For Quick Alerts
ALLOW NOTIFICATIONS  
For Daily Alerts

ಸುಶಾಂತ್ ಸಿಂಗ್ ಸಾವು: ರಿಯಾ ಚಕ್ರವರ್ತಿಗೆ ಇ.ಡಿ. ಸಮನ್ಸ್

|

ಸುಶಾಂತ್ ಸಿಂಗ್ ಸಾವಿನ ವಿಚಾರವಾಗಿ ಜಾರಿ ನಿರ್ದೇಶನಾಲಯವು (ಇ.ಡಿ.) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿಗೆ ಆಗಸ್ಟ್ 7ನೇ ತಾರೀಕು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಅವರ ತಂದೆ ದೂರು ದಾಖಲಿಸಿದ್ದರು. ಆ ಸಂಬಂಧ ಈ ವಿಚಾರಣೆ ನಡೆಯುತ್ತಿದೆ ಎಂದು ಬುಧವಾರ ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

ನಟ ಸುಶಾಂತ್ ಸಾವು; ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಇ.ಡಿ.

ರಿಯಾ ಚಕ್ರವರ್ತಿ ಅವರ ಪ್ರಶ್ನೆ ಮಾಡಲಾಗುವುದು ಮತ್ತು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (PMLA) ಅಡಿಯಲ್ಲಿ ಆಕೆಯ ಹೇಳಿಕೆ ದಾಖಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿಹಾರ ಪೊಲೀಸರು ದಾಖಲಿಸಿದ ಎಫ್ ಐಆರ್ ಆಧಾರದಲ್ಲಿ ಕಳೆದ ವಾರ ಜಾರಿ ನಿರ್ದೇಶನಾಲಯದಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಹಾಕಲಾಗಿತ್ತು.

ಸುಶಾಂತ್ ಸಿಂಗ್ ಸಾವು: ರಿಯಾ ಚಕ್ರವರ್ತಿಗೆ ಇ.ಡಿ. ಸಮನ್ಸ್

 

ಸುಶಾಂತ್ ಸಿಂಗ್ ತಂದೆ ರಿಯಾ ಚಕ್ರವರ್ತಿ ಮತ್ತು ಆಕೆ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. ತಮ್ಮ ಮಗನ ಆತ್ಮಹತ್ಯೆಗೆ ರಿಯಾ ಮತ್ತು ಆಕೆಯ ಕುಟುಂಬವೇ ಕಾರಣ ಎಂದು ದೂರು ನೀಡಿದ್ದರು. ಮುಂಬೈನಲ್ಲಿನ ಬಾಂದ್ರಾ ಪ್ರದೇಶದಲ್ಲಿನ ಅಪಾರ್ಟ್ ಮೆಂಟ್ ನಲ್ಲಿ ಜೂನ್ 14ನೇ ತಾರೀಕು 34 ವರ್ಷದ ಸುಶಾಂತ್ ಶವ ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

Read more about: ed mumbai ಇಡಿ ಮುಂಬೈ
English summary

Actor Sushant Singh Death Case: ED Summons Rhea Chakraborty

The Enforcement Directorate has summoned actor Rhea Chakraborty for questioning on August 7 in connection with a money laundering case related to Sushant Singh Rajput death case.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X