For Quick Alerts
ALLOW NOTIFICATIONS  
For Daily Alerts

ತಿಂಗಳಿನ ಆದಾಯ 5,000 ರುಪಾಯಿ, ಖರೀದಿ ಮಾಡಿದ್ದು ಮಾತ್ರ 200 ಕೋಟಿ ಮೌಲ್ಯದ ಆಸ್ತಿ

|

ಆಂಧ್ರಪ್ರದೇಶದಲ್ಲಿ ಭೂ ವ್ಯವಹಾರಗಳ ಭಾರೀ ಅಕ್ರಮಗಳು ನಡೆದಿರುವುದು ಬಹಿರಂಗವಾಗಿದೆ. ಅಮರಾವತಿ ರಾಜಧಾನಿ ಪ್ರದೇಶದಲ್ಲಿ 200 ಕೋಟಿ ಮೌಲ್ಯದ ಭೂ ವ್ಯವಹಾರ ಅಕ್ರಮ ನಡೆದಿದ್ದು, ಸರ್ಕಾರ ತನಿಖೆಗೆ ಆದೇಶಿಸಿದೆ.

ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಅಂದರೆ ಬಡತನ ರೇಖೆಗಿಂತ ಕೆಳಗಿರುವ ಜನರು 2014-15ರ ಅವಧಿಯಲ್ಲಿ 200 ಕೋಟಿ ರುಪಾಯಿಗಿಂತ ಹೆಚ್ಚು ಮೌಲ್ಯದ 700 ಎಕರೆ ಭೂಮಿಯನ್ನು ಖರೀದಿಸಿದ್ದಾರೆ ಎಂದು ಸಿಐಡಿ ಆರೋಪಿಸಿದೆ. ಸಿಐಡಿ ಪ್ರಕಾರ, ಅಮರಾವತಿ ರಾಜಧಾನಿ ಪ್ರದೇಶದಲ್ಲಿ ತಿಂಗಳಿಗೆ 5,000 ರುಪಾಯಿಗಿಂತ ಕಡಿಮೆ ಆದಾಯ ಗಳಿಸುವ 797 ಪಡಿತರ ಚೀಟಿದಾರರು 700 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಇದರ ಮಾರುಕಟ್ಟೆ ಮೌಲ್ಯವು 200 ಕೋಟಿ ರುಪಾಯಿಯಷ್ಟಿದೆ.

ಬಡತನ ರೇಖೆಗಿಂತ ಕೆಳಗಿನ ಜನರು 200 ಕೋಟಿ ಆಸ್ತಿ ಖರೀದಿಸಿದ್ದು ಹೇಗೆ?
 

ಬಡತನ ರೇಖೆಗಿಂತ ಕೆಳಗಿನ ಜನರು 200 ಕೋಟಿ ಆಸ್ತಿ ಖರೀದಿಸಿದ್ದು ಹೇಗೆ?

"700 ಎಕರೆ ಭೂಮಿಯನ್ನು ಹೊಂದಿರುವ ಬಿಪಿಎಲ್ ಪಡಿತರ ಕಾರ್ಡುದಾರರು ತಮ್ಮ ಮಾಸಿಕ ಆದಾಯ 5,000 ರೂ.ಗಿಂತ ಕಡಿಮೆ ಎಂದು ಘೋಷಿಸಿದ್ದಾರೆ. ಈ ಗಳಿಕೆಯೊಂದಿಗೆ ಅವರು 200 ಕೋಟಿ ರುಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಭೂಮಿಯನ್ನು ಹೇಗೆ ಖರೀದಿಸಬಹುದು, ಇದು ದೊಡ್ಡ ಪ್ರಶ್ನೆಯಾಗಿದೆ" ಎಂದು ಸಿಐಡಿ ಎಡಿಜಿ ಪಿವಿ ಸುನಿಲ್ ಕುಮಾರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಜಮೀನು ಖರೀದಿ ವೇಳೆ ನಡೆದಿದೆ ಭಾರೀ ಅವ್ಯವಹಾರ

