For Quick Alerts
ALLOW NOTIFICATIONS  
For Daily Alerts

ಆಟೋ ವಲಯದ ಹಿನ್ನಡೆ ಹಿಂದಿನ ಅಂಶಗಳು

|

ಆರ್ಥಿಕ ಹಿಂಜರಿತ - ಇದು ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ವಿವಿಧ ದೇಶಗಳ ಆರ್ಥಿಕತೆಯ ವ್ಯಾಪ್ತಿಯೊಳಗೆ ಪ್ರವೇಶಿಸುತ್ತಿರುತ್ತದೆ ಅಥವಾ ಅವಕಾಶಕ್ಕೆ ಇಣುಕಿ ನೋಡುತ್ತಿರುತ್ತದೆ. ಆರ್ಥಿಕ ಹಿಂಜರಿಕೆ ಸಂದರ್ಭದಲ್ಲಿ ಪ್ರಮುಖವಾಗಿ ಹೆಚ್ಚು ಪ್ರಭಾವಕ್ಕೊಳಗಾಗುವ ವಲಯಗಳೆಂದರೆ ರಿಯಲ್ ಎಸ್ಟೇಟ್ ಮತ್ತು ಆಟೋ ಸೆಕ್ಟಾರ್ ಗಳಾಗಿರುತ್ತವೆ. ಜನ ಸಾಮಾನ್ಯರ ಮೇಲೆ ಮತ್ತು ಆರ್ಥಿಕ ತಜ್ಞರ ಕಣ್ಣಿಗೆ ಮೊದಲು ಗೋಚರಿಸುವುದು ಆಟೋ ವಲಯ. ಇದಕ್ಕೆ ಕಾರಣ ಪ್ರಮುಖವಾಗಿ ಈ ವಲಯದಲ್ಲಿ ಸುಮಾರು ಮೂರರಿಂದ ನಾಲ್ಕು ಕೋಟಿ ಉದ್ಯೋಗಿಗಳು ತೊಡಗಿಸಿಕೊಂಡಿರುತ್ತಾರೆ. ಅಲ್ಲದೆ ಆರ್ಥಿಕತೆಯ ಉತ್ಪಾದನಾ ವಲಯದ ಶೇ 50 ರಷ್ಟ ಆಟೋ ವಲಯದ ಕೊಡುಗೆಯಾಗಿರುತ್ತದೆ. ಈ ಗಾತ್ರದ ಅಂಶಗಳು ಒಳಗೊಂಡಿರುವುದರಿಂದ ಆಟೋ ವಲಯದ ಬೆಳವಣಿಗೆಯು ಆರ್ಥಿಕ ಸ್ಥಿರತೆ, ಬೆಳವಣಿಗೆ, ಹಿಂಜರಿತಗಳ ಮೇಲೆ ಹೆಚ್ಚು ಪ್ರಭಾವಿಯಾಗಿರುತ್ತದೆ.

ಆಟೋ ವಲಯದ ಹಿನ್ನಡೆ ಹಿಂದಿನ ಅಂಶಗಳು

 

