For Quick Alerts
ALLOW NOTIFICATIONS  
For Daily Alerts

ಏರ್ ಟೆಲ್ ನಿಂದ 279 ಹಾಗೂ 379 ರುಪಾಯಿಯ ಹೊಸ ಪ್ರೀಪೇಯ್ಡ್ ಪ್ಲಾನ್

|

ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ಗಳಲ್ಲಿ ಒಂದಾದ ಭಾರ್ತಿ ಏರ್ ಟೆಲ್ ತನ್ನ ಗ್ರಾಹಕರಿಗೆ ಎರಡು ಹೊಸ ಪ್ರೀಪೇಯ್ಡ್ ಪ್ಲಾನ್ ಪರಿಚಯಿಸುತ್ತಿದೆ. 279 ಹಾಗೂ 379 ರುಪಾಯಿಗಳ ಈ ಎರಡು ಪ್ರೀಪೇಯ್ಡ್ ಪ್ಲಾನ್ ಬಗ್ಗೆ ಭಾರ್ತಿ ಏರ್ ಟೆಲ್ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿ ಲಭ್ಯ ಇದೆ.

 

ಅಂದ ಹಾಗೆ ಕಂಪೆನಿಯು ತಿಂಗಳ ಕನಿಷ್ಠ ರೀಚಾರ್ಜ್ ಮೊತ್ತವನ್ನು 45 ರುಪಾಯಿಗೆ ಏರಿಸಿದ ನಂತರ ಈ ಎರಡು ಯೋಜನೆ ಪರಿಚಯಿಸಲಾಗಿದೆ. ಇದಕ್ಕೂ ಮುನ್ನ ಒಂದು ವರ್ಷಗಳ ಕಾಲ ಒಂದು ತಿಂಗಳಿಗೆ ಕನಿಷ್ಠ ರೀಚಾರ್ಜ್ ಮೊತ್ತ 35 ರುಪಾಯಿಯೇ ಇತ್ತು. ಈ ಎರಡು ಹೊಸ ಪ್ಲಾನ್ ನಲ್ಲಿ ಅನಿಯಮಿತ ಕರೆಗಳು, ಡೇಟಾ ಮತ್ತು ಎಸ್ಸೆಮ್ಮೆಸ್ ಸೇವೆಗಳು ಇವೆ. ಹೊಸ ಪ್ರೀಪೇಯ್ಡ್ ಪ್ಲಾನ್ ಆಫರ್ ನ ಮಾಹಿತಿ ಹೀಗಿದೆ.

ಏರ್ ಟೆಲ್ 279 ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್

ಏರ್ ಟೆಲ್ 279 ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್

ವೆಬ್ ಸೈಟ್ ನಲ್ಲಿನ ಮಾಹಿತಿ ಪ್ರಕಾರ ಏರ್ ಟೆಲ್ ನ 279 ಪ್ರೀಪೇಯ್ಡ್ ಪ್ಲಾನ್ ನಲ್ಲಿ ಯಾವುದೇ ನೆಟ್ ವರ್ಕ್ ಗೆ ಅನಿಯಮಿತವಾದ ಕರೆ ಮಾಡಬಹುದು. ದಿನಕ್ಕೆ ಒಂದೂವರೆ ಜಿ.ಬಿ. ಡೇಟಾ ಮತ್ತು ನೂರು ಎಸ್ಸೆಮ್ಮೆಸ್ ಉಚಿತ ಇರುತ್ತದೆ. ಇಪ್ಪತ್ತೆಂಟು ದಿನಗಳ ವ್ಯಾಲಿಡಿಟಿ ಇರುತ್ತದೆ. ಇವೆಲ್ಲದರ ಜತೆಗೆ ಗ್ರಾಹಕರಿಗೆ ನಾಲ್ಕು ಲಕ್ಷ ಮೌಲ್ಯದ ಎಚ್ ಡಿಎಫ್ ಸಿ ಲೈಫ್ ಇನ್ಷೂರೆನ್ಸ್ ಒದಗಿಸುತ್ತಿದೆ.

