For Quick Alerts
ALLOW NOTIFICATIONS  
For Daily Alerts

DHFLನಿಂದ ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ 3,689 ಕೋಟಿ ರುಪಾಯಿ ವಂಚನೆ

|

ದೇಶದ ಮೂರನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 3,689 ಕೋಟಿ ರುಪಾಯಿಯನ್ನು ಬ್ಯಾಂಕೇತರ ಹಣಕಾಸು ಕಂಪನಿಯಾದ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಶನ್ (ಡಿಎಚ್‌ಎಫ್‌ಎಲ್) ವಂಚನೆ ಮಾಡಿರುವುದು ಬಯಲಿಗೆ ಬಂದಿದೆ.

ಮೂರು ವರ್ಷಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವರದಿ ಮಾಡಿದ ನಾಲ್ಕನೇ ಹಗರಣ ಇದು. ಬ್ಯಾಂಕೇತರ ಹಣಕಾಸು ಕಂಪನಿ ದಿವಾನ್ ಹೌಸಿಂಗ್ ಫೈನಾನ್ಸ್ ದಿವಾಳಿತನದ ಪ್ರಕ್ರಿಯೆಯಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 1,246.58 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿದೆ.

ತನ್ನ ಅಧಿಕಾರಿಗಳಿಗೆ ದುಬಾರಿ ಬೆಲೆಯ ಕಾರ್‌ಗಳನ್ನು ಒದಗಿಸಿದ ಪಿಎನ್‌ಬಿತನ್ನ ಅಧಿಕಾರಿಗಳಿಗೆ ದುಬಾರಿ ಬೆಲೆಯ ಕಾರ್‌ಗಳನ್ನು ಒದಗಿಸಿದ ಪಿಎನ್‌ಬಿ

ಪಿಎನ್‌ಬಿ, ಮುಂಬೈನ ದೊಡ್ಡ ಕಾರ್ಪೊರೇಟ್ ಶಾಖೆಯಲ್ಲಿ ಡಿಎಚ್‌ಎಫ್‌ಎಲ್‌ನ ಕಾರ್ಯನಿರ್ವಹಿಸದ ಆಸ್ತಿ ಖಾತೆಯಲ್ಲಿನ ವಂಚನೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗೆ ವರದಿ ಮಾಡಿದೆ.

ಭಾರೀ ನಷ್ಟವಾಗಿತ್ತು.

ಭಾರೀ ನಷ್ಟವಾಗಿತ್ತು.

2018 ರಲ್ಲಿ ಆಭರಣ ವ್ಯಾಪಾರಿ ನೀರವ್ ಮೋದಿ ಅವರನ್ನು ಒಳಗೊಂಡ 11,300 ಕೋಟಿ ರೂ.ಗಳ ವಂಚನೆಯಿಂದ ಸರ್ಕಾರಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಭಾರೀ ನಷ್ಟವಾಗಿತ್ತು.

ವಂಚನೆ ಎಂದು ವರದಿ ಮಾಡಿವೆ

ವಂಚನೆ ಎಂದು ವರದಿ ಮಾಡಿವೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯೂನಿಯನ್ ಬ್ಯಾಂಕ್ ಸೇರಿದಂತೆ ಇತರ ಬ್ಯಾಂಕುಗಳು ಸಹ ದಿವಾನ್ ಹೌಸಿಂಗ್ ಫೈನಾನ್ಸ್ ಖಾತೆಗಳನ್ನು ವಂಚನೆ ಎಂದು ವರದಿ ಮಾಡಿವೆ.

73,500 ಕೋಟಿ ರೂ ಕೆಟ್ಟ ಸಾಲ

73,500 ಕೋಟಿ ರೂ ಕೆಟ್ಟ ಸಾಲ

2019-20ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸುಮಾರು 73,500 ಕೋಟಿ ರೂ.ಗಳ ಒಟ್ಟು ನಿಷ್ಕ್ರಿಯ ಆಸ್ತಿಗಳನ್ನು ಅಥವಾ ಕೆಟ್ಟ ಸಾಲಗಳನ್ನು ವರದಿ ಮಾಡಿದೆ. ಒಟ್ಟು ಸಾಲಗಳ ಶೇಕಡಾವಾರು, ಒಟ್ಟು ಎನ್‌ಪಿಎಗಳು ಶೇಕಡಾ 14.21 ರಷ್ಟಿದ್ದರೆ, ಹಿಂದಿನ ತ್ರೈಮಾಸಿಕದಲ್ಲಿ ಇದು 15.5 ರಷ್ಟಿತ್ತು.

19 ನೇ ವಾರ್ಷಿಕ ಸಾಮಾನ್ಯ ಸಭೆ

19 ನೇ ವಾರ್ಷಿಕ ಸಾಮಾನ್ಯ ಸಭೆ

ಏತನ್ಮಧ್ಯೆ, ಪಂಜಾಬ್ ನ್ಯಾಷನಲ್ ಬ್ಯಾಂಕಿನ 19 ನೇ ವಾರ್ಷಿಕ ಸಾಮಾನ್ಯ ಸಭೆ ಆಗಸ್ಟ್ 4 ಕ್ಕೆ ನಡೆಯಲಿದೆ.

English summary

Punjab National Bank Reports Rs 3689-Crore Dhfl Loans as Fraud

3689 Crore Fraud From DHFL To Punjab National Bank
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X