For Quick Alerts
ALLOW NOTIFICATIONS  
For Daily Alerts

ದೇಶದ 8 ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆ 16.8%

|

ಭಾರತದ ಎಂಟು ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆಯು ಮೇ ತಿಂಗಳಿನಲ್ಲಿ ಶೇಕಡಾ 16.8ರಷ್ಟಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿಯನ್ನ ನೀಡಿದೆ.

 

ದೇಶದ ಪ್ರಮುಖ ಕೈಗಾರಿಕಾ ವಲಯಗಳಾದ ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳ ಉತ್ಪಾದನೆ ಹೆಚ್ಚಳ ಆಗಿರುವುದರಿಂದ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ. ರಸಗೊಬ್ಬರ ಮತ್ತು ಕಚ್ಚಾತೈಲ ವಲಯಗಳು ಮಾತ್ರವೇ ಮೇ ತಿಂಗಳಿನಲ್ಲಿ ನಕಾರಾತ್ಮಕ ಬೆಳವಣಿಗೆಯನ್ನ ಕಂಡಿದೆ.

ದೇಶದ 8 ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆ 16.8%

ಕೋವಿಡ್-19 ಸೋಂಕುಗಳ ಹರಡುವಿಕೆಯನ್ನು ನಿಯಂತ್ರಿಸಲು ವಿಧಿಸಲಾದ ಲಾಕ್‌ಡೌನ್ ನಿರ್ಬಂಧಗಳಿಂದಾಗಿ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುಚ್ಛಕ್ತಿಯ ಎಂಟು ಮೂಲಸೌಕರ್ಯ ಕ್ಷೇತ್ರಗಳು 2020 ರ ಮೇ ತಿಂಗಳಲ್ಲಿ ಶೇಕಡಾ 21.4 ರಷ್ಟು ಸಂಕುಚಿತಗೊಂಡಿವೆ. ಆದರೆ ಈ ವರ್ಷ ಅದೇ ತಿಂಗಳಿನಲ್ಲಿ ಶೇ. 16.8ರಷ್ಟು ಬೆಳವಣಿಗೆ ಸಾಧಿಸಿದೆ.

ಈ ವರ್ಷದ ಮಾರ್ಚ್‌ನಲ್ಲಿ ಈ ಪ್ರಮುಖ ಕ್ಷೇತ್ರಗಳು ಶೇಕಡಾ 11.4 ರಷ್ಟು ಮತ್ತು ಏಪ್ರಿಲ್‌ನಲ್ಲಿ 60.9 ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ನೈಸರ್ಗಿಕ ಅನಿಲ, ಸಂಸ್ಕರಣಾಗಾರ ಉತ್ಪನ್ನಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯು ಶೇಕಡಾ 20.1, 15.3, 59.3, 7.9 ಮತ್ತು 7.3 ರಷ್ಟು ಏರಿಕೆಯಾಗಿದೆ. 2020 ರ ಮೇ ತಿಂಗಳಲ್ಲಿ ಕ್ರಮವಾಗಿ ಶೇಕಡಾ 16.8, (-) 21.3, (-) 40.4, (-) 21.4 ಮತ್ತು (-) 14.8 ರಷ್ಟಿತ್ತು.

English summary

8 Core Sector Output Rises 16.8 Percent In May 2021

India's 8 Core infrastructure Sectors Rises 16.8 Percent In May Because Of the Low Base last year
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X