For Quick Alerts
ALLOW NOTIFICATIONS  
For Daily Alerts

ಜಿಯೋ ಗ್ರಾಹಕರಿಗೆ ದೋಖಾ! ಇನ್ಮುಂದೆ ಉಚಿತ ಕರೆ ಸೌಲಭ್ಯ ಇಲ್ಲ

|

ಟೆಲಿಕಾಂ ರಂಗದಲ್ಲಿ ಜಿಯೋ ಪ್ರವೇಶಾತಿ ಮಾಡಿದ ನಂತರ ಭಾರೀ ಸಂಚಲನವನ್ನು ಎಬ್ಬಿಸಿತ್ತು. ದರ ಸಮರದ ಕ್ರಾಂತಿಗೆ ಕಾರಣವಾಗಿದ್ದ ಜಿಯೋ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ.

ಜಿಯೋ ಪ್ರವೇಶಾತಿ ನಂತರ ಟೆಲಿಕಾಂ ಕಂಪನಿಗಳು ತತ್ತರಿಸಿ ಹೋಗಿದ್ದಲ್ಲದೆ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಬೇಕಾದ ಸವಾಲು ಎದುರಾಗಿತ್ತು. ಇದರಿಂದಾಗಿ ಜಿಯೋ ಗ್ರಾಹಕರು ಪ್ರಯೋಜನಗಳನ್ನು ಆನಂದಿಸಿದ್ದರು. ನಿಗದಿತ ಮೊತ್ತ ಪಾವತಿಸಿದರೆ ಒಳಬರುವ, ಹೊರಹೋಗುವ ಕರೆಗಳು, ಎಸ್ಎಂಎಸ್, ಡೇಟಾ ಸೌಲಭ್ಯ ಲಭ್ಯವಾಗುತ್ತಿತ್ತು.

ಪ್ರತಿ ನಿಮಿಷಕ್ಕೆ ಆರು ಪೈಸೆ ಶುಲ್
 

ಪ್ರತಿ ನಿಮಿಷಕ್ಕೆ ಆರು ಪೈಸೆ ಶುಲ್

ಜಿಯೋ ಪ್ರಕಾರ, ಜಿಯೋ ಹೊರತುಪಡಿಸಿ ಉಳಿದ ನೆಟ್ವರ್ಕ್ ಸಿಮ್ ಕಾರ್ಡ್ ಬಳಸುವ ಮೊಬೈಲ್ ಫೋನ್ ಗಳಿಗೆ ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ ಆರು ಪೈಸೆ ಶುಲ್ಕ ವಿಧಿಸಲಾಗುವುದು. ಇದಕ್ಕೆ ಪ್ರತಿಯಾಗಿ ಅದಕ್ಕನುಗುಣವಾಗಿ ಅಷ್ಟೇ ಪ್ರಮಾಣದ ಡೇಟಾ ಒದಗಿಸಲಾಗುತ್ತದೆ ಎಂದು ಹೇಳಲಾಗಿದೆ. ಜಿಯೋದಿಂದ ಏರ್ಟೆಲ್, ಬಿಎಸ್ಎನ್ಎಲ್, ವೋಡಾಫೋನ್ ಗಳಿಗೆ ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ ಆರು ಪೈಸೆ ಶುಲ್ಕ ವಿಧಿಸಲಾಗುತ್ತದೆ.

ಸಿಮ್ ಸಕ್ರಿಯ

ಸಿಮ್ ಸಕ್ರಿಯ

ಈಗಾಗಲೇ ಕೆಲ ಕಂಪನಿಗಳು ಸಿಮ್ ಸಕ್ರಿಯವಾಗಬೇಕೆಂದರೆ ನಿಗದಿತ ಮೊತ್ತವನ್ನು ಪಾವತಿಸಲು ಸೂಚಿಸಿದ್ದು, ಹಾಗೆ ಮಾಡಿದರೆ ಮಾತ್ರ ಒಳಬರುವ ಕರೆಗಳು ಸ್ವೀಕರಿಸಲು ಸಾಧ್ಯವಾಗುತ್ತದೆ. ತನ್ನ ಗ್ರಾಹಕರಿಗೆ ಹತ್ತಾರು ಸೌಲಭ್ಯ ನೀಡಿದ್ದ ಜಿಯೋ ಇದೀಗ ಹೊರಹೋಗುವ ಕರೆಗಳಿಗೆ ದರ ನಿಗದಿ ಮಾಡಿದೆ.