ಪ್ರಯಾಣಿಕರ ಕಾರುಗಳ ಮಾರಾಟದ ಪ್ರಮಾಣವು ಶೇ.24 ರಷ್ಟು ಮತ್ತು ವಾಣಿಜ್ಯ ಸಾಗಾಣಿಕೆ ವಾಹನಗಳ ಮಾರಾಟದ ಪ್ರಮಾಣವು ಶೇ.62 ರಷ್ಟು ಕುಸಿದಿದೆ ಎಂಬ ಸಧ್ಯದ ಸಮಾಚಾರ ಹೆಚ್ಚಿನವರನ್ನು ಬೆಚ್ಚಿ ಬೀಳಿಸಿದೆ. ಅಲ್ಲದೆ ದ್ವಿಚಕ್ರ ವಾಹನಗಳ ಮಾರಾಟದ ಪ್ರಮಾಣವು ಸಹ ಶೇ.22 ರಷ್ಟು ಕುಸಿದಿದೆ. ಈಗಾಗಲೇ ಹೆಚ್ಚಿನ ಉತ್ಪಾದಕ ಕಂಪನಿಗಳು ತಮ್ಮಲ್ಲಿರುವ ದಾಸ್ತಾನನ್ನು ಕರಗಿಸಿಕೊಳ್ಳಲು ಉತ್ಪಾದನಾ ದಿನಗಳನ್ನು ಕಡಿತಗೊಳಿಸುತ್ತಿವೆ. ಇದು ಹೆಚ್ಚು ಆತಂಕಕಾರಿಯಾಗಿ ಪರಿಣಮಿಸಿದೆ. ಆಟೋ ವಲಯ ನಮ್ಮ ಆರ್ಥಿಕತೆಗೆ ಹೆಚ್ಚು ಕೊಡುಗೆ ನೀಡುತ್ತಾ ಹೇಗೆ ಬೆಳೆದಿದೆ ಎಂದರೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಬಿ ಎಸ್ ಇ ಆಟೋ ಇಂಡೆಕ್ಸ್ 2008 ರಲ್ಲಿ 2,127 ರಲ್ಲಿತ್ತು. ಅಲ್ಲಿಂದ ಮಿಂಚಿನ ವೇಗದಲ್ಲಿ ಬೆಳವಣಿಗೆ ಕಂಡು 2017 ರ ಡಿಸೆಂಬರ್ ನಲ್ಲಿ 27,031 ಪಾಯಿಂಟುಗಳಿಗೆ ಜಿಗಿತ ಕಂಡಿದೆ. ಅಂದರೆ ಸುಮಾರು ಒಂಬತ್ತು ವರ್ಷಗಳಲ್ಲಿ 13 ಪಟ್ಟು ಬೆಳವಣಿಗೆಯಾಗಿದೆ. ಈ ಮಟ್ಟದ ಪ್ರಗತಿಗೆ ಸಮಾನಾಂತರವಾಗಿ ಮೂಲಭೂತ ಸೌಕರ್ಯಗಳು ಅಭಿವೃದ್ಧಿ ಕಾಣದೆ ಇರುವುದು ಇಂದಿನ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ. ಈ ರೀತಿಯ ಅನಿರೀಕ್ಷಿತ ಬೆಳವಣಿಗೆಯು ವಾಹನವಲಯದ ವಿಜೃಂಭಣೆಗೆ ಕಾರಣವಾಯಿತಾದರೂ ಸ್ಥಿರತೆ ಕಾಣದಾಯಿತು. ಡಿಸೆಂಬರ್ 2017ರಲ್ಲಿ ಮಾರುತಿ ಸುಜುಕಿ ಷೇರಿನ ದರವು ರೂ.10,000 ದ ಗಡಿ ತಲುಪಿತ್ತು. ಐಶರ್ ಮೋಟಾರ್ ರೂ.31,000 ಸಾವಿರದ ಗಡಿ ದಾಟಿತ್ತು. ಬಜಾಜ್ ಆಟೋ ಷೇರಿನ ದರ ರೂ.3,380 ರ ಸಮೀಪವಿತ್ತು. ಮಹಿಂದ್ರಾ ಅಂಡ್ ಮಹಿಂದ್ರಾ ಷೇರಿನ ದರ ರೂ.1,570 ರಲ್ಲಿತ್ತು. ಟಿವಿಎಸ್ ಮೋಟಾರ್ ರೂ.792 ರಲ್ಲಿತ್ತು. ಇವುಗಳ ಜೊತೆಗೆ ವಲಯದ ಇತರೆ ಕಂಪನಿಗಳಾದ ಅಶೋಕ್ ಲೇಲ್ಯಾಂಡ್ , ಟಾಟಾ ಮೋಟಾರ್, ಕಮ್ಮಿನ್ಸ್ ಇಂಡಿಯಾ, ಮದರ್ ಸನ್ ಸುಮಿ, ಬಾಲಕೃಷ್ಣ ಇಂಡಸ್ಟ್ರೀಸ್, ಬಾಷ್, ಎಂ ಆರ್ ಎಫ್, ಅಪೋಲೋ ಟೈರ್ ಗಳು ಸಹ ಅಂದಿನ ಬೆಲೆಗಿಂತ ಸುಮಾರು ಶೇ.30 ರಿಂದ 50 ರವರೆಗೂ ಕುಸಿದಿವೆ. ಇದು ಕಳೆದ 22 ತಿಂಗಳ ಹಿಂದಿನ ಪರಿಸ್ಥಿತಿಯಾಗಿದೆ. 2017 ರ ಡಿಸೆಂಬರ್ ನಲ್ಲಿ ಬಿ ಎಸ್ ಇ ಆಟೋ ಇಂಡೆಕ್ಸ್ ದಾಖಲಿಸಿದ ಸರ್ವಕಾಲೀನ ಗರಿಷ್ಠದ ಹಂತದಿಂದ ತನ್ನ ದಿಶೆ ಬದಲಿಸಿಕೊಂಡು ಇಳಿಯತೊಡಗಿದೆ. ಕಳೆದ ತಿಂಗಳ ಅಂದರೆ ಸೆಪ್ಟೆಂಬರ್ 4 ರಂದು 15,169 ಪಾಯಿಂಟುಗಳಿಗೆ ಕುಸಿದು ವಾರ್ಷಿಕ ಕನಿಷ್ಟಕ್ಕೆ ಬಂದು ಸಧ್ಯ ಶುಕ್ರವಾರ 11 ನೇ ಅಕ್ಟೊಬರ್ 16,575 ಪಾಯಿಂಟುಗಳಲ್ಲಿ ಕೊನೆಗೊಂಡಿದೆ. ಡಿಸೆಂಬರ್ 2017 ರ ಗರಿಷ್ಠದ ನಂತರ ವಾಹನವಲಯದ ಸೂಚ್ಯಂಕವು ಕುಸಿಯುತ್ತಲೇ ಇದೆ. ಸರ್ವಕಾಲೀನ ಗರಿಷ್ಠದ ಹಂತದಿಂದ ಸುಮಾರು 40% ಕ್ಕೂ ಹೆಚ್ಚು ಕುಸಿದಿದ್ದು, ಈಗ ಆ ಕುಸಿತದ ಪ್ರಭಾವವು ಆರ್ಥಿಕತೆಗೆ ತಟ್ಟಿದೆ.

