಿಗೆ ಕಡಿತ ಹಾಗೂ ಇತರ ವಿನಾಯಿತಿ ಪ್ಯಾಕೇಜ್ ನಿಂದ ವಾರ್ಷಿಕ ಸುಮಾರು ರೂ. 1.45 ಲಕ್ಷ ಕೋಟಿ ನಷ್ಟವಾಗಲಿದೆ ಎಂದು ರ್ನಿಲಾ ಸೀತಾರಾಮನ್ ಹೇಳಿದರು.
ಹೊಸ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಮೇಕ್ ಇನ್ ಇಂಡಿಯಾವನ್ನು ಹೆಚ್ಚಿಸಲು, ಅಕ್ಟೋಬರ್ 1, 2019 ರ ನಂತರ ಸಂಯೋಜಿಸಲ್ಪಟ್ಟ ಯಾವುದೇ ಹೊಸ ದೇಶೀಯ ಉತ್ಪಾದನಾ ಕಂಪನಿಯು ಶೇಕಡಾ 15ರಷ್ಟು ತೆರಿಗೆ ಪಾವತಿಸುವ ಆಯ್ಕೆಯನ್ನು ಹೊಂದಿದೆ. ಯಾವುದೇ ವಿನಾಯಿತಿ ಪಡೆಯದ ಕಂಪನಿಗಳಿಗೂ ಇದು ಅನ್ವಯಿಸುತ್ತದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

English summary

Corporate tax slashed for domestic companies, sensex rise 1600 points

Finance Minister Nirmala Sitharaman today proposed to slash the corporate tax rates for domestic companies and new manufacturing companies.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X