For Quick Alerts
ALLOW NOTIFICATIONS  
For Daily Alerts

ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಲು ರಾಯಲ್ ‘ಅತುಲ್ಯ’ ಆಭರಣಗಳು

|

ಮುಂಬೈ, ಅಕ್ಟೋಬರ್ 24: ರಿಲಯನ್ಸ್ ಜ್ಯುವೆಲ್ಸ್‌ನ ದೀಪಾವಳಿ ಹಬ್ಬದ ಸಂಭ್ರಮವನ್ನು ಇನಷ್ಟು ಹೆಚ್ಚು ಮಾಡಲು, ತನ್ನ ಗ್ರಾಹಕರ ಮನಸ್ಸು ಗೆಲ್ಲಲು ರಾಯಲ್ ಟಚ್ ಇರುವ ಆಭರಣಗಳ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಮೊಘಲ್ ಯುಗದ ಅರಮನೆಗಳ ಶ್ರೀಮಂತ ಮತ್ತು ಸಂಕೀರ್ಣವಾದ ವಾಸ್ತುಶಿಲ್ಪದಿಂದ ಕೂಡಿದ ಮತ್ತು ರಾಜಸ್ಥಾನದ ರಾಯಧನದಿಂದ ಸ್ಫೂರ್ತಿ ಪಡೆದು ನಿರ್ಮಿಸಲಿರುವ ಹೊಚ್ಚಹೊಸ 'ಅತುಲ್ಯ' ಆರಭರಣ ಸಂಗ್ರಹವನ್ನು ಬಿಡುಗಡೆ ಮಾಡಿದೆ.

ಕೈಯಿಂದ ರಚಿಸಲಾದ ಅತುಲ್ಯ ಆಭರಣ ಸಂಗ್ರಹವನ್ನು ಈ ಹಬ್ಬದ ಋತುವಿನ ಸಂಭ್ರಮವನ್ನು ಆಚರಿಸಲು ವಿಶೇಷವಾಗಿ ವಿನ್ಯಾಸಗೊಳಿಸಿದೆ. ಈ ಸಂಗ್ರಹವು ಪುರಾತನ ವಿನ್ಯಾಸದಿಂದ ಮಾಡಲಾಗಿರುವ 22 Kt ಚಿನ್ನದ ಸ್ಟೇಟ್‌ಮೆಂಟ್ ಹೊಂದಿರುವ ನೆಕ್ಲೇಸ್ ಸೆಟ್‌ಗಳ ಜೊತೆಗೆ 18 Kt ಚಿನ್ನ ಮತ್ತು ಡೈಮಂಡ್ ಸ್ಟಡ್ಡ್ ಸೆಟ್‌ಗಳನ್ನು ಒಳಗೊಂಡಿದೆ. ಅತುಲ್ಯ ಸಂಗ್ರಹದಲ್ಲಿ ಚೋಕರ್‌ಗಳು, ಸಣ್ಣ ಮತ್ತು ಉದ್ದನೆಯ ಶೈಲಿಯ ಹಾರಗಳು ಮತ್ತು ಇತರ ಶೈಲಿಗಳ ಆಭರಣಗಳನ್ನು ಕಾಣಬಹುದಾಗಿದ್ದು, ಪ್ರತಿಯೊಬ್ಬರಿಗೂ ಹಬ್ಬದ ಸಂದರ್ಭದಲ್ಲಿ ವಿವಿಧ ಮಾದರಿಯ ಧಿರಿಸುಗಳಿಗೆ ಸರಿಕಾಣುವ ಆರಭರಣಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ.

 

ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರಗಳು ಸ್ಥಿರವಾಗಿವೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಬೆಂಗಳೂರಲ್ಲಿ 39,450ರು ನಷ್ಟಿದೆ. ಬೆಳ್ಳಿ 1 ಕೆಜಿ ಬೆಲೆ 48,900ರು ನಷ್ಟಿದೆ. ಇಂದಿನ ದರ ಪಟ್ಟಿಯಂತೆ ನಿಮ್ಮ ನಗರಗಳಲ್ಲಿ ಬೆಲೆ ಎಷ್ಟಿದೆ ನೋಡಲು ಕ್ಲಿಕ್ ಮಾಡಿ.