ಜಿಯೋ ಹೊಸ ಪ್ಲಾನ್

ಜಿಯೋ ಹೊಸ ಪ್ಲಾನ್

ಬೇರೆ ಕಂಪನಿಯ ನೆಟ್ವರ್ಕ್ ಗಳಿಗೆ ಕರೆ ಮಾಡಿದರೆ ಶುಲ್ಕ ವಿಧಿಸಲು ಮುಂದಾಗಿರುವ ಜಿಯೋ, ಹೊಸ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳ ಮುಖಾಂತರ ಗ್ರಾಹಕರಿಗೆ ಡೇಟಾವನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ.

ರೂ. 10 ಪ್ಲಾನ್ ರೀಚಾರ್ಜ್ ಮಾಡಿದರೆ 124 ನಿಮಿಷ, 1ಜಿಬಿ ಡೇಟಾ, ರೂ. 20 ಪ್ಲಾನ್ ಗೆ 249 ನಿಮಿಷ, 2ಜಿಬಿ ಡೇಟಾ, ರೂ. 50 ಪ್ಲಾನ್ ಗೆ 656 ನಿಮಿಷ, 5ಜಿಬಿ ಡೇಟಾ, ರೂ. 100 ಪ್ಲಾನ್ ಹಾಕಿದರೆ 1326 ನಿಮಿಷ, 10 ಡೇಟಾ ಸಿಗಲಿದೆ.

ನಷ್ಟ ಸರಿದೂಗಿಸಲು ಗ್ರಾಹಕರಿಗೆ ಬರೆ!
 

ನಷ್ಟ ಸರಿದೂಗಿಸಲು ಗ್ರಾಹಕರಿಗೆ ಬರೆ!

ಪ್ರಾರಂಭದಲ್ಲಿ ಜಿಯೋ ಉಚಿತ ಸೌಲಭ್ಯ ನೀಡಿದ್ದ ಹಿನ್ನೆಲೆಯಲ್ಲಿ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸೂಚನೆಯಂತೆ ಏರ್ಟೆಲ್, ವೋಡಾಫೋನ್-ಐಡಿಯಾ ಟೆಲಿಕಾಂ ಕಂಪನಿಗಳಿಗೆ ಐಯುಸಿ ಶುಲ್ಕವಾಗಿ ರೂ. 13,500 ಕೋಟಿ ಪಾವತಿಸಿದೆ. ಈ ನಷ್ಟವನ್ನು ಸರಿದೂಗಿಸಲು ತನ್ನ ಗ್ರಾಹಕರು ಮಾಡುವ ವಾಯ್ಸ್ ಕರೆಗಳಿಗೆ ದರ ವಿಧಿಸಲು ಮುಂದಾಗಿದೆ.

ಜಿಯೋ ಪೈಬರ್ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಪಡೆಯುವುದು ಹೇಗೆ?

ಜಿಯೋ ಪೈಬರ್ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಪಡೆಯುವುದು ಹೇಗೆ?

ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಆಪ್ಟಿಕ್ ಫೈಬರ್ ಆಧಾರಿತ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಪ್ರಾರಂಭಸಿದ್ದು, ಕಳೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ), ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಜಿಯೋ ಫೈಬರ್ ಕುರಿತು ಮಾಹಿತಿ ನೀಡಿದ್ದರು.

ಬ್ರಾಡ್ಬ್ಯಾಂಡ್ ವ್ಯವಹಾರವನ್ನು ಕಾರ್ಯಗತಗೊಳಿಸಿದ ಮೊದಲ ವರ್ಷದೊಳಗೆ ಜಿಯೋ 35 ಮಿಲಿಯನ್ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಲಾಂಚ್ ಆದ ಮೊದಲ ದಿನದಿಂದ ಕಂಪನಿಯು 1,600 ಪಟ್ಟಣಗಳನ್ನು ಗುರಿಯಾಗಿಸಲಿದ್ದು, ಆರಂಭದಲ್ಲಿ 30,000 ಸ್ಥಳೀಯ ಕೇಬಲ್ ಆಪರೇಟರ್‌ಗಳ ಮೂಲಕ ದೇಶದ ಇತರ ಭಾಗಗಳನ್ನು ತಲುಪಲು ಪ್ರಯತ್ನಿಸಲಾಗುತ್ತಿದೆ.

