For Quick Alerts
ALLOW NOTIFICATIONS  
For Daily Alerts

7 ವರ್ಷ ಪೂರೈಸಿದ ಮೋದಿ ಸರ್ಕಾರ: ಭಾರತದ ಆರ್ಥಿಕತೆಯು ಸುಧಾರಿಸಿದೆಯೇ?

|

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದು ಏಳು ವರ್ಷಗಳೇ ಉರುಳಿ ಹೋಗಿವೆ. 2014 ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

 

ಮೋದಿ ಅಧಿಕಾರಕ್ಕೆ ಬಂದ ಬಳಿಕ ಹಣದುಬ್ಬರ ನಿಯಂತ್ರಣ, ಆರ್ಥಿಕತೆಯ ಬೆಳವಣಿಗೆ, ಖಾಸಗಿ ಹೂಡಿಕೆ ಹೆಚ್ಚಳ ಸೇರಿದಂತೆ ಅನೇಕ ಅಚ್ಛೇ ದಿನ್ (ಉತ್ತಮ ದಿನಗಳು) ತರುವ ಭರವಸೆಯನ್ನು ಹುಟ್ಟುಹಾಕಿದ್ದರು. ಮೊದಲ ಐದು ವರ್ಷಗಳ ಅವರ ಅವಧಿಯಲ್ಲಿ ಹೇಗೆ ಕಾರ್ಯನಿರ್ಹಿಸಿದರು ಎಂಬುದರ ಹೊರತಾಗಿಯೂ ಮೋದಿ ಅವರು 2019ರಲ್ಲಿ ಮತ್ತೊಮ್ಮೆ ಗೆದ್ದು ಯಶಸ್ಸನ್ನು ಮುಂದುವರಿಸಿದ್ರು.

ಏಳು ವರ್ಷಗಳನ್ನ ಪೂರೈಸಿದ ಮೋದಿ ಸರ್ಕಾರ

ಏಳು ವರ್ಷಗಳನ್ನ ಪೂರೈಸಿದ ಮೋದಿ ಸರ್ಕಾರ

ಕಳೆದ ವಾರ ಭಾರತವು ಮೋದಿ ಅವರ ನಾಯಕತ್ವದಲ್ಲಿ ಏಳು ವರ್ಷಗಳನ್ನು ಪೂರೈಸಿದೆ. 1991 ರಲ್ಲಿ ಆರ್ಥಿಕ ಸುಧಾರಣೆಗಳು ಪ್ರಾರಂಭವಾದಾಗಿನಿಂದ ಭಾರತೀಯ ಸಂಸತ್ತಿನಲ್ಲಿ ಏಕಪಕ್ಷೀಯ ಬಹುಮತದ ಸಂಖ್ಯಾಬಲದಲ್ಲಿ ಆಡಳಿತ ನಡೆಸಿದ ಮೊದಲ ಮತ್ತು ಏಕೈಕ ಭಾರತೀಯ ಪ್ರಧಾನ ಮಂತ್ರಿ ಅವರು ಎಂಬುದನ್ನು ಗಮನಾರ್ಹ. ಹೀಗೆ ಯಾವುದೇ ಬಹುಮತದ ಕೊರತೆಯಿಲ್ಲದಿದ್ದರೂ ಭಾರತವು ಆರ್ಥಿಕ ಶಕ್ತಿಯಾಗಿ ಗುರಿ ತಲುಪುವಲ್ಲಿ ಇನ್ನೂ ಸಾಧ್ಯವಾಗಿಲ್ಲ ಎಂಬುದು ಆಶ್ಚರ್ಯ ಮೂಡಿಸುತ್ತದೆ.

ಪ್ರಧಾನಿ ಮೋದಿಯವರ ಏಳು ವರ್ಷಗಳ ಅಧಿಕಾರ ಅವಧಿಯಲ್ಲಿ ಅನೇಕ ಸವಾಲುಗಳು ಸಹ ಎದುರಾಗಿವೆ.

ಆರ್ಥಿಕ ಅಸ್ಥಿರತೆ ಕಾಡುತ್ತಿದೆ!

ಆರ್ಥಿಕ ಅಸ್ಥಿರತೆ ಕಾಡುತ್ತಿದೆ!