ಭಾರತೀಯ ಪರಂಪರೆ ಅನಾವರಣ

ಭಾರತೀಯ ಪರಂಪರೆ ಅನಾವರಣ

ಭಾರತದ ಅತ್ಯಂತ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪಿಯ ಶ್ರೀಮಂತ ರಾಜ್ಯಗಳಲ್ಲಿ ಒಂದಾದ ರಾಜಸ್ಥಾನದಿಂದ ಸ್ಫೂರ್ತಿ ಪಡೆದುಕೊಂಡು ಅತುಲ್ಯ ಸಂಗ್ರಹದ ಆಭರಣಗಳನ್ನು ನಿರ್ಮಿಸಲಾಗಿದೆ. ರಾಜಸ್ಥಾನದ ಅರಮನೆಗಳು ಮತ್ತು ಬ್ಲಾಕ್ ಪ್ರಿಂಟಿಂಗ್‌ನ ಸೊಗಸಾದ ತುಣುಕುಗಳನ್ನು ಅತುಲ್ಯ ಸಂಗ್ರಹದಲ್ಲಿ ಸುಂದರವಾಗಿ ವ್ಯಕ್ತಪಡಿಸಲಾಗಿದೆ. ವಿನ್ಯಾಸ ಮತ್ತು ಕರಕುಶಲತೆಯೊಂದಿಗೆ ಸಂಗ್ರಹವು ಬಣ್ಣದ ಕಲ್ಲುಗಳಿಂದ ರಾಜಸ್ಥಾನದ ಭವ್ಯತೆ ಮತ್ತು ರಾಯಧನ ಭವ್ಯತೆಯನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ತುಣುಕು ಅಧಿಕೃತ ಭಾರತೀಯ ಪರಂಪರೆಯ ಅದ್ಭುತ ಉದಾಹರಣೆಯಾಗದೆ ಮತ್ತು ಈ ಆರಭರಣಗಳು ಎಲ್ಲಾ ಸಂಸ್ಕೃತಿಯ ಉಡುಗೆಗಳಿಗೆ ಸೂಕ್ತವಾಗಿ ಸರಿಹೊಂದಲಿದೆ.

ಡೈಮಂಡ್ ಜ್ಯುವೆಲ್ಲರಿ ಮೇಕಿಂಗ್

ಡೈಮಂಡ್ ಜ್ಯುವೆಲ್ಲರಿ ಮೇಕಿಂಗ್

ಈ ದೀಪಾವಳಿಯ ಅಂಗವಾಗಿ ರಿಲಯನ್ಸ್ ಜ್ಯುವೆಲ್ಸ್ ತನ್ನ ಬಳಕೆದಾರರಿಗೆ ವಿಶೇಷ ಕೊಡುಗೆಗಳನ್ನು ನೀಡಲು ಮುಂದಾಗಿದೆ. ಗೋಲ್ಡ್ ಜ್ಯುವೆಲ್ಲರಿ ತಯಾರಿಕೆಯ ಮೇಲೆ ಫ್ಲಾಟ್ 25% ಕಡಿತವನ್ನು ನೀಡುತ್ತಿದ್ದು, ಇದಲ್ಲದೇ 25% ವರೆಗೆ ಡೈಮಂಡ್ ಜ್ಯುವೆಲ್ಲರಿ ಮೇಕಿಂಗ್ ಮೇಲೆ ಕಡಿತದ ಲಾಭವನ್ನು ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದು. ಇದರೊಂದಿಗೆ ಗೋಲ್ಡ್ ಕಾಯಿನ್‌ಗಳ ತಯಾರಿಕೆಯ ಮೇಲೆ ಫ್ಲಾಟ್ 25% ಕಡಿತವನ್ನು ರಿಲಯನ್ಸ್ ಜ್ಯುವೆಲ್ಸ್ ನಲ್ಲಿ ಕಾಣಬಹುದಾಗಿದೆ, ಇಷ್ಟು ಮಾತ್ರವಲ್ಲದೇ ಗ್ರಾಹಕರು 2019 ರ ಅಕ್ಟೋಬರ್ 31 ರವರೆಗೆ (ಟಿ & ಸಿ ಅನ್ವಯ) ಚಿನ್ನದ ಆಭರಣ ಮತ್ತು ವಜ್ರದ ಆಭರಣ ತಯಾರಿಕೆ ಹೆಚ್ಚುವರಿ ಮೇಲೆ 5% ಕಡಿತವನ್ನು [5 ಲಕ್ಷಕ್ಕಿಂತ ಹೆಚ್ಚಿನ ಬಿಲ್ ಮೌಲ್ಯ ಪಡೆದುಕೊಳ್ಳಬಹುದಾಗಿದೆ.

