For Quick Alerts
ALLOW NOTIFICATIONS  
For Daily Alerts

ಏರ್ ಟೆಲ್ Xstream ಫೈಬರ್ ಹೋಮ್ ಖರೀದಿಗೆ 1000 GB ಹೆಚ್ಚುವರಿ ಡೇಟಾ

|

ಸ್ವಾತಂತ್ರ್ಯ ದಿನಾಚರಣೆ ಕೊಡುಗೆಯಾಗಿ ಏರ್ ಟೆಲ್ ನಿಂದ Xstream ಫೈಬರ್ ಹೋಮ್ ಬ್ರಾಡ್ ಬ್ಯಾಂಡ್ ಸಂಪರ್ಕ ಪಡೆಯುವವರಿಗೆ 1000 GB ಹೆಚ್ಚುವರಿ ಡೇಟಾ ಒದಗಿಸಲಾಗುವುದು ಎಂದು ಶುಕ್ರವಾರ (ಆಗಸ್ಟ್ 14, 2020) ಏರ್ ಟೆಲ್ ತಿಳಿಸಿದೆ. ಈ ಕೊಡುಗೆ ಸೀಮಿತ ಅವಧಿಗೆ ಇರುತ್ತದೆ.

 

ಅನ್ ಲಿಮಿಟೆಡ್ ಡೇಟಾ ಮತ್ತು ಪ್ರೀಪೇಯ್ಡ್ ಬ್ರಾಡ್ ಬ್ಯಾಂಡ್ ಪ್ಲಾನ್ ಹೊರತುಪಡಿಸಿ, ಏರ್ ಟೆಲ್ Xstream ಫೈಬರ್ ಪ್ಲಾನ್ ಎಲ್ಲಕ್ಕೂ ಈ ಕೊಡುಗೆ ಅನ್ವಯ ಆಗುತ್ತದೆ. ಈ ಹೆಚ್ಚುವರಿ ಡೇಟಾ ಆರು ತಿಂಗಳ ಅವಧಿಗೆ ಮಾತ್ರ ಇರುತ್ತದೆ ಎಂದು ಮಾಹಿತಿ ನೀಡಲಾಗಿದೆ.

ಏರ್‌ಟೆಲ್‌ ಅನ್‌ಲಿಮಿಟೆಡ್‌ ಬ್ರಾಡ್ ಬ್ಯಾಂಡ್‌ಗೆ 299 ರುಪಾಯಿ

ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಏರ್ ಟೆಲ್ ನಿಂದ Xstream ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ಒದಗಿಸಲು ಎಲ್ಲ ಪ್ರಮುಖ ನಗರಗಳಲ್ಲಿ ದೊರೆಯಲಿದೆ.

ಏರ್ ಟೆಲ್ Xstream ಫೈಬರ್ ಹೋಮ್ ಖರೀದಿಗೆ 1000 GB ಹೆಚ್ಚುವರಿ ಡೇಟಾ

ಸ್ವಾತಂತ್ರ್ಯ ದಿನಾಚರಣೆ ಭಾಗವಾಗಿ ಏರ್ ಟೆಲ್ ನಿಂದ ಸೀಮಿತ ಅವಧಿಯ ಕೊಡುಗೆ ಜಾರಿಗೆ ತರಲಾಗಿದೆ. ಈ ಆಫರ್ ಅಡಿಯಲ್ಲಿ ಯಾರು ಏರ್ ಟೆಲ್ Xstream ಫೈಬರ್ ಹೋಮ್ ಬ್ರಾಡ್ ಬ್ಯಾಂಡ್ ಹೊಸ ಸಂಪರ್ಕವನ್ನು ಪಡೆಯುತ್ತಾರೋ ಅಂಥವರಿಗೆ ಹೆಚ್ಚುವರಿಯಾಗಿ 1000 GB ಉಚಿತ ಡೇಟಾ ನೀಡುತ್ತಿದೆ ಕಂಪೆನಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೊರೊನಾ ಬಿಕ್ಕಟ್ಟಿನ ವೇಳೆಯಲ್ಲಿ ಜನರು ವರ್ಕ್ ಫ್ರಮ್ ಮಾಡುವುದು ಹೆಚ್ಚಾಗಿದೆ. ಜತೆಗೆ ಮಕ್ಕಳ ಆನ್ ಲೈನ್ ಕ್ಲಾಸ್ ಗಳು, ಒಟಿಟಿ (ಓವರ್ ದ ಟಾಪ್) ಮನರಂಜನೆ ಬಳಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬ್ರಾಡ್ ಬ್ಯಾಂಡ್ ಬೇಡಿಕೆ ಹೆಚ್ಚಾಗಿದೆ.

ಏರ್ ಟೆಲ್ Xstream ಫೈಬರ್ ನಿಂದ ಅಲ್ಟ್ರಾ ಫಾಸ್ಟ್ ಬ್ರಾಡ್ ಬ್ಯಾಂಡ್ ಒದಗಿಸುತ್ತಿದ್ದು, 1 Gbps ತನಕದ ವೇಗ ದೊರೆಯುತ್ತದೆ. ಇಂದಿನ ದಿನಮಾನದ ಮನೆಗೆ ಏಕಕಾಲಕ್ಕೆ ಬೇಕಾಗುವ ಹಲವು ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಂಪೆನಿ ತಿಳಿಸಿದೆ.

English summary

Airtel Offers 1000 GB Free Data On XstreamFiber New Connection

Independence day celebration offer of 1000 GB additional free data by Airtel on purchase of XstreamFiber announced on Friday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X