For Quick Alerts
ALLOW NOTIFICATIONS  
For Daily Alerts

ಏರ್ ಟೆಲ್ ನಿಂದ ಪ್ರೀಪೇಯ್ಡ್ ಗ್ರಾಹಕರಿಗೆ ಡಬ್ಕುಡಬಲ್ ಡೇಟಾ ಆಫರ್

By ಅನಿಲ್ ಆಚಾರ್
|

ಏರ್ ಟೆಲ್ ನಿಂದ ಪ್ರೀಪೇಯ್ಡ್ ಗ್ರಾಹಕರಿಗೆ ಡಬ್ಕುಡಬಲ್ ಡೇಟಾ ಆಫರ್ ನೀಡಲಾಗುತ್ತಿದೆ. 98 ರುಪಾಯಿ ಪ್ರೀಪೇಯ್ಡ್ ಅಪ್ ಗ್ರೇಡ್ ಪ್ರೋಗಾಂನಲ್ಲಿ ಈ ಆಫರ್ ಸಿಗುತ್ತದೆ. ಇದರಲ್ಲಿ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿಗೆ 12 GB ಹೈಸ್ಪೀಡ್ ಡೇಟಾ ದೊರೆಯುತ್ತದೆ. ಈ ಹಿಂದೆ ಏರ್ ಟೆಲ್ ನಿಂದ 6 GB ಹೈಸ್ಪೀಡ್ ಡೇಟಾ ದೊರೆಯುತ್ತಿತ್ತು.

ಈ ಆಫರ್ ಇರುವುದು ಡೇಟಾಗೆ ಮಾತ್ರ. ಎಸ್ಸೆಮ್ಮೆಸ್ ಅಥವಾ ಕಾಲ್ ಅನುಕೂಲಗಳು ಸಿಗಲ್ಲ. ಇನ್ನು 500, 1000 ಹಾಗೂ 5000 ರುಪಾಯಿ ಅಪ್ ಗ್ರೇಡ್ ವೋಚರ್ ಗಳ ಜತೆಗೆ ಹೆಚ್ಚಿನ ಟಾಕ್ ಟೈಮ್ ನೀಡಲಾಗುತ್ತಿದೆ. ಏರ್ ಟೆಲ್ ನೀಡುತ್ತಿರುವ 98 ರುಪಾಯಿಯ ಪ್ಲ್ಯಾನ್ ಅನ್ನು ರೂಪಿಸಿರುವುದು ಜಿಯೋ ಪ್ರೀಪೇಯ್ಡ್ ಆಫರ್ ಗಮನದಲ್ಲಿ ಇಟ್ಟುಕೊಂಡು ಎನ್ನಲಾಗುತ್ತಿದೆ.

 ಜಿಯೋದಿಂದ 101 ರುಪಾಯಿ ವೋಚರ್
 

ಜಿಯೋದಿಂದ 101 ರುಪಾಯಿ ವೋಚರ್

ಜಿಯೋದ 101 ರುಪಾಯಿ ವೋಚರ್ ನಲ್ಲಿ 12 ಜಿಬಿ ಡೇಟಾ ದೊರೆಯುತ್ತದೆ. ಇದರ ಜತೆಗೆ ಜಿಯೋದಿಂದ ಇತರ ನೆಟ್ ವರ್ಕ್ ಗೆ 1000 ನಿಮಿಷಗಳ ಕರೆ ಮಾಡಬಹುದು. ಆದರೆ ಜಿಯೋದಲ್ಲಿ ಇಷ್ಟೇ ವ್ಯಾಲಿಡಿಟಿ ಅಂತ ಇಲ್ಲ. ಬೇಸ್ ಪ್ಲ್ಯಾನ್ ಎಲ್ಲಿಯ ತನಕ ಇರುತ್ತದೋ ಅಲ್ಲಿಯವರೆಗೆ ಇದು ಬರುತ್ತದೆ. ಆದರೆ ಏರ್ ಟೆಲ್ ಪ್ರೀಪೇಯ್ಡ್ ಪ್ಲ್ಯಾನ್ ನಲ್ಲಿ 28 ದಿನಗಳ ವ್ಯಾಲಿಡಿಟಿ ಇದೆ.

 ಏರ್ ಟೆಲ್ ಆಫರ್ ಏನಿದೆ?

ಏರ್ ಟೆಲ್ ಆಫರ್ ಏನಿದೆ?

ಏರ್ ಟೆಲ್ ನಿಂದ 48 ರುಪಾಯಿಯ ಪ್ರೀಪೇಯ್ಶ್ ಪ್ಲ್ಯಾನ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 3 GB ಡೇಟಾ ಹಾಗೂ 28 ದಿನಗಳ ವ್ಯಾಲಿಡಿಟಿ ಇದೆ. ಇನ್ನು ಜಿಯೋದಲ್ಲಿ ಕೂಡ 151 ರುಪಾಯಿಯ ವರ್ಕ್ ಫ್ರಮ್ ಹೋಮ್ ಪ್ಯಾಕೇಜ್ ಇದ್ದು, ಇದರಲ್ಲಿ 30 ಜಿಬಿ 4G ಡೇಟಾ, 30 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ.

 ವೊಡಾಫೋನ್ ಪ್ರೀಪೇಯ್ಡ್ ಪ್ಲ್ಯಾನ್ ಹೀಗಿದೆ

ವೊಡಾಫೋನ್ ಪ್ರೀಪೇಯ್ಡ್ ಪ್ಲ್ಯಾನ್ ಹೀಗಿದೆ

ವೊಡಾಫೋನ್ ನಲ್ಲಿ 98 ರುಪಾಯಿಗಳ ಪ್ರೀಪೇಯ್ಡ್ ಪ್ಲ್ಯಾನ್ ಗೆ 6 GB ಡೇಟಾ, 28 ದಿನಗಳ ವ್ಯಾಲಿಡಿಟಿ ಇರುತ್ತದೆ. ಏರ್ ಟೆಲ್ ನಿಂದ 500, 1000, 5000 ರುಪಾಯಿ ವೋಚರ್ ಗೆ ಹೆಚ್ಚಿನ ಟಾಕ್ ಟೈಮ್ ಸಿಗುತ್ತಿದೆ. ಒಟ್ಟಾರೆಯಾಗಿ ದರ ಸಮರದಲ್ಲಿ ಎಲ್ಲ ಟೆಲಿಕಾಂ ಸಂಸ್ಥೆಗಳು ಸಹ ವಿವಿಧ ಬಗೆಯ ಡೇಟಾ ಆಫರ್ ಗಳನ್ನು ನೀಡುತ್ತಿವೆ. ಅದರಲ್ಲೂ ಲಾಕ್ ಡೌನ್ ಸಂದರ್ಭದಲ್ಲಿ ವರ್ಕ್ ಫ್ರಮ್ ಹೋಮ್ ಗಮನದಲ್ಲಿ ಇಟ್ಟುಕೊಂಡೇ ಗ್ರಾಹಕರನ್ನು ಸೆಳೆಯುತ್ತಿವೆ.

English summary

Airtel Double Data Benefit For 98 Rupees Prepaid Plan

Bharti Airtel double data benefit offer for 98 rupees prepaid plan. Here is the complete details.
Story first published: Sunday, May 17, 2020, 16:25 [IST]
Company Search
COVID-19