ದೀಪಾವಳಿ ಭಾರತದ ಪ್ರಮುಖ ಹಬ್ಬ
 

ದೀಪಾವಳಿ ಭಾರತದ ಪ್ರಮುಖ ಹಬ್ಬ

"ದೀಪಾವಳಿ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಿನ್ನಲೆಯಲ್ಲಿ ಹಬ್ಬದ ಸಂಭ್ರಮದ ಜೊತೆಗೆ ಶಾಪಿಂಗ್ ಸೀಸನ್ ಅನ್ನು ಇನ್ನಷ್ಟು ಸುಂದರವಾಗಿಸಲು ರಿಲಯನ್ಸ್ ಜ್ಯುವೆಲ್ಸ್‌ ತನ್ನ ಗ್ರಾಹಕರಿಗೆ ಸಂಪೂರ್ಣವಾಗಿ ಹೊಸ ಮಾದರಿಯ ಅನುಭವನ್ನು ನೀಡಲು ಮುಂದಾಗಿದೆ. ಇದಕ್ಕಾಗಿಯೇ ಅತುಲ್ಯ ಸಂಗ್ರಹವನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ".

ಶುದ್ಧ ಚಿನ್ನದ ಜೊತೆಗೆ ವಜ್ರ, ಬಣ್ಣದ ಕಲ್ಲುಗಳು

ಶುದ್ಧ ಚಿನ್ನದ ಜೊತೆಗೆ ವಜ್ರ, ಬಣ್ಣದ ಕಲ್ಲುಗಳು

ಈ ಆಭರಣಗಳ ತಯಾರಿಕೆಗೆ ಶುದ್ಧ ಚಿನ್ನದ ಜೊತೆಗೆ ವಜ್ರ, ಬಣ್ಣದ ಕಲ್ಲುಗಳು ಮತ್ತು ಕುಂದನ್ ಅನ್ನು ಚಿನ್ನದೊಂದಿಗೆ ಹೊಂದಿಸಲಾಗಿದೆ. ಈ ಆಭರಣಗಳು ಧರಿಸುವವರಿಗೆ ಸಾಂಪ್ರದಾಯಿಕ ಮತ್ತು ಸಮಕಾಲೀನ ಸುಂದರವಾದ ನೋಟವನ್ನು ಪಡೆಯುವ ಮೂಲಕ ಸಂಭ್ರವನ್ನು ಪಡಬಹುದಾಗಿದೆ. ಈ ಸಂಗ್ರಹದ ಆಭರಣವು ಮಹಿಳೆಯ ಅಂದವನ್ನು ಇನಷ್ಟು ಹೆಚ್ಚಿಸಲಿದ್ದು, ವಿಶಿಷ್ಟ ವಿನ್ಯಾಸಗಳು ಮಹಿಳೆಯರಿಗೆ ಮೆಚ್ಚುಗೆಯಾಗಲಿದೆ.

English summary

Go Royal with Reliance Jewels "Atulyaa" collection

Reliance Jewels’ launch of new “Atulyaa” collection for the festive season.
Story first published: Monday, October 28, 2019, 12:27 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more