For Quick Alerts
ALLOW NOTIFICATIONS  
For Daily Alerts

'ಜಿಯೋ' ಭಾರತವನ್ನ 2ಜಿ ಮುಕ್ತ, 5ಜಿ ಯುಕ್ತವಾಗಿಸಲು ಪ್ರಯತ್ತಿಸುತ್ತಿದೆ: ಮುಖೇಶ್ ಅಂಬಾನಿ

|

ಭಾರತವನ್ನ 2ಜಿ ಮುಕ್ತವಾಗಿಸುವ ಕೆಲಸವನ್ನ ಜಿಯೋ ಮಾಡುತ್ತಿಲ್ಲ, 5ಜಿ ಯುಕ್ತವಾಗಿಸಲು ಪ್ರಯತ್ನಿಸುತ್ತಿದೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ನ ಮುಖ್ಯಸ್ಥ ಮುಖೇಶ್‌ ಅಂಬಾನಿ ಹೇಳಿದ್ದಾರೆ.

 

ವಿಶ್ವದ ಅಗ್ಗದ ಸ್ಮಾರ್ಟ್‌ಫೋನ್ JioPhone Next ಸೆಪ್ಟೆಂಬರ್‌ನಲ್ಲಿ ಬಿಡುಗಡೆ

ರಿಲಯನ್ಸ್ ಇಂಡಸ್ಟ್ರೀಸ್‌ನ 44 ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅಂಬಾನಿ 5ಜಿಗೆ ತ್ವರಿತವಾಗಿ ಮತ್ತು ಯಾವಾಗ ಬೇಕಾದರೂ ಅಪ್‌ಗ್ರೇಡ್‌ ಮಾಡಲು ಜಿಯೋ ಅಗ್ರ ಸ್ಥಾನದಲ್ಲಿದೆ. 5ಜಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ನಾವು 5ಜಿ ಸಾಧನಗಳ ಶ್ರೇಣಿಯನ್ನ ಅಭಿವೃದ್ಧಿಪಡಿಸಲು ಜಾಗತಿಕ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

'ಜಿಯೋ' ಭಾರತವನ್ನ 2ಜಿ ಮುಕ್ತ, 5ಜಿ ಯುಕ್ತವಾಗಿಸಲು ಪ್ರಯತ್ತಿಸುತ್ತಿದೆ

ಗೂಗಲ್ ಸಹಭಾಗಿತ್ವದಲ್ಲಿ ಗೂಗಲ್-ಜಿಯೋ ಸ್ಮಾರ್ಟ್‌ಫೋನ್ ಅನ್ನು ಇದೇ ವೇಳೆಯಲ್ಲಿ ಘೋಷಿಸಲಾಗಿತ್ತು, ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ ಎಂದು ಮುಖೇಶ್ ಅಂಬಾನಿ ಪ್ರಕಟಿಸಿದ್ದಾರೆ. ಹೊಸ ಸ್ಮಾರ್ಟ್‌ಫೋನ್ ಅನ್ನು ಪ್ರಕಟಿಸಿದ ಮುಖೇಶ್ ಅಂಬಾನಿ, ಭಾರತದಲ್ಲಿ 300 ಮಿಲಿಯನ್ ಬಳಕೆದಾರರು ಇನ್ನೂ 2 ಜಿ ಬಳಸುತ್ತಿದ್ದಾರೆ. ಹೊಸ ಸ್ಮಾರ್ಟ್‌ಫೋನ್ 'ಭಾರತ್' '2 ಜಿ ಮುಕ್ತ'ವಾಗಲಿದೆ ಎಂದಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಸವಾಲಿನ ಪರಿಸ್ಥಿತಿಗಳ ನಡುವೆಯು ರಿಲಯನ್ಸ್‌ ರಿಟೇಲ್ 1500 ಹೊಸ ಮಳಿಗೆಗಳನ್ನು ಆರಂಭಿಸಿದೆ. ಇದು ಈ ಅವಧಿಯಲ್ಲಿ ಮಾಡಿದ ಅತಿದೊಡ್ಡ ಚಿಲ್ಲರೆ ವ್ಯಾಪಾರದ ವಿಸ್ತರಣೆಯಾಗಿದೆ. ಈ ಮೂಲಕ ನಮ್ಮ ಮಳಿಗೆಗಳ ಸಂಖ್ಯೆ 12,711ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

English summary

2G Mukt, 5G yukt India: Mukesh Ambani Announces JioPhone Next

Mukesh ambani annouces JioPhone Next and Says The new smartphone will make 'Bharat' '2G Mukt'
Story first published: Thursday, June 24, 2021, 18:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X