ಜಮೀನು ಖರೀದಿ ವೇಳೆ ನಡೆದಿದೆ ಭಾರೀ ಅವ್ಯವಹಾರ

"ಅಮರಾವತಿಯಲ್ಲಿ 2014 ಮತ್ತು 2015 ರ ಅವಧಿಯಲ್ಲಿ ಭೂ ನೋಂದಣಿ ನಡೆದಿತ್ತು. ಜಮೀನುಗಳನ್ನು ಖರೀದಿಸುವುದರಲ್ಲಿ ಭಾರಿ ಹಣದ ವಹಿವಾಟು ನಡೆದಿತ್ತು. ಒಪ್ಪಂದಗಳಲ್ಲಿ ಭಾಗಿಯಾಗಿರುವ ಅನೇಕರಿಗೆ ಪ್ಯಾನ್ ಕಾರ್ಡ್‌ಗಳೂ ಇಲ್ಲ" ಎಂದು ತನಿಖಾಧಿಕಾರಿಯೂ ಆಗಿರುವ ಸಿಐಡಿ ಎಸ್‌ಪಿ ಮೇರಿ ಪ್ರಶಾಂತಿ ಹೇಳಿದ್ದಾರೆ.

ಮನಿ ಲಾಂಡರಿಂಗ್ ಬಗ್ಗೆ ತನಿಖೆಗೆ ಆದೇಶ

ಮನಿ ಲಾಂಡರಿಂಗ್ ಬಗ್ಗೆ ತನಿಖೆಗೆ ಆದೇಶ

ಸಂಭವನೀಯ ತೆರಿಗೆ ವಂಚನೆ ಮತ್ತು ಮನಿ ಲಾಂಡರಿಂಗ್ ಬಗ್ಗೆ ತನಿಖೆ ನಡೆಸಲು ಇಲಾಖೆ ಈಗ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ಸಹಾಯವನ್ನು ಕೋರಿದೆ ಎಂದು ಸಿಐಡಿ ಎಡಿಜಿ ಇಂಡಿಯಾ ಟುಡೆಗೆ ತಿಳಿಸಿದ್ದಾರೆ.

ದಲಿತ ಮಹಿಳೆಯಿಂದ ಬಲವಂತವಾಗಿ ಭೂಮಿ ಖರೀದಿ, ಕೇಸ್ ದಾಖಲು
 

ದಲಿತ ಮಹಿಳೆಯಿಂದ ಬಲವಂತವಾಗಿ ಭೂಮಿ ಖರೀದಿ, ಕೇಸ್ ದಾಖಲು

ದಲಿತ ಮಹಿಳೆಯೊಬ್ಬರಿಂದ ಭೂಮಿಯನ್ನು ಬಲವಂತವಾಗಿ ಖರೀದಿಸಿದ್ದಕ್ಕಾಗಿ ಸಿಐಡಿ ಗುರುವಾರ ಚಂದ್ರಬಾಬು ನಾಯ್ಡು ಆಡಳಿತದ ಇಬ್ಬರು ಮಾಜಿ ಮಂತ್ರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಮಾಜಿ ಮಂತ್ರಿಗಳು ಮತ್ತು ಟಿಡಿಪಿ ನಾಯಕರಾದ ಪಿ ನಾರಾಯಣ ಮತ್ತು ಪಿ ಪುಲ್ಲಾ ರಾವ್ ಅವರ ವಿರುದ್ಧ ಕೇಸ್ ದಾಖಲಾಗಿದೆ.

English summary

700 Plus People Living BPL Bought 200 Crore Worth Land In Amaravati

Over 700 people who living below poverty line bought 200 crore worth land in amaravati reveals CID probe
Story first published: Friday, January 24, 2020, 12:22 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more