For Quick Alerts
ALLOW NOTIFICATIONS  
For Daily Alerts

ಜಿಯೋ, ಏರ್‌ಟೆಲ್, ವಿಐನಿಂದ 5,000 ಕೋಟಿ ರೂ. ಸ್ಪೆಕ್ಟ್ರಂ ಬಳಕೆ ಶುಲ್ಕ ಪಾವತಿ

|

ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಹಾಗೂ ವಿಐ (ವೊಡಾಫೋನ್ ಐಡಿಯಾ) ಜನವರಿ - ಮಾರ್ಚ್‌ ತ್ರೈಮಾಸಿಕದ ಪರವಾನಗಿ ಶುಲ್ಕ ಹಾಗೂ ಸ್ಪೆಕ್ಟ್ರಮ್ ಬಳಕೆಯ ಶುಲ್ಕವಾಗಿ 5,000 ಕೋಟಿ ರೂಪಾಯಿಗಳನ್ನು ಪಾವತಿಸಿದೆ.

 

''ಮೂರು ಟೆಲಿಕಾಂ ಕಂಪನಿಗಳು ಯಾವುದೇ ವಿಳಂಬ ಮಾಡದೆ ತಮ್ಮ ಬಾಕಿ ಪಾವತಿಗಳನ್ನು ಮಾಡಿದ್ದು, ಇದು ಉತ್ತಮ ಬೆಳವಣಿಗೆ ಆಗಿದೆ. ಜನವರಿ-ಮಾರ್ಚ್ ತ್ರೈಮಾಸಿಕದ ಬಾಕಿ ಮಾರ್ಚ್ 25 ರೊಳಗೆ ಬರಬೇಕಾಗಿದೆ. ಒಂದು ವೇಳೆ ಸಣ್ಣ ಬಾಕಿ ಇದ್ದರೆ, ಅದು ಹಣಕಾಸು ವರ್ಷದ ಮುಕ್ತಾಯದ ಕಾರಣ ಮಾರ್ಚ್ ಅಂತ್ಯದ ವೇಳೆಗೆ ಪಾವತಿಸಲಾಗುತ್ತದೆ, "ಎಂದು ಉದ್ಯಮದ ಕಾರ್ಯನಿರ್ವಾಹಕರೊಬ್ಬರು ಈ ಕುರಿತು ತಿಳಿಸಿದ್ದಾರೆ.

ಜಿಯೋ, ಏರ್‌ಟೆಲ್, ವಿಐನಿಂದ 5,000 ಕೋಟಿ ಸ್ಪೆಕ್ಟ್ರಂ ಶುಲ್ಕ ಪಾವತಿ

ಹಣಕಾಸು ಮುಗ್ಗಟ್ಟಿಗೆ ಸಿಲುಕಿದ್ದ ವಿಐ ಕಳೆದ ತ್ರೈಮಾಸಿಕದಲ್ಲಿ ವಿಳಂಬವಾಗಿ ಬಾಕಿಯನ್ನು ಪಾವತಿ ಮಾಡಿತ್ತು. ಆದರೆ ಈ ಬಾರಿ ಮುಂಚಿತವಾಗಿ ತ್ರೈಮಾಸಿಕ ಬಾಕಿ ಹಣವನ್ನು ಪಾವತಿ ಮಾಡಿದೆ.

ಡಿಸೆಂಬರ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದ ಸಂಖ್ಯೆಯ ಪ್ರಕಾರ, ಏರ್‌ಟೆಲ್ ಸುಮಾರು 1,600 ಕೋಟಿ ರೂ., ಜಿಯೋ ಸುಮಾರು 2,000 ಕೋಟಿ ರೂ. ಮತ್ತು ವಿಐ 1000 ಕೋಟಿ ರೂ. ಪಾವತಿ ಮಾಡಿದೆ. ಈ ಮೂರು ಕಂಪನಿಗಳ ಹೊಂದಾಣಿಕೆಯ ಒಟ್ಟು ಆದಾಯದ (ಎಜಿಆರ್) 8% ಮತ್ತು 3% ಹಾಗೂ -5% ಆಗಿದೆ.

ಭಾರ್ತಿ ಏರ್‌ಟೆಲ್ ಮತ್ತು ವಿಐ ಒಟ್ಟು ಎಜಿಆರ್‌ ಸುಮಾರು 26,000 ಕೋಟಿ ರೂ. ಮತ್ತು 50,400 ಕೋಟಿ ರೂಪಾಯಿಗಳನ್ನು ಕ್ರಮವಾಗಿ ಪಾವತಿಸಬೇಕಾಗುತ್ತದೆ. ಆದರೆ ಇದೀಗ ಸಮಯಕ್ಕೆ ಸರಿಯಾಗಿ ತ್ರೈಮಾಸಿಕ ಬಾಕಿಯನ್ನು ಪಾವತಿ ಮಾಡಿವೆ.

English summary

AGR Dues: Reliance Jio, Airtel And VI Pay Rs 5000 Crore

Reliance Jio, Airtel And VI pays Rs 5000 Crore as License Fee and Spectrum usage charges for the jan-march quarter
Story first published: Monday, March 29, 2021, 9:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X