ಏರ್ ಟೆಲ್ 379 ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್

ಏರ್ ಟೆಲ್ 379 ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್

ಈ ಪ್ಲಾನ್ ನಲ್ಲಿ ಎಂಬತ್ನಾಲ್ಕು ದಿನಗಳ ವ್ಯಾಲಿಡಿಟಿ ಇರುತ್ತದೆ. ಯಾವುದೇ ನೆಟ್ ವರ್ಕ್ ಗೆ ಅನಿಯಮಿತವಾದ ಕರೆ, ಆರು ಜಿ.ಬಿ. ಡೇಟಾ ಹಾಗೂ ಒಂಬೈನೂರು ಉಚಿತ ಎಸ್ಸೆಮ್ಮೆಸ್ ದೊರೆಯುತ್ತದೆ. ಈ ಪ್ಲಾನ್ ನ ಜತೆಗೆ ಗ್ರಾಹಕರಿಗೆ ಫಾಸ್ ಟ್ಯಾಗ್ ಖರೀದಿಗೆ ನೂರು ರುಪಾಯಿ ಕ್ಯಾಶ್ ಬ್ಯಾಕ್ ಬರುತ್ತದೆ. ಈ ಎರಡೂ ಪ್ಯಾಕ್ ಗಳಲ್ಲಿ ಹೆಚ್ಚುವರಿಯಾಗಿ ಶಾ ಅಕಾಡೆಮಿಯಿಂದ ನಾಲ್ಕು ವಾರಗಳ ಕೋರ್ಸ್, ಉಚಿತ ವಿಂಕ್ ಮ್ಯೂಸಿಕ್ ಮತ್ತು ಏರ್ ಟೆಲ್ ಎಕ್ಸ್ ಟ್ರೀಮ್ ಸರ್ವೀಸ್ ನ ಪ್ರೀಮಿಯಂ ಕಂಟೆಂಟ್ ದೊರೆಯುತ್ತದೆ.

ರಿಲಯನ್ಸ್ ಜಿಯೋ 2020 ಹ್ಯಾಪಿ ನ್ಯೂ ಇಯರ್ ಕೊಡುಗೆ
 

ರಿಲಯನ್ಸ್ ಜಿಯೋ 2020 ಹ್ಯಾಪಿ ನ್ಯೂ ಇಯರ್ ಕೊಡುಗೆ

ಈಚೆಗೆ ರಿಲಯನ್ಸ್ ಜಿಯೋ ಕೂಡ ಹೊಸದಾಗಿ 2020 ಹ್ಯಾಪಿ ನ್ಯೂ ಇಯರ್ ಕೊಡುಗೆ ಘೋಷಣೆ ಮಾಡಿತ್ತು. ಸ್ಮಾರ್ಟ್ ಫೋನ್ ಮತ್ತು ಜಿಯೋ ಫೋನ್ ಬಳಸುವವರಿಗಾಗಿ ಈ ಪ್ಲಾನ್ ಇತ್ತು. ವಾರ್ಷಿಕ ಪ್ರೀಪೇಯ್ಡ್ ಯೋಜನೆ ಇದಾಗಿದ್ದು, ಇದರಲ್ಲಿ ಹಲವು ಕೊಡುಗೆಗಳು ಒಳಗೊಂಡಿವೆ. ಇದರ ದರವು 2020 ರುಪಾಯಿ ಆಗಿದೆ.

ಎರಡು ಭಾಗದಲ್ಲಿ ಕೊಡುಗೆ

ಎರಡು ಭಾಗದಲ್ಲಿ ಕೊಡುಗೆ

ರಿಲಯನ್ಸ್ 2020 ಹ್ಯಾಪಿ ನ್ಯೂ ಇಯರ್ ಕೊಡುಗೆ ಎರಡು ಭಾಗದಲ್ಲಿ ಬರುತ್ತದೆ. ಮೊದಲನೆಯದಾಗಿ ಸ್ಮಾರ್ಟ್ ಫೋನ್ ಗ್ರಾಹಕರಿಗೆ ಒಂದು ವರ್ಷಕ್ಕೆ ಅನಿಯಮಿತವಾದ ಸೇವೆಗಳನ್ನು ಪಡೆಯುತ್ತಾರೆ. ಮತ್ತೊಂದರಲ್ಲಿ 2020 ರುಪಾಯಿಗೆ ಜಿಯೋಫೋನ್ ಖರೀದಿಸಬಹುದಾಗಿದ್ದು, ಜತೆಗೆ ಒಂದು ವರ್ಷದ ಅನಿಯಮಿತ ಸೇವೆ ನೀಡುತ್ತದೆ.

English summary

Airtel's New 279 And 379 Prepaid Plan

Bharti Airtel announced new 279 and 379 rupees prepaid plan. Here is the complete details.
Story first published: Thursday, January 2, 2020, 19:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X