For Quick Alerts
ALLOW NOTIFICATIONS  
For Daily Alerts

JioFi ಸಲಕರಣೆ ಖರೀದಿಗೆ ರಿಲಯನ್ಸ್ ಜಿಯೋದಿಂದ 5 ತಿಂಗಳ ಉಚಿತ ಡೇಟಾ ಆಫರ್

|

JioFi ಸಲಕರಣೆ ಖರೀದಿ ಮಾಡಬೇಕು ಅಂದುಕೊಳ್ಳುತ್ತಿದ್ದಲ್ಲಿ ರಿಲಯನ್ಸ್ ಜಿಯೋದಿಂದ ಹೊಸ ಕೊಡುಗೆ ನೀಡುತ್ತಿದೆ. ಹೊಸ ಜಿಯೋಫೈ ಸಲಕರಣೆ ಖರೀದಿ ಮಾಡಿದಲ್ಲಿ 5 ತಿಂಗಳ ಅವಧಿಗೆ ಉಚಿತ ಡೇಟಾ ಮತ್ತು ಅನಿಯಮಿತವಾದ ಕಾಲಿಂಗ್ ಸೌಲಭ್ಯ ನೀಡಲಿದೆ. ಹೊಸ ಜಿಯೋಫೈ ಬೆಲೆ 1999 ರುಪಾಯಿ ನಿಗದಿ ಮಾಡಲಾಗಿದೆ. ಫಸ್ಟ್ ರೀಚಾರ್ಜ್ ಕೂಪನ್ (FRC) ನಂತರ ಡೇಟಾ ಮತ್ತು ಕಾಲ್ ಸೌಲಭ್ಯ ದೊರೆಯಲಿದೆ.

 

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಿಲಯನ್ಸ್ ಜಿಯೋದಿಂದ ಈ ಹೊಸ ಆಫರ್ ನೀಡುತ್ತಿದೆ. ಇನ್ನು ಸಲಕರಣೆಯನ್ನು 94 ರುಪಾಯಿ ಇಎಂಐನಿಂದ ಖರೀದಿಸಬಹುದು. ಈ ಹೊಸ ಆಫರ್ ಪಡೆಯಲು ಮೂರು ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು.

ಜಿಯೋ ಫೋನ್ 2 ಸಿಗಲಿದೆ ತಿಂಗಳ ಕಂತು 141 ರು.ಗೆ; ಏನೇನು ಫೀಚರ್ಸ್?

ಅತ್ಯಂತ ಕನಿಷ್ಠ ಮೊತ್ತದ ಮೂರು ಪ್ಲಾನ್ ಗಳಲ್ಲಿ ಒಂದು 199 ರುಪಾಯಿಯದು. ಇದರಲ್ಲಿ 28 ದಿನಗಳಿಗೆ ಒಂದು ದಿನಕ್ಕೆ 1.5 GB ಡೇಟಾ ದೊರೆಯುತ್ತದೆ. ಆಫರ್ ಪಡೆಯಬೇಕು ಎಂದಾದಲ್ಲಿ ಜಿಯೋ ಪ್ರೈಮ್ ಸದಸ್ಯತ್ವವನ್ನು 99 ರುಪಾಯಿಗೆ ಖರೀದಿಸಬೇಕು. ಈ ಪ್ಲಾನ್ ನಲ್ಲಿ 140 ದಿನಗಳಿಗೆ ಪ್ರತಿ ದಿನ 100 ನ್ಯಾಷನಲ್ ಎಸ್ಸೆಮ್ಮೆಸ್ ದೊರೆಯುತ್ತದೆ.

JioFi ಸಲಕರಣೆ ಖರೀದಿಗೆ ರಿಲಯನ್ಸ್ Jioದಿಂದ 5 ತಿಂಗಳ ಉಚಿತ ಡೇಟಾ ಆಫರ್

ಎರಡನೇ ಪ್ಲಾನ್ 249 ರುಪಾಯಿಯದು. ಇದರಲ್ಲಿ ದಿನಕ್ಕೆ 2GB ಡೇಟಾ ದೊರೆಯುತ್ತದೆ. ಮೂಲ ಆಫರ್ ಪ್ರಕಾರ 28 ದಿನದ ವ್ಯಾಲಿಡಿಟಿ ಇರುತ್ತದೆ. ಈ ಪ್ಲಾನ್ ನಲ್ಲಿ ಕೂಡ 99 ರುಪಾಯಿ ಜಿಯೋ ಪ್ರೈಮ್ ಸದಸ್ಯತ್ವ ಪಡೆಯಬೇಕು. ಆಗ 112 ಪ್ರತಿ ದಿನ 100 ನ್ಯಾಷನಲ್ ಎಸ್ಸೆಮ್ಮೆಸ್ ದೊರೆಯುತ್ತದೆ.

ಮೂರನೇ ಪ್ಲಾನ್ 349 ರುಪಾಯಿಯದು. ಇದರಲ್ಲಿ ಪ್ರತಿ ದಿನ 3GB ಡೇಟಾ ದೊರೆಯುತ್ತದೆ. ಮೂಲ ಪ್ಲಾನ್ ಮೌಲ್ಯ 349 ರುಪಾಯಿ. ಈ ಪ್ಲಾನ್ ನಲ್ಲಿ ಕೂಡ 99 ರುಪಾಯಿ ಜಿಯೋ ಪ್ರೈಮ್ ಸದಸ್ಯತ್ವ ಪಡೆಯಬೇಕು. ಬಳಕೆದಾರರಿಗೆ ಪ್ರತಿ ದಿನ 100 ಎಸ್ಸೆಮ್ಮೆಸ್ ನಂತೆ 84 ದಿನಗಳ ಕಾಲ ದೊರೆಯುತ್ತದೆ.

English summary

5 Months Free Data With New JioFi Device; Offer By Reliance Jio

New JioFi purchase offer revealed by Reliance Jio. The company is offering 5 months of free data and unlimited calling. JioFi device priced at ₹1,999.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X