 

ಒಂದು ಮುಖ್ಯವಾದ ಅಂಶವನ್ನು ಹೂಡಿಕೆದಾರರು ಗಮನದಲ್ಲಿರಿಸಬೇಕಾದುದು ಅತ್ಯವಶ್ಯಕ. ಷೇರುಪೇಟೆಯ ಚಟುವಟಿಕೆಯ ಪರಿಯನ್ನು ಪೂರ್ವ ನಿರ್ಧಾರಿತ ಹಾದಿಯಲ್ಲಿರುತ್ತದೆಂದು ಭಾವಿಸುವುದು ತಪ್ಪು. ಕಾರಣ ಇಲ್ಲಿ ನಡೆಯುವುದು ಹೆಚ್ಚಾಗಿ ವ್ಯಾವಹಾರಿಕ ಚಟುವಟಿಕೆ, ಯಾರಿಗೂ ಬಾಂಧವ್ಯದ ಬೆಸುಗೆ ಇರುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಶುಕ್ರವಾರ ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಮತ್ತು ಸಿಪ್ಲಾ ಗಳು ಪ್ರದರ್ಶಿಸಿದ ಏರಿಳಿತಗಳ ರಭಸವಾಗಿದೆ. ಈ ತಿಂಗಳ 18 ರಂದು ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಸಾಧನೆಯ ಅಂಕಿ ಅಂಶಗಳನ್ನು ಪ್ರಕಟಿಸಲಿರುವುದರಿಂದ ಮುಂಚಿತವಾಗಿಯೇ ಈ ಷೇರಿನ ಬೆಲೆಯನ್ನು ಸುಮಾರು ವಾರ್ಷಿಕ ಗರಿಷ್ಠದ ಮಟ್ಟಕ್ಕೆ ಏರಿಕೆ ಕಾಣುವಂತೆ ಮಾಡಲಾಗಿದೆ. ಒಂದು ತಿಂಗಳಲ್ಲಿ ಈ ಷೇರಿನ ಬೆಲೆ ರೂ.1,174ರ ಸಮೀಪದಿಂದ ರೂ.1,360 ರವರೆಗೂ ಏರಿಕೆ ಕಂಡಿದೆ. ಕಂಪನಿಗಳು ಭಾರಿ ಪ್ರಮಾಣದ ಲಾಭ ಗಳಿಕೆ ಮಾಡಿದರು ಸಹ ಲಾಭಾಂಶ ಪ್ರಕಟಣೆ ಮಾತ್ರ ಕಾಣುತ್ತಿಲ್ಲ. ಇದು ಹೂಡಿಕೆದಾರರಲ್ಲಿ ರಾಯಲ್ಟಿ ಯ ಗುಣವನ್ನು ಲಾಯಲ್ಟಿಗೆ ಪರ್ಯಾಯವಾಗಿ ಬಿತ್ತುತ್ತಿದೆ.

ಒಟ್ಟಾರೆ ಇಂದಿನ ಆಟೋ ವಲಯದ ಹಿನ್ನಡೆಗೆ ನಮ್ಮಲ್ಲಿನ ಆಡಳಿತ ವ್ಯವಸ್ಥೆಯೇ ಕಾರಣ ಎನ್ನಬಹುದು. ವಲಯದ ಬೆಳವಣಿಗೆಗನುಗುಣವಾಗಿ ಸುಗಮ ಸಂಚಾರಕ್ಕೆ ರಸ್ತೆ ಸೌಲಭ್ಯವನ್ನು ನಿರ್ಮಿಸಿಕೊಟ್ಟಲ್ಲಿ ಮಾತ್ರ ಈ ತೊಂದರೆ ನಿವಾರಣೆಯಾಗ ಬಹುದು ಇಲ್ಲದಿದ್ದಲ್ಲಿ ಈ ತೊಂದರೆ ನಿರಂತರ.

Read more about: automobile money economy
English summary

Factors behind the auto sector setback

Auto sector is in crisis. it is being highlighted because this sector Contributes 50% of manufacturing catagory contribution to the economy.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more