ಒಟ್ಟು ದೇಶೀಯ ಉತ್ಪನ್ನ, ನಿರುದ್ಯೋಗ ದರ, ಹಣದುಬ್ಬರ ದರ, ಸರ್ಕಾರದ ಹಣಕಾಸಿನ ಕೊರತೆ , ಆರ್ಥಿಕತೆಯಲ್ಲಿ ಉಳಿತಾಯ ಮತ್ತು ಹೂಡಿಕೆ ದರಗಳು, ಯುಎಸ್ ಡಾಲರ್ ವಿರುದ್ಧದ ದೇಶೀಯ ಕರೆನ್ಸಿಯ ಮೌಲ್ಯ ಕುಸಿತ, ಪಾವತಿಯ ಅಸಮತೋಲನ, ಬಡತನ ಹಾಗೂ ನಿರುದ್ಯೋಗ ಪ್ರಮಾಣ ಏರಿಕೆ ಹೀಗೆ ಅನೇಕ ಸವಾಲುಗಳಿಂದ ಕೂಡಿದೆ.

ಸ್ಥಳೀಯ ಲಾಕ್‌ಡೌನ್ ವಿಸ್ತರಣೆ : ಬೇಡಿಕೆ ಮತ್ತು ಖರ್ಚಿನ ಮೇಲೆ ಆಳವಾದ ಪರಿಣಾಮ

ಜಿಡಿಪಿ ದರ ಕುಸಿತ
 

ಜಿಡಿಪಿ ದರ ಕುಸಿತ

ಕೇಂದ್ರ ಸರ್ಕಾರವು ಅಂದಾಜಿಸಿದಕ್ಕಿಂತ ವಿರುದ್ಧವಾಗಿ, ಜಿಡಿಪಿ ಬೆಳವಣಿಗೆಯ ದರವು ಕಳೆದ ಏಳು ವರ್ಷಗಳಲ್ಲಿ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಕುಸಿಯತೊಡಗಿದೆ. ಮೇ 27 ರಂದು ಬಿಡುಗಡೆಯಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 2020-21 ರ ವಾರ್ಷಿಕ ವರದಿಯಲ್ಲಿ ನೀಡಲಾದ ಮಾಹಿತಿಯು ನಿರೀಕ್ಷೆಗಳನ್ನು ತಲೆಕೆಳಗಾಗಿ ಮಾಡಿದೆ.

ಕಳೆದ ಐದು ವರ್ಷಗಳಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಇಳಿಮುಖ ಹಾದಿಯನ್ನು ಹಿಡಿದಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕುಸಿತದ ನಂತರ, ಭಾರತೀಯ ಆರ್ಥಿಕತೆಯು ಮಾರ್ಚ್ 2013 ರಲ್ಲಿ ತನ್ನ ಚೇತರಿಕೆಗೆ ಪ್ರಾರಂಭಿಸಿತು. ಇದು ಮೋದಿ ಸರ್ಕಾರ ಅಧಿಕಾರ ವಹಿಸಿಕೊಳ್ಳುವ ಒಂದು ವರ್ಷಕ್ಕಿಂತಲೂ ಮೊದಲು ಎನ್ನುವುದು ಗಮನಾರ್ಹ.

ನೋಟು ಅಮಾನ್ಯೀಕರಣ ಆರ್ಥಿಕ ಬೆಳವಣಿಗೆ ಕುಸಿತಕ್ಕೆ ಕಾರಣವಾಯಿತೇ?

ನೋಟು ಅಮಾನ್ಯೀಕರಣ ಆರ್ಥಿಕ ಬೆಳವಣಿಗೆ ಕುಸಿತಕ್ಕೆ ಕಾರಣವಾಯಿತೇ?

ಆರ್‌ಬಿಐ ಇದನ್ನು ಹೇಳದಿದ್ದರೂ, ನವೆಂಬರ್ 8, 2016ರಂದು ಭಾರತ ಸರ್ಕಾರವು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿತು. ಮೋದಿ ಸರ್ಕಾರದ ಈ ನಿರ್ಧಾರವು ಭಾರತದ ಬೆಳವಣಿಗೆಯನ್ನು ಕೆಳಮುಖವಾಗಿ ಪರಿವರ್ತಿಸಿತು ಎಂದು ಇಂದಿಗೂ ಅನೇಕ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನೋಟು ಅಮಾನ್ಯೀಕರಣ ಮಾಡಿದ್ದರಿಂದ ಬಡವರು, ಮಧ್ಯಮ ವರ್ಗದವರು, ಸಣ್ಣ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದರು ಎಂಬ ಅಭಿಪ್ರಾಯವಿದೆ.

