For Quick Alerts
ALLOW NOTIFICATIONS  
For Daily Alerts

2021 ಸ್ಕೋಡಾ ಕೊಡಿಯಾಕ್ ಅಧಿಕೃತವಾಗಿ ಬಿಡುಗಡೆ: ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ

|

ಖ್ಯಾತ ಕಾರು ತಯಾರಕ ಸ್ಕೋಡಾ ತನ್ನ ಹೊಸ ಸ್ಕೋಡಾ ಕೊಡಿಯಾಕ್‌ನ ಟೀಸರ್ ಗಳನ್ನು ಬಿಡುಗಡೆ ಮಾಡುವ ಬಹುನಿರೀಕ್ಷಿತ ಕಾರಿನ ಕುರಿತು ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಲಿದೆ.

 

ಕಂಪನಿಯು ಸ್ಕೋಡಾ ಕೊಡಿಯಾಕ್‌ನ ಫೇಸ್‌ಲಿಫ್ಟ್ ರೂಪಾಂತರವನ್ನು ಹಲವು ನವೀಕರಣಗಳೊಂದಿಗೆ ಪರಿಚಯಿಸಿದೆ. ಜೊತೆಗೆ ಈ ಕಾರಿಗೆ ಉತ್ತಮವಾದ ಅಪ್‌ಗ್ರೇಡ್ ಮಾಡಿದ್ದು, ತಂತ್ರಜ್ಞಾನದ ಹೆಚ್ಚಿನ ಬಳಕೆ ಮತ್ತು ಎಸ್‌ಯುವಿಗಳೊಂದಿಗೆ ವಿವಿಧ ರೀತಿಯ ಎಂಜಿನ್‌ಗಳನ್ನು ಹೊಂದಿದೆ. ಇದಲ್ಲದೆ ಈ ಕಾರನ್ನು ಶೀಘ್ರದಲ್ಲೇ ಭಾರತದಲ್ಲಿಯೂ ಪರಿಚಯಿಸಲಾಗುವುದು.

2021 ಸ್ಕೋಡಾ ಕೊಡಿಯಾಕ್ ಅಧಿಕೃತವಾಗಿ ಬಿಡುಗಡೆ

ಇದು ಮುಂಭಾಗದಲ್ಲಿ ಹೊಸ ಬಾನೆಟ್ ಮತ್ತು ಹೊಸ ಗ್ರಿಲ್ ಅನ್ನು ಹೊಂದಿದ್ದು, ಇದು ಮೊದಲಿಗಿಂತಲೂ ಅಗಲ ಮತ್ತು ನೇರವಾಗಿರುತ್ತದೆ. ಈ ಎಸ್‌ಯುವಿ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ಲೈಟ್ ಅನ್ನು ಹೊಂದಿದೆ. ಈ ಎಸ್‌ಯುವಿ ಕಾರನ್ನು 10 ಬಣ್ಣ ಆಯ್ಕೆಗಳನ್ನು ನೀಡಲಾಗಿದೆ.

ಸ್ಕೋಡಾ ಎಸ್‌ಯುವಿ ಈಗ 10.25 ಇಂಚಿನ ವರ್ಚುವಲ್ ಕಾಕ್‌ಪಿಟ್ ಮತ್ತು 9.2 ಇಂಚಿನ ಇನ್ಫೋಟೈನ್‌ಮೆಂಟ್ ವ್ಯವಸ್ಥೆಯನ್ನು ಹೊಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡನ್ನೂ ಹೊಂದಿರುವ ಈ ಎಸ್‌ಯುವಿ 1.5-ಲಿ. ಟಿಎಸ್‌ಐ ಪೆಟ್ರೋಲ್ ಎಂಜಿನ್ 150 ಬಿಎಚ್‌ಪಿ ಶಕ್ತಿಯನ್ನು ನೀಡಿದರೆ, 2.0-ಲೀಟರ್ ಟಿಎಸ್‌ಐ ಎಂಜಿನ್ 190 ಬಿಎಚ್‌ಪಿ ಶಕ್ತಿಯನ್ನು ನೀಡುತ್ತದೆ. 2.0-ಲಿ ಟಿಡಿಐ ಡೀಸೆಲ್ ಎಂಜಿನ್ ಅನ್ನು ಎರಡು ಟ್ಯೂನ್‌ಗಳಲ್ಲಿ 150 ಬಿಹೆಚ್‌ಪಿ ಮತ್ತು 200 ಬಿಹೆಚ್‌ಪಿ ದರದಲ್ಲಿ ನೀಡಲಾಗುತ್ತದೆ.

Read more about: car india ಕಾರು ಭಾರತ
English summary

2021 Skoda Kodiaq Facelift Revealed

Skoda has today unveiled the 2021 Kodiaq facelift globally and it will go on sale around July in Europe before reaching other markets including India.
Story first published: Tuesday, April 13, 2021, 20:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X