ಎಲ್ಐಸಿ ಐಪಿಒ: ವಿಮಾ ಸಂಸ್ಥೆಯ ಸ್ವತ್ತು ಮೌಲ್ಯ 463 ಬಿಲಿಯನ್ ಡಾಲರ್
ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಐಪಿಒ ಶೀಘ್ರದಲ್ಲೇ ನಡೆಯಲಿದೆ. ಈ ನಡುವೆ ದೇಶದಲ್ಲಿ ಅತೀ ದೊಡ್ಡ ವಿಮಾ ಕಂಪನಿಯಾದ ಎಲ್ಐಸಿಯ ಸ್ವತ್ತುಗಳ ಮೌಲ್ಯವು ಸುಮಾರು 463 ಬಿಲಿಯನ್ ಡಾಲರ್ ಆಗಿದೆ ಎಂದು ವರದಿ ಉಲ್ಲೇಖ ಮಾಡಿದೆ. ಇನ್ನು ಈ ಮೌಲ್ಯವು ಹಲವು ರಾಷ್ಟ್ರಗಳು ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) ಗಿಂತ ಅಧಿಕವಾಗಿದೆ. ಪಾಕಿಸ್ತಾನದ ಜಿಡಿಪಿಗಿಂತ ಭಾರತದ ವಿಮಾ ಸಂಸ್ಥೆ ಎಲ್ಐಸಿಯ ಸ್ವತ್ತು ಇದೆ ಎಂದು ವರದಿ ಹೇಳಿದೆ.
ಮಾಧ್ಯಮಗಳ ವರದಿಗಳ ಪ್ರಕಾರ, ಗ್ರಾಸ್ ರಿಟನ್ ಪ್ರಿಮೀಯಂ (ಜಿಡಬ್ಲ್ಯೂಪಿ) ನಲ್ಲಿ ಎಲ್ಐಸಿ ವಿಶ್ವದ ಐದನೇ ಸ್ಥಾನದಲ್ಲಿ ಇದೆ. ಇನ್ನು ಒಟ್ಟು ಸ್ವತ್ತುಗಳ ಪ್ರಕಾರ ಸಂಸ್ಥೆಯು ಜಾಗತಿಕವಾಗಿ ಹತ್ತನೇ ರ್ಯಾಂಕ್ನಲ್ಲಿ ಇದೆ. ಇನ್ನು ಎರಡನೇ ಸ್ಥಾನದಲ್ಲಿ ಇರುವ ಎಸ್ಬಿಐ ಲೈಫ್ಗಿಂತ ಎಲ್ಐಸಿಯ ಸ್ವತ್ತಿನ ಮೌಲ್ಯವು ಸುಮಾರು 16.3 ಪಟ್ಟು ಅಧಿಕವಾಗಿದೆ.
ಜ.7: ಕಚ್ಚಾತೈಲ ದರ ಮತ್ತೆ ಏರಿಕೆಯಾದ್ರೂ,ಭಾರತದಲ್ಲಿ ಇಂಧನ ದರ ಸ್ಥಿರ
ಎಲ್ಐಸಿಯು ಭಾರತದಲ್ಲಿ ಅತೀ ದೊಡ್ಡ ಸ್ವತ್ತು ನಿರ್ವಹಣೆ ಮಾಡುತ್ತಿರುವ ಸಂಸ್ಥೆಯಾಗಿದ್ದು, ಇದರ ಒಟ್ಟು ಮೌಲ್ಯ 36.7 ಟ್ರಿಲಿಯನ್ ಆಗಿದೆ. ಭಾರತದ ಹಣಕಾಸು ವರ್ಷದ 21ರ ಜಿಡಿಪಿಯ ಶೇಕಡ 18ಕ್ಕೆ ಎಲ್ಐಸಿಯ ಸ್ವತ್ತು ಮೌಲ್ಯ ಸಮವಾಗಿದೆ. ಈ ಎಲ್ಐಸಿ ಸಂಸ್ಥೆಯು ದೇಶದಲ್ಲಿ ಸುಮಾರು 65 ವರ್ಷಗಳಿಂದ ಜನರಿಗೆ ಜೀವ ವಿಮಾ ಸುರಕ್ಷೆಯನನ್ನು ನೀಡುತ್ತಾ ಬಂದಿದೆ. ಗ್ರಾಸ್ ರಿಟನ್ ಪ್ರಿಮೀಯಂ (ಜಿಡಬ್ಲ್ಯೂಪಿ) ಪ್ರಕಾರ ಎಲ್ಐಸಿ ದೇಶದ ಅತೀ ದೊಡ್ಡ ವಿಮಾ ಸಂಸ್ಥೆಯಾಗಿದೆ.

