For Quick Alerts
ALLOW NOTIFICATIONS  
For Daily Alerts

ನಗರಗಳತ್ತ ವಲಸೆ ಕಾರ್ಮಿಕರು, ಆರ್ಥಿಕ ಪುನಶ್ಚೇತನದ ಸಂಕೇತ: ರೈಲ್ವೆ ಮಂಡಳಿ

|

ನವದೆಹಲಿ: ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ತಮ್ಮ ಊರುಗಳಿಗೆ ತೆರಳಿದ್ದ ವಲಸೆ ಕಾರ್ಮಿಕರು ಈಗ ಮತ್ತೆ ಕೆಲಸ ಅರಸಿ ನಗರಗಳತ್ತ ತೆರಳುತ್ತಿದ್ದಾರೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ.ಯಾದವ್ ಶುಕ್ರವಾರ ಹೇಳಿದ್ದಾರೆ.

 

ಉತ್ತರ ಪ್ರದೇಶ, ಬಿಹಾರದ ಜನರು ಮುಂಬೈ ಮತ್ತು ಬೆಂಗಳೂರು ಕಡೆಗೆ ಹೋಗುತ್ತಿರುವುದು ಬಹಳ ಪ್ರೋತ್ಸಾಹದಾಯಕವಾಗಿದೆ. ಭಾರತೀಯ ರೈಲ್ವೆ ನಿರ್ವಹಿಸುತ್ತಿರುವ 230 ವಿಶೇಷ ಪ್ರಯಾಣಿಕರ ರೈಲುಗಳಲ್ಲಿನ ಬೇಡಿಕೆಯ ಮಾದರಿಯನ್ನು ಸರ್ಕಾರ ಗಮನಿಸಿರುವುದರಿಂದ ಈ ಹೇಳಿಕೆ ನೀಡುತ್ತಿದ್ದೇನೆ. ಬೇಡಿಕೆ ಹೆಚ್ಚಿರುವ ಮಾರ್ಗಗಳಲ್ಲಿ ಮುಂದಿನ ದಿನಗಳಲ್ಲಿ ರೈಲುಗಳನ್ನು ಹೆಚ್ಚಿಸಲಾಗುವುದು ಎಂದು ಅವರು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಲಾಕ್‌ಡೌನ್ ಸಡಿಲಿಕೆ: ಫ್ಲಿಪ್‌ಕಾರ್ಟ್ ಗೆ ಮರಳಿದ ಶೇ 90 ರಷ್ಟು ಮಾರಾಟಗಾರರು

ಆರ್ಥಿಕತೆಯು ಪುನರುಜ್ಜೀವನಗೊಳ್ಳುತ್ತಿದೆ ಎಂಬುದಕ್ಕೆ ಇದು ಉತ್ತಮ ಸಂಕೇತವಾಗಿದೆ. ಇನ್ಮುಂದೆ ನಾವು ವಿಶೇಷ ರೈಲುಗಳನ್ನು ಹೆಚ್ಚಿಸುತ್ತೇವೆ. ಪೂರ್ಣ ಪ್ರಮಾಣದಲ್ಲಿ ರೈಲುಗಳನ್ನು ಓಡಿಸುವವರೆಗೆ ಸಮಯ ತೆಗೆದುಕೊಳ್ಳುತ್ತದೆ. ಕೋವಿಡ್ -19 ಹರಡುವಿಕೆಯ ಸ್ಥಿತಿ ಮುಂದೆ ಏನು ಎಂಬುದರ ಮೇಲೆ ಪೂರ್ಣ ಪ್ರಮಾಣದ ರೈಲು ಪ್ರಯಾಣ ಅವಲಂಬಿತವಾಗಿರುತ್ತದೆ ಎಂದು ಯಾದವ್ ಹೇಳಿದ್ದಾರೆ.

ನಗರಗಳತ್ತ ವಲಸೆ ಕಾರ್ಮಿಕರು, ಆರ್ಥಿಕ ಪುನಶ್ಚೇತನದ ಸಂಕೇತ

ಮಾರ್ಚ್ 24 ರಿಂದ ಕೋವಿಡ್ -19 ತಡೆ ಸಲುವಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆಯಾದ ನಂತರ ಭಾರತೀಯ ರೈಲ್ವೆ ತನ್ನ 12,000 ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ರೈಲ್ವೆ ಸಚಿವಾಲಯವು ಮೇ ತಿಂಗಳಲ್ಲಿ ಶ್ರಮಿಕ್ ರೈಲುಗಳನ್ನು ರೈಲುಗಳನ್ನು ಘೋಷಿಸಿತು ಮತ್ತು ಜೂನ್ 1 ರಿಂದ 200 ಪ್ರಯಾಣಿಕರ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

English summary

After Lockdown Relaxation Migrate Labours Starts Returning To Their Work Place Says Raliwy Bord

After Lockdown Relaxation Migrate Labours Starts Returning To Their Work Place Says Raliwy Bord President V K Yadav.
Story first published: Saturday, June 27, 2020, 18:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X