For Quick Alerts
ALLOW NOTIFICATIONS  
For Daily Alerts

2ನೇ ಮಹಾಯುದ್ಧದ ನಂತರ ಜಗತ್ತು ಅತ್ಯಂತ ಕೆಟ್ಟ ನಿರುದ್ಯೋಗ ಸಮಸ್ಯೆ ಎದುರಿಸಲಿದೆ!

|

ಕೊರೊನಾವೈರಸ್ ಸಾಂಕ್ರಾಮಿಕ ರೋಗವು ವಿಶ್ವದ 81 ಪರ್ಸೆಂಟ್‌ನಷ್ಟು ಉದ್ಯೋಗಿಗಳಿಗೆ ಹೊಡೆತ ನೀಡಿದ್ದು, 2ನೇ ಮಹಾಯುದ್ಧದ ನಂತರ ನಿರುದ್ಯೋಗದ ಅತ್ಯಂತ ಕೆಟ್ಟ ಹಂತವನ್ನು ತಂದಿದೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಬುಧವಾರ ತಿಳಿಸಿದೆ.

ಕೊರೊನಾವೈರಸ್‌ನಿಂದಾಗಿ ಭಾರತದಲ್ಲಿ ಸುಮಾರು 400 ಮಿಲಿಯನ್ ಜನರು ನಿರುದ್ಯೋಗದ ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂದು ಹೊಸ ವರದಿ ತಿಳಿಸಿದೆ.

ಕೊರೊನಾಯಿಂದಾಗಿ ಭಾರತದಲ್ಲಿ ಸುಮಾರು 400 ಮಿಲಿಯನ್ ನಿರುದ್ಯೋಗದ ಭೀತಿ!

 

ಜಾಗತಿಕ ಉದ್ಯೋಗಿಗಳ ಕಾವಲುಗಾರ ಪ್ರಕಾರ 2020ರ ದ್ವಿತೀಯಾರ್ಧದಲ್ಲಿ ನಿರುದ್ಯೋಗ ಸನ್ನಿವೇಶವು ಸುಧಾರಿಸುವ ಸಾಧ್ಯತೆಯಿದೆ ಮತ್ತು ಈ ಅವಧಿಯ ಅಂದಾಜು ಕೆಲಸದ ಸಮಯವು 6.7 ಪರ್ಸೆಂಟ್‌ರಷ್ಟು ಕುಸಿಯುತ್ತದೆ. ಇದು 195 ಮಿಲಿಯನ್ ಪೂರ್ಣ ಸಮಯದ ಕೆಲಸಗಾರರಿಗೆ ಸಮನಾಗಿರುತ್ತದೆ.

'' ಕೋವಿಡ್-19 ಸಾಂಕ್ರಾಮಿಕವು ತೀವ್ರತೆಯ ವೇಗವನ್ನು ಪಡೆದುಕೊಂಡಿದೆ ಮತ್ತು ಅಲ್ಲದೆ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸಿದೆ. ಪೂರ್ಣ ಅಥವಾ ಭಾಗಶಃ ಲಾಕ್‌ಡೌನ್ ಕ್ರಮಗಳು ಈಗ ಸುಮಾರು 2.7 ಶತಕೋಟಿ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತಿವೆ. ಇದು ವಿಶ್ವದ ಸುಮಾರು 81 ಪರ್ಸೆಂಟ್‌ರಷ್ಟು ಉದ್ಯೋಗಿಗಳನ್ನು ಪ್ರತಿನಿಧಿಸುತ್ತದೆ "ಎಂದು ಐಎಲ್ಒ ಹೇಳಿದೆ.

ಭಾರತದಲ್ಲಿ ಅನೌಪಚಾರಿಕ ಉದ್ಯೋಗಿಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಭಾರತದ ಕಾರ್ಮಿಕರು ನಿರುದ್ಯೋಗದಿಂದಾಗಿ ಬಡತನದ ರೇಖೆಗೆ ತಳ್ಳಲ್ಪಡುವ ಅಪಾಯವನ್ನು ಎದುರಿಸುವುದರಿಂದ ಎಚ್ಚರದಿಂದಿರಬೇಕು ಎಂದು ಅದು ಹೇಳಿದೆ.

"ಭಾರತ, ನೈಜೀರಿಯಾ ಮತ್ತು ಬ್ರೆಜಿಲ್‌ನಲ್ಲಿ, ಅನೌಪಚಾರಿಕ ಆರ್ಥಿಕತೆಯ ಕಾರ್ಮಿಕರ ಸಂಖ್ಯೆಯು ಲಾಕ್ ಡೌನ್ ಮತ್ತು ಇತರ ಕ್ರಮಗಳಿಂದ ಪ್ರಭಾವಿತವಾಗಿದೆ. ಭಾರತದಲ್ಲಿ ಸುಮಾರು 90 ಪರ್ಸೆಂಟ್ ಜನರು ಅನೌಪಚಾರಿಕ ಆರ್ಥಿಕತೆಯಲ್ಲಿ ಕೆಲಸ ಮಾಡುತ್ತಿದ್ದರೆ. ಸುಮಾರು 400 ಮಿಲಿಯನ್ ಕಾರ್ಮಿಕರು ಆಳವಾದ ಬಿಕ್ಕಟ್ಟಿಗೆ ಸಿಲುಕುವ ಅಪಾಯದಲ್ಲಿದ್ದಾರೆ'' ಎಂದು ಐಎಲ್‌ಒ ಹೇಳಿದೆ.

ಈ ಮೂಲಕ ಕೊರೊನಾವೈರಸ್ ಹರಡುವಿಕೆ ಮುಗಿದರೂ ಅದರ ಪರಿಣಾಮ ಹಲವು ತಿಂಗಳು ಕಾಲ ರಾಷ್ಟ್ರಗಳನ್ನು ಕಾಡಲಿದೆ ಎಂಬುದು ಕಂಡುಬರುತ್ತಿದೆ.

English summary

After World War 2 Coronavirus May Push 400 Million Indians To Poverty

The covid-19 pandemic has hit 81% of the world’s workforce and brought in the worst phase of joblessness since World War 2, says ILO
Story first published: Wednesday, April 8, 2020, 13:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more