For Quick Alerts
ALLOW NOTIFICATIONS  
For Daily Alerts

ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಸೇವೆ ಸ್ಥಗಿತಗೊಂಡ 26 ನಿಮಿಷಗಳಲ್ಲೇ 7,457 ದೂರು

|

ನವದೆಹಲಿ, ಫೆಬ್ರವರಿ 11: ಬೆಂಗಳೂರು, ಮುಂಬೈ ಮತ್ತು ದೆಹಲಿಯಂತಹ ಪ್ರಮುಖ ನಗರಗಳಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ಭಾರ್ತಿ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಸೇವೆಯು ದೊಡ್ಡ ಪ್ರಮಾಣದಲ್ಲಿ ಸ್ಥಗಿತಗೊಂಡಿರುವ ಬಗ್ಗೆ ಟ್ವಿಟ್ಟರ್ ಸೇರಿದಂತೆ ಬಹುತೇಕ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ನಲ್ಲಿ ದೂರುಗಳು ಕೇಳಿ ಬಂದಿವೆ.

ಇಂಟರ್ನೆಟ್ ಸ್ಥಗಿತ ಟ್ರ್ಯಾಕರ್, ಡೌನ್‌ಡೆಕ್ಟರ್ ಪ್ರಕಾರ, ಶುಕ್ರವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಸೇವೆ ಸ್ಥಗಿತಗೊಂಡಿದ್ದು, ಬೆಳಗ್ಗೆ 11:26ರ ವೇಳೆಗೆ ಸುಮಾರು 7,457 ದೂರುಗಳು ದಾಖಲಾಗಿವೆ.

ಏರ್‌ಟೆಲ್‌ ಮೇಲೆ 7,510 ಕೋಟಿ ಹೂಡಿಕೆ ಮಾಡಿದ ಗೂಗಲ್

"ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕೆಲವು ತಾಂತ್ರಿಕ ದೋಷದಿಂದ ನಮ್ಮ ಇಂಟರ್ ನೆಟ್ ಸೇವೆಗಳು ಸ್ಥಗಿತಗೊಂಡಿದ್ದವು. ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಮರುಸ್ಥಾಪಿಸಲಾಗಿದ್ದು, ಗ್ರಾಹಕರಿಗೆ ಆಗಿರುವ ಅಡಚಣೆಗಾಗಿ ವಿಷಾದಿಸುತ್ತೇವೆ," ಎಂದು ಏರ್‌ಟೆಲ್‌ನ ಕಂಪನಿ ವಕ್ತಾರರು ತಿಳಿಸಿದ್ದಾರೆ.

ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಸೇವೆ 26 ನಿಮಿಷಗಳ ನಂತರ ಮರುಸ್ಥಾಪನೆ

ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆ ಸ್ಥಗಿತ:

ಮೊಬೈಲ್ ಸೇವೆ ಸೇರಿದಂತೆ ಬ್ರಾಡ್‌ಬ್ಯಾಂಡ್ ಸೇವೆಗಳ ಮೇಲೂ ತಾಂತ್ರಿಕ ದೋಷದಿಂದ ಪರಿಣಾಮ ಬೀರಿದೆ. ಕೆಲವು ಗ್ರಾಹಕರು ಏರ್‌ಟೆಲ್‌ ಮೊಬೈಲ್ ಆಪ್ ಬಳಸುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ.

ಭಾರ್ತಿ ಏರ್‌ಟೆಲ್‌ನ ಷೇರುಮೌಲ್ಯ ಕುಸಿತ:

ಭಾರತಿ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಸೇವೆ ಸ್ಥಗಿತಗೊಂಡಿರುವ ಬಗ್ಗೆ ಸುದ್ದಿ ಹೆಚ್ಚಾಗಿ ಹರಡುತ್ತಿದ್ದಂತೆ ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರು ಮೌಲ್ಯ ಶೇ.2ರಷ್ಟು ಕುಸಿತ ಕಂಡು ಬಂದಿತು. ಆದರೆ ತದನಂತರ ಬ್ರಾಡ್‌ಬ್ಯಾಂಡ್ ಸೇವೆ ಮರುಸ್ಥಾಪಿಸಲಾಗಿದೆ ಎಂದು ಕಂಪನಿ ಸ್ಪಷ್ಟಪಡಿಸುತ್ತಿದ್ದಂತೆ ಷೇರು ಮೌಲ್ಯದಲ್ಲಿ ಕೊಂಚ ಏರಿಕೆಯಾಗಿದೆ.

4ಜಿ ಡೌನ್‌ಲೋಡ್ ವೇಗದಲ್ಲಿ ಜಿಯೋಗೆ ಮೊದಲ ಸ್ಥಾನ

ಫೆಬ್ರವರಿ 5ರಂದು ಜಿಯೋ ಸೇವೆ ಸ್ಥಗಿತ:

ಮುುಂಬೈ ವ್ಯಾಪ್ತಿಯಲ್ಲಿ ಕಳೆದ ಫೆಬ್ರವರಿ 5ರಂದು ಇದೇ ರೀತಿ ರಿಲಾಯನ್ಸ್ ಜಿಯೋ ಸೇವೆಯು ಸುದೀರ್ಘ 8 ಗಂಟೆಗಳ ಅವಧಿವರೆಗೂ ಸ್ಥಗಿತಗೊಂಡಿತ್ತು. ಜಿಯೋ ಸಿಮ್ ಕಾರ್ಡ್ ಅನ್ನು ಹೊಂದಿರುವ ಗ್ರಾಹಕರು ಇಂಟರ್ ನೆಟ್ ಸೇವೆ ಮತ್ತು ಫೋನ್ ಕಾಲ್ ಮಾಡುವುದಕ್ಕೂ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಮುಂಬೈ ಉಪನಗರ, ಥಾಣೆ, ಕಲ್ಯಾಣ್ ಮತ್ತು ದೊಂಬಿವ್ಲಿ ಪ್ರದೇಶದಲ್ಲಿ ಗ್ರಾಹಕರು ಇದರಿಂದ ತೀವ್ರ ತೊಂದರೆ ಎದುರಿಸಿದರು. ರಿಲಾಯನ್ಸ್ ಜಿಯೋ ಗ್ರಾಹಕರು ಸೇವೆ ಸ್ಥಗಿತದ ಕುರಿತು ದೂರುಗಳನ್ನೂ ದಾಖಲಿಸಿದ್ದರು.

ರಿಲಾಯನ್ಸ್ ಜಿಯೋ ಬಳಕೆ ಗ್ರಾಹಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಜಿಯೋ ಬಳಕೆದಾರರಲ್ಲದ ಗ್ರಾಹಕರೂ ಕೂಡ ದೂರುಗಳನ್ನು ನೀಡಿದ್ದರು. ಮುಂಬೈನಲ್ಲಿ ರಾತ್ರಿ 8 ಗಂಟೆ ವೇಳೆಗೆ ಅಂತಿಮವಾಗಿ ರಿಲಾಯನ್ಸ್ ಜಿಯೋ ಸೇವೆಗಳನ್ನು ಮರು ಸ್ಥಾಪಿಸಲಾಗಿತ್ತು. ಮುಂಬೈ ವ್ಯಾಪ್ತಿಯಲ್ಲೇ ರಿಲಾಯನ್ಸ್ ಜಿಯೋ ಬಳಕೆದಾರರ ಸಂಖ್ಯೆ 1.30 ಕೋಟಿಗೂ ಹೆಚ್ಚಾಗಿದೆ.

English summary

After outage reported across India's major cities Airtel Will Restored Broadband Services

After outage reported across India's major cities Airtel Will Restored Broadband Services.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X