ಫಿಟ್ನೆಸ್ ಪಾಠ ಕಲಿಸಿದ ಕೊರೊನಾ: ಬೈಸಿಕಲ್ ಬೇಡಿಕೆ ಶೇ. 20ರಷ್ಟು ಏರಿಕೆ

ಕೋವಿಡ್ ಪೂರ್ವದಲ್ಲಿ ಶೇಕಡಾ 8ರಷ್ಟಿದ್ದ ಜಿಡಿಪಿ ದರ

ಕೋವಿಡ್ ಪೂರ್ವದಲ್ಲಿ ಶೇಕಡಾ 8ರಷ್ಟಿದ್ದ ಜಿಡಿಪಿ ದರ

ಅದಾಗಲೇ ಕೆಟ್ಟ ಸಾಲಗಳಿಂದ ಒದ್ದಾಡುತ್ತಿದ್ದ ಭಾರತದ ಬ್ಯಾಂಕುಗಳು ಕೋವಿಡ್-19 ಸಾಂಕ್ರಾಮಿಕದ ಬಳಿಕ ಸಾಕಷ್ಟು ತೊಂದರೆ ಅನುಭವಿಸಿವೆ. ಅದರಲ್ಲೂ ದೇಶದ ಜಿಡಿಪಿ ದರವು ಕೊರೊನಾವೈರಸ್‌ ಆಕ್ರಮಣಕ್ಕೂ ಮುನ್ನ ಹಣಕಾಸು ವರ್ಷ 2016-17 ರಲ್ಲಿ ಶೇಕಡಾ 8 ರಿಂದ ಹಣಕಾಸು ವರ್ಷ 2020-21 ರಲ್ಲಿ ಸುಮಾರು ಶೇಕಡಾ 4ಕ್ಕೆ ಇಳಿದಿದೆ.

ಅದರಲ್ಲೂ ಜನವರಿ 2020 ರಲ್ಲಿ, ಜಿಡಿಪಿ ಬೆಳವಣಿಗೆಯು 42 ವರ್ಷಗಳ ಕನಿಷ್ಠಕ್ಕೆ ಕುಸಿಯಿತು. ಈ ವೇಳೆ ''ಭಾರತದ ಆರ್ಥಿಕತೆಗೆ ಪುಟಿಯುವ ಸಾಮರ್ಥ್ಯವಿದೆ'' ಎಂದು ಪ್ರಧಾನಿ ಮೋದಿ ಹೇಳಿದ್ದರು.

ನಿರುದ್ಯೋಗ ದರ

ನಿರುದ್ಯೋಗ ದರ

ಕೇಂದ್ರ ಸರ್ಕಾರದ ಸ್ವಂತ ಸಮೀಕ್ಷೆಗಳ ಪ್ರಕಾರ, ಭಾರತದ ನಿರುದ್ಯೋಗ ದರವು 2017-18ರಲ್ಲಿ 45 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ ಎಂಬ ಸುದ್ದಿ ಹೊರಬಿದ್ದಿತ್ತು. ನೋಟು ಅಮಾನ್ಯೀಕರಣದ ನಂತರದಲ್ಲಿ ಜಿಎಸ್‌ಟಿ ಪರಿಚಯಿಸಲಾಯಿತು. 2012 ಮತ್ತು 2018 ರ ನಡುವೆ, ಒಟ್ಟು ಉದ್ಯೋಗಿಗಳ ಸಂಖ್ಯೆ 9 ಮಿಲಿಯನ್ ಇಳಿಕೆಯಾಗಿದೆ ಎಂಬ ಸುದ್ದಿ 2019 ರಲ್ಲಿ ಬಂದಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಟ್ಟು ಉದ್ಯೋಗ ಕುಸಿಯುತ್ತಿರುವ ಇದು ಮೊದಲ ಉದಾಹರಣೆಯಾಗಿದೆ.

ಸಾಮಾನ್ಯವಾಗಿ ಶೇಕಡಾ 2ರಿಂದ 3ರಷ್ಟು ನಿರುದ್ಯೋಗ ದರ ಕುಸಿತದ ವಿರುದ್ಧ ಕೋವಿಡ್ -19 ರವರೆಗಿನ ವರ್ಷಗಳಲ್ಲಿ ಭಾರತದ ನಿರುದ್ಯೋಗ ದರ ಶೇಕಡಾ 6 ರಿಂದ ಶೇಕಡಾ 7ರ ಹತ್ತಿರದಲ್ಲಿದೆ. ಹೀಗಾಗಿ ಮೋದಿಯವರ ಉಳಿದ ಅವಧಿಯಲ್ಲಿ ನಿರುದ್ಯೋಗವು ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ.