ಜಿಯೋ ಫೈಬರ್ ಪ್ಲಾನ್

ಜಿಯೋ ಫೈಬರ್ ಪ್ಲಾನ್

ಕಂಪನಿಯು ಇನ್ನೂ ಅಧಿಕೃತ ಯೋಜನೆ ವಿವರಗಳನ್ನು ಬಹಿರಂಗಪಡಿಸದಿದ್ದರೂ, ರಿಲಯನ್ಸ್ ಜಿಯೋ ಯೋಜನೆಗಳು ತಿಂಗಳಿಗೆ ರೂ. 700 ಮತ್ತು ರೂ. 10,000 ವರೆಗೆ ಇರಲಿದೆ ಎಂದು ಸ್ಪಷ್ಟಪಡಿಸಿದೆ. ಗ್ರಾಹಕರು ಆಯ್ಕೆ ಮಾಡುವ ಯೋಜನೆಗೆ ಅನುಗುಣವಾಗಿ ವೇಗವು 100 Mbps ನಿಂದ 1Gbps ವರೆಗೆ ಬದಲಾಗುತ್ತದೆ.

ಜಿಯೋ ಫೈಬರ್ ಸಂಪರ್ಕ ಪಡೆಯುವುದು ಹೇಗೆ?

ಜಿಯೋ ಫೈಬರ್ ಸಂಪರ್ಕ ಪಡೆಯುವುದು ಹೇಗೆ?

1. ಜಿಯೋ ಫೈಬರ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

2. ಜಿಯೋ ಫೈಬರ್ ಸಂಪರ್ಕಕ್ಕಾಗಿ ನಿಮ್ಮ ವಿಳಾಸವನ್ನು ನಮೂದಿಸಿ

3. ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನಮೂದಿಸಿ

4. 'ಒಟಿಪಿ ಜನರೇಟ್' ಮೇಲೆ ಕ್ಲಿಕ್ ಮಾಡಿ

5. ನಿಮ್ಮ ಫೋನ್‌ನಲ್ಲಿ ಸ್ವೀಕರಿಸಿದ ಒಟಿಪಿ ನಮೂದಿಸಿ

6. ಎಲ್ಲಾ ಮಾಹಿತಿಯನ್ನು ಪರಿಶೀಲಿಸಲು ಮತ್ತು ಇತರ ವಿವರಗಳನ್ನು ಹಂಚಿಕೊಳ್ಳಲು ರಿಲಯನ್ಸ್ ಜಿಯೋ ಕಾರ್ಯನಿರ್ವಾಹಕ ನಿಮ್ಮ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ನಿಮ್ಮ ಹತ್ತಿರದ ರಿಲಯನ್ಸ್ ಜಿಯೋ ಸ್ಟೋರ್, ಜಿಯೋ ಕೇರ್ ಸಂಪರ್ಕಿಸಬಹುದು. ಇಲ್ಲವೆ ಜಿಯೋ ವೆಬ್ಸೈಟ್ ಮೂಲಕ ಗ್ರಾಹಕರು ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು.

ಇನ್ಸ್ಟಾಲೆಶನ್ ಪ್ರಕ್ರಿಯೆ

ಇನ್ಸ್ಟಾಲೆಶನ್ ಪ್ರಕ್ರಿಯೆ

ಜಿಯೋ ಫೈಬರ್ ಆರಂಭಿಕ ಭಾಗವಾಗಿ ಎಲ್ಲ ಗ್ರಾಹಕರಿಗೆ ಪೂರಕ ಜಿಯೋಫೈಬರ್ ಇನ್ಸ್ಟಾಲೇಶನ್ ಮತ್ತು ಕನೆಕ್ಷನ್ ಅನ್ನು ಉಚಿತವಾಗಿ ನೀಡುತ್ತಿದ್ದೇವೆ. ಮರುಪಾವತಿಸಬಹುದಾದ ಭದ್ರತಾ ಠೇವಣಿ ಹೊರತುಪಡಿಸಿ, ಈಗಿನಂತೆ ಯಾವುದೇ ಹೆಚ್ಚುವರಿ ಇನ್ಸ್ಟಾಲೆಶನ್ ಶುಲ್ಕಗಳಿಲ್ಲ ಎಂದು ಜಿಯೋ ತನ್ನ ವೆಬ್ಸೈಟ್‌ನಲ್ಲಿ ತಿಳಿಸಿದೆ.

ಭದ್ರತಾ ಠೇವಣಿ ಇಡಬೇಕು

ಭದ್ರತಾ ಠೇವಣಿ ಇಡಬೇಕು

ಜಿಯೋ ಯಾವುದೇ ಇನ್ಸ್ಟಾಲೆಶನ್ ಶುಲ್ಕಗಳನ್ನು ತೆಗೆದುಕೊಳ್ಳುತ್ತಿಲ್ಲವಾದರೂ, ಜಿಯೋ ಫೈಬರ್ ರೂಟರ್‌ಗಾಗಿ ರೂ. 2,500 ಭದ್ರತಾ ಠೇವಣಿ ಇಡಬೇಕು. ಇದನ್ನು ಮರುಪಾವತಿಸಲಾಗುತ್ತದೆ.

