For Quick Alerts
ALLOW NOTIFICATIONS  
For Daily Alerts

YONO ಮೂಲಕ Q2ರಲ್ಲಿ 5500 ಕೋಟಿ ರೀಟೇಲ್ ಸಾಲ ವಿತರಣೆ: SBI ಮುಖ್ಯಸ್ಥ

|

ರೀಟೇಲ್ ಸಾಲ ವಿತರಣೆಯನ್ನು YONO (you only need one) ಡಿಜಿಟಲ್ ಪ್ಲಾಟ್ ಫಾರ್ಮ್ ಮೂಲಕ ವಿತರಣೆ ಮಾಡುವುದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಕಳೆದ ವರ್ಷಕ್ಕಿಂತ ಈ ಬಾರಿಯ ಸೆಪ್ಟೆಂಬರ್ ತ್ರೈಮಾಸಿಕಕ್ಕೆ 83% ಬೆಳವಣಿಗೆಯನ್ನು ಸಾಧಿಸಿದೆ.

ಸಿಎನ್ ಬಿಸಿ ಟಿವಿ18 ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಎಸ್ ಬಿಐ ಮುಖ್ಯಸ್ಥ ದಿನೇಶ್ ಕುಮಾರ್ ಖರ, ಬ್ಯಾಂಕ್ ನಿಂದ 5500 ಕೋಟಿ ರುಪಾಯಿ ರೀಟೇಲ್ ಸಾಲವನ್ನು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ YONO ಮೂಲಕ ವಿತರಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3000 ಕೋಟಿ ವಿತರಿಸಲಾಗಿತ್ತು ಎಂದು ಹೇಳಿದ್ದಾರೆ.

SBIನಿಂದ ಕಾರ್ಡ್ ಗಳ ಮೇಲೆ ಹಬ್ಬದ ಸೀಸನ್ ಗೆ 1000ಕ್ಕೂ ಹೆಚ್ಚು ಆಫರ್

 

ಇನ್ನು ಲಕ್ಷ್ಮೀ ವಿಲಾಸ್ ಬ್ಯಾಂಕ್ ಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವ ಆಲೋಚನೆ ಎಸ್ ಬಿಐಗೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಚೆನ್ನೈ ಮೂಲದ ಖಾಸಗಿ ಬ್ಯಾಂಕ್ ಆದ ಲಕ್ಷ್ಮೀ ವಿಲಾಸ್ ಬ್ಯಾಂಕ್ ನ ಏಳು ನಿರ್ದೇಶಕರು, ಸಿಇಒ ಎಸ್. ಸುಂದರ್ ಹಾಗೂ ಪ್ರವರ್ತಕರಾದ ಕೆ.ಆರ್. ಪ್ರದೀಪ್ ಹಾಗೂ ಎನ್. ಸಾಯಿಪ್ರಸಾದ್ ವಿರುದ್ಧ ಸೆಪ್ಟೆಂಬರ್ 25ರಂದು ಷೇರುದಾರರು ಮತದಾನ ಮಾಡಿದ್ದರು.

YONO ಮೂಲಕ Q2ರಲ್ಲಿ 5500 ಕೋಟಿ ರೀಟೇಲ್ ಸಾಲ ವಿತರಣೆ: SBI ಮುಖ್ಯಸ್ಥ

ಆ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಮೂವರು ಸದಸ್ಯರನ್ನು ನೇಮಿಸಿ, ಬ್ಯಾಂಕ್ ನಡೆಸಲು ಸೂಚಿಸಿತ್ತು. ಮೀತಾ ಮಕಾನ್ ಅವರನ್ನು ಅಧ್ಯಕ್ಷರನ್ನಾಗಿ, ಶಕ್ತಿ ಸಿನ್ಹಾ ಹಾಗೂ ಸತೀಶ್ ಕುಮಾರ್ ಕಲ್ರಾ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.

ದಿನೇಶ್ ಕುಮಾರ್ ಖರ ಮಾತು ಮುಂದುವರಿಸಿ, ರಿಟೇಲ್ ಸೆಗ್ಮೆಂಟ್ ನಲ್ಲಿ ಉತ್ತಮ ಬೆಳವಣಿಗೆ ನಿರೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಸರ್ಕಾರ ಈಚೆಗೆ ಘೋಷಣೆ ಮಾಡಿದ ಕ್ರಮಗಳಿಂದ ಬೇಡಿಕೆ ಸೃಷ್ಟಿಯಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ಸೋಮವಾರದಂದು ಸರ್ಕಾರದಿಂದ ಬಡ್ಡಿರಹಿತವಾದ ಹಬ್ಬದ ಮುಂಗಡವಾಗಿ 10,000 ರುಪಾಯಿಯನ್ನು ಕೇಂದ್ರದ ಎಲ್ಲ ಸಿಬ್ಬಂದಿಗೆ ಘೋಷಿಸಿದೆ. ಆರ್ಥಿಕತೆಯಲ್ಲಿ ಬೇಡಿಕೆ ಸೃಷ್ಟಿಯಾಗಲಿ, ಗ್ರಾಹಕರು ಖರ್ಚು ಮಾಡುವ ಪ್ರಮಾಣ ಹೆಚ್ಚಾಗಲಿ ಎಂದು ಹೀಗೆ ಮಾಡಲಾಗಿದೆ.

ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಾರ್ಪೊರೇಟ್ ಸೆಗ್ಮೆಂಟ್ ನಲ್ಲಿ ಉತ್ತಮ ಬೆಳವಣಿಗೆ ಕಾಣಲಿದೆ. ಕಾರ್ಪೊರೇಟ್ ಗಳು ಹಣ ಸಂಗ್ರಹಕ್ಕಾಗಿ ಬ್ಯಾಂಕ್ ಗಳಿಂದ ಮಾರ್ಕೆಟ್ ಕಡೆಗೆ ಗಮನ ಹರಿಸಿವೆ ಎಂದು ಅವರು ತಿಳಿಸಿದ್ದಾರೆ.

English summary

5500 Crore Retail Loan Disbursed Through YONO In September Quarter, Said SBI Chief

SBI chief Dinesh Kumar Khara said, 5500 crore retail loan disbursed through YONO digital platform in September quarter.
Story first published: Thursday, October 15, 2020, 9:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X