ಹಣದುಬ್ಬರ

ಹಣದುಬ್ಬರ

ಮೋದಿ ಸರ್ಕಾರ ಅಧಿಕಾರವಧಿಯ ಮೊದಲ ಮೂರು ವರ್ಷಗಳಲ್ಲಿ ಕಡಿಮೆ ಕಚ್ಚಾ ತೈಲ ಬೆಲೆಗಳಿಂದ ಹೆಚ್ಚಿನ ಲಾಭಗಳಿಸಿತು. 2011 ರಿಂದ 2014 ರ ಉದ್ದಕ್ಕೂ ತೈಲ ಬೆಲೆ ಬ್ಯಾರೆಲ್‌ಗೆ 110 ಡಾಲರ್‌ಗೆ ಹತ್ತಿರದಲ್ಲಿದ್ದು, ನಂತರದಲ್ಲಿ ವೇಗವಾಗಿ 2015 ರಲ್ಲಿ ಕೇವಲ 85 ಡಾಲರ್‌ಗೆ ಇಳಿದವು ಮತ್ತು 2017 ಮತ್ತು 2018 ರಲ್ಲಿ 50 ಡಾಲರ್‌ಕ್ಕಿಂತಲೂ ಕಡಿಮೆಯಾಗಿದೆ.

ಒಂದೆಡೆ, ತೈಲ ಬೆಲೆಗಳ ಹಠಾತ್ ಮತ್ತು ತೀಕ್ಷ್ಣವಾದ ಕುಸಿತವು ದೇಶದಲ್ಲಿ ಚಿಲ್ಲರೆ ಹಣದುಬ್ಬರವನ್ನು ಸಂಪೂರ್ಣವಾಗಿ ತಗ್ಗಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟರೆ, ಮತ್ತೊಂದೆಡೆ, ಇಂಧನದ ಮೇಲೆ ಹೆಚ್ಚುವರಿ ತೆರಿಗೆಗಳನ್ನು ಸಂಗ್ರಹಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿತು.

ಆದರೆ 2019 ರ ಕೊನೆಯ ತ್ರೈಮಾಸಿಕದಿಂದ ಭಾರತವು ನಿರಂತರ ಚಿಲ್ಲರೆ ಹಣದುಬ್ಬರವನ್ನು ಎದುರಿಸುತ್ತಿದೆ. ಕೋವಿಡ್ ಲಾಕ್‌ಡೌನ್‌ಗಳಿಂದಾಗಿ ಬೇಡಿಕೆ ಕುಸಿತದ ಜೊತೆಗೆ ಕಚ್ಚಾ ತೈಲ ಬೆಲೆಯ ನಿರಂತರ ಏರಿಕೆಯು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ.

ಹಣಕಾಸಿನ ಕೊರತೆ

ಹಣಕಾಸಿನ ಕೊರತೆ

ಹಣಕಾಸಿನ ಕೊರತೆಯು ಮೂಲಭೂತವಾಗಿ ಸರ್ಕಾರದ ಹಣಕಾಸಿನ ಆರೋಗ್ಯದ ಗುರುತಾಗಿದೆ. ಇದು ಸರ್ಕಾರದ ಖರ್ಚುಗಳನ್ನು ಪೂರೈಸಲು ಮಾರುಕಟ್ಟೆಯಿಂದ ಪಡೆಯಬೇಕಾದ ಸಾಲದ ಹಣವನ್ನು ಪತ್ತೆ ಮಾಡುತ್ತದೆ.

ಭಾರತದ ಹಣಕಾಸಿನ ಕೊರತೆಯ ಮಟ್ಟವು ನಿಗದಿಪಡಿಸಿದ ಮಟ್ಟಕ್ಕಿಂತ ಸ್ವಲ್ಪ ಹೆಚ್ಚು, ಆದರೆ, ವಾಸ್ತವದಲ್ಲಿ, ಕೋವಿಡ್‌ಗಿಂತ ಮುಂಚೆಯೇ, ಹಣಕಾಸಿನ ಕೊರತೆಯು ಸರ್ಕಾರವು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನದಾಗಿದೆ ಎಂಬುದು ಬಹಿರಂಗ ರಹಸ್ಯವಾಗಿದೆ. ಪ್ರಸಕ್ತ ಹಣಕಾಸು ವರ್ಷದ ಕೇಂದ್ರ ಬಜೆಟ್‌ನಲ್ಲಿ, ಹಣಕಾಸಿನ ಕೊರತೆಯನ್ನು ಭಾರತದ ಜಿಡಿಪಿಯ ಸುಮಾರು ಶೇಕಡಾ 2ರಷ್ಟು ಕಡಿಮೆ ಮಾಡುತ್ತಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ.

English summary

7 Years of Modi Govt: Did Fundamentals of Indian Economy improved? Explained

Here the details of 7 Years of Modi Govt impact on indian economy
Story first published: Monday, May 31, 2021, 17:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X