ಫೈಬರ್ ಟು ದಿ ಹೋಮ್ (ಎಫ್‌ಟಿಟಿಎಚ್) ತಂತ್ರಜ್ಞಾನವನ್ನು ಬಳಸಿಕೊಂಡು, ಜಿಯೋ ಫೈಬರ್‌ನ ಸಂಪೂರ್ಣ ಪುಷ್ಪಗುಚ್ಚ ಸೇವೆಗಳನ್ನು ಒಂದೇ ಫೈಬರ್ ಆಪ್ಟಿಕ್ ಕೇಬಲ್ ಮೂಲಕ ಒದಗಿಸಲಾಗುತ್ತದೆ. ಜಿಯೋ ಫೈಬರ್‌ನ ಅಲ್ಟ್ರಾ-ಫಾಸ್ಟ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವು ತಡೆರಹಿತ ಯುಹೆಚ್ಡಿ ವಿಡಿಯೋ ಸೇವೆಗಳು, ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ವಿವಿಧ ಕ್ಯಾಮೆರಾ ಅಪ್ಲಿಕೇಶನ್‌ಗಳನ್ನು ಸಕ್ರಿಯಗೊಳಿಸುತ್ತದೆ.

ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಗಳಲ್ಲಿ ಉಚಿತ ಧ್ವನಿ ಕರೆಗಳು ಸೇರಿವೆ?

ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಗಳಲ್ಲಿ ಉಚಿತ ಧ್ವನಿ ಕರೆಗಳು ಸೇರಿವೆ?

ಲ್ಯಾಂಡ್‌ಲೈನ್ ಸೇವೆಗಳು ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ಸೇರಿಕೊಳ್ಳುತ್ತವೆ. ಜಿಯೋ ಹೋಮ್ ಫೋನ್ ಎಂದು ಕರೆಯಲ್ಪಡುವ ಈ ಸೇವೆಯು ದೇಶೀಯ ಫೋನ್ ಬಳಕೆದಾರರಿಗೆ ಉಚಿತ ಕರೆಗಳನ್ನು ಮತ್ತು ಕೈಗೆಟುಕುವ ಅಂತರರಾಷ್ಟ್ರೀಯ ಕರೆಗಳನ್ನು ನೀಡುತ್ತದೆ.

ಕಂಟೆಂಟ್ ಕೊಡುಗೆಗಳು

ಕಂಟೆಂಟ್ ಕೊಡುಗೆಗಳು

ರಿಲಯನ್ಸ್ ಜಿಯೋ ಟೆಲಿಕಾಂ ಸೇವೆಯಂತೆ, ಎಲ್ಲಾ ಜಿಯೋ ಫೈಬರ್ ಗ್ರಾಹಕರು ಜಿಯೋ ಟಿವಿ ಮತ್ತು ಜಿಯೋ ಸಿನೆಮಾದಂತಹ ಕಂಟೆಂಟ್ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ. ಇದಲ್ಲದೆ, ಗ್ರಾಹಕರು ಹಲವಾರು ತೃತೀಯ ಸ್ಟ್ರೀಮಿಂಗ್ ಸೇವೆಗಳಿಗೆ ಉಚಿತ ಪ್ರವೇಶವನ್ನು ಪಡೆಯುವ ನಿರೀಕ್ಷೆಯಿದೆ.

JioTV, JioCinema, JioSaavn ಮತ್ತು ಹೆಚ್ಚಿನ ಎಲ್ಲಾ ಅಪ್ಲಿಕೇಶನ್‌ಗಳನ್ನು ಚಂದಾದಾರರು ಪಡೆಯಲು ಸಾಧ್ಯವಾಗುತ್ತದೆ. ವೀಡಿಯೊ ಕರೆಗಾಗಿ, ಚಂದಾದಾರರು ತಮ್ಮ ಟಿವಿಗೆ ಕ್ಯಾಮೆರಾವನ್ನು ಪಡೆಯಬೇಕಾಗುತ್ತದೆ ಮತ್ತು ಅವರು ನಾಲ್ಕು ಜನರೊಂದಿಗೆ ಏಕಕಾಲದಲ್ಲಿ ಮಾತನಾಡಬಹುದು.

ಜಿಯೋ ಪೋನ್ ದೀಪಾವಳಿ ಆಫರ್! ಕೇವಲ ರೂ. 699ಕ್ಕೆ 4G ಪೋನ್ ಪಡೆಯಿರಿ

Read more about: jio reliance jio telecom airtel money
English summary

Bad news for Jio users, calls to rival networks won't be free anymore

Reliance Jio on Wednesday announced it will charge customers 6 paise per minute for voice calls made to rival phone networks.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more