2050ಕ್ಕೆ ಪಿಂಚಣಿ ಬೇಡಿಕೆ ಅಧಿಕ
ಎಲ್ಐಸಿ ಮಾರುಕಟ್ಟೆ ಷೇರು ಶೇಕಡ 64.1ರಷ್ಟಿದೆ. ಇನ್ನು ಇದರ ಎನ್ಬಿಪಿ ಮಾರುಕಟ್ಟೆ ಷೇರು ಶೇಕಡ 74.6ರಷ್ಟಿದೆ. ಕ್ರಿಸಿಲ್ ಸಂಶೋಧನೆಯ ಪ್ರಕಾರ ಹೆಚ್ಚಾಗಿ ಭಾರತದಲ್ಲಿ ಹಿರಿಯ ನಾಗರಿಕರು ಅಂದರೆ 60 ವರ್ಷ ಹಾಗೂ ಅದಕ್ಕಿಂತ ಅಧಿಕ ವರ್ಷದವರು ಜೀವ ವಿಮೆಯಲ್ಲಿ ಇದ್ದಾರೆ. 2015ರಲ್ಲಿ ಸುಮಾರು 116.8 ಮಿಲಿಯನ್ ಹಿರಿಯ ನಾಗರಿಕರು ಎಲ್ಐಸಿಯಲ್ಲಿ ಇದ್ದು, 2050 ಆಗುವಷ್ಟರಲ್ಲಿ ಇದರ ಸಂಖ್ಯೆಯು ಸುಮಾರು 316.8 ಮಿಲಿಯನ್ಗೆ ಏರಿಕೆ ಆಗಲಿದೆ ಎಂಬುವುದು ಕ್ರಿಸಿಲ್ನ ಅಭಿಪ್ರಾಯವಾಗಿದೆ. ಇನ್ನು ಹಿರಿಯ ನಾಗರಿಕರ ಷೇರು 2015ರಲ್ಲಿ ಶೇಕಡ 9ರಷ್ಟು ಇದ್ದು, ಅದು 2050ಕ್ಕೆ ಶೇಕಡ 17ಕ್ಕೆ ಏರಿಕೆ ಕಾಣಲಿದೆ. ಇದರಿಂದಾಗಿ ಪಿಂಚಣಿಯ ಬೇಡಿಕೆ ಅಧಿಕವಾಗಲಿದೆ ಎಂದು ಕ್ರಿಸಿಲ್ ಸಂಶೋಧನೆಯು ಉಲ್ಲೇಖ ಮಾಡಿದೆ.
ಎಲ್ಐಸಿ ಐಪಿಒ ಈ ವರ್ಷದ ಬಹುನಿರೀಕ್ಷಿತ ಐಪಿಒಗಳಲ್ಲಿ ಒಂದಾಗಿದ್ದು ಮಾಧ್ಯಮಗಳ ವರದಿಗಳ ಪ್ರಕಾರ ಜನವರಿ ಮೂರನೇ ವಾರದಲ್ಲಿ ಎಲ್ಐಸಿ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಐಪಿಒ ಕುರಿತು ನಿರೀಕ್ಷೆಗಳ ಕರಡನ್ನು ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಎಲ್ಐಸಿ ಐಪಿಒ 2021-2022ನೇ ಆರ್ಥಿಕ ವರ್ಷದ ಕೊನೆಯಲ್ಲಿ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ವರದಿಯು ಹೇಳಿದೆ. ಹಾಗೆಯೇ ಎಲ್ಐಸಿ ಐಪಿಒ ನಿಗದಿತ ಸಮಯಕ್ಕಿಂತ ತಡವಾಗಿ ನಡೆಯುವ ಸಾಧ್ಯತೆ ಇದೆ ಎಂಬ ವದಂತಿಯನ್ನು ತಳ್ಳಿ ಹಾಕಿದೆ.
ಸಾರಿಗೆ ಸಚಿವಾಲಯದ ಈ ನಿರ್ಧಾರದಿಂದ ಇನ್ಮುಂದೆ ಕಾರು ದುಬಾರಿ..
ಇನ್ನು ಮಾಧ್ಯಮಗಳ ವರದಿ ಪ್ರಕಾರ ಎಲ್ಐಸಿ ಐಪಿಒ ಒಂದು ಲಕ್ಷ ಕೋಟಿ ರೂಪಾಯಿದ್ದು ಆಗಿದೆ. ಇದು ಭಾರತದ ಅತೀ ದೊಡ್ಡ ಐಪಿಒ ಆಗಲಿದೆ. ಎಲ್ಐಸಿ ಐಪಿಒ ಪೇಟಿಎಂ ಐಪಿಒಗಿಂತ ದೊಡ್ಡ ಪ್ರಮಾಣದಲ್ಲಿ ಇರಲಿದೆ ಎಂದು ಹೇಳಲಾಗಿದೆ. ಸುಮಾರು 18,300 ಕೋಟಿ ರೂಪಾಯಿ ಸಂಗ್ರಹ ಮಾಡುವ ಉದ್ದೇಶದಲ್ಲಿ ಪೇಟಿಎಂ ಸಂಸ್ಥೆಯು ಕಳೆದ ಸೆಪ್ಟೆಂಬರ್ನಲ್ಲಿ ಐಪಿಒ ನಡೆಸಿದ್ದು ಈ ಐಪಿಒ ಈವರೆಗೆ ದೇಶದ ಅತೀ ದೊಡ್ಡ ಐಪಿಒ ಎಂಬ ಕೀರ್ತಿಗೆ ಪಾತ್ರವಾಗಿದೆ. ಇನ್ನು ಎಲ್ಐಸಿ ಐಪಿಒದಲ್ಲಿ ಶೇಕಡ ಹತ್ತರಷ್ಟು ಪಾಲನ್ನು ಪಾಲಿಸಿದಾರರಿಗೆ ಮೀಸಲಿಡಲಾಗಿದೆ.