For Quick Alerts
ALLOW NOTIFICATIONS  
For Daily Alerts

ಶುಲ್ಕವನ್ನು ಹೆಚ್ಚಿಸಲು ರೆಡಿಯಾಗಿವೆ ಏರ್‌ಟೆಲ್, ವೊಡಾಪೋನ್, ಐಡಿಯಾ

|

ದೇಶದ ಬಹುದೊಡ್ಡ ಟೆಲಿಕಾಂ ಕಂಪನಿಗಳಾದ ವೊಡಾಫೋನ್-ಐಡಿಯಾ, ಹಾಗೂ ಏರ್‌ಟೆಲ್‌ ಕರೆ ಮತ್ತು ಡೇಟಾ ಮೇಲಿನ ಶುಲ್ಕವನ್ನು ಹೆಚ್ಚಿಸಲು ಮುಂದಾಗಿವೆ.

ಈಗಾಗಲೇ ಹೆಚ್ಚುತ್ತಿರುವ ಬಾಕಿಯನ್ನು ಪೂರೈಸಲು ಕರೆ ಮತ್ತು ಡೇಟಾ ಮೇಲಿನ ಶುಲ್ಕವನ್ನು ಹೆಚ್ಚಿಸಲು ಯೋಜನೆ ಮಾಡಲಾಗುತ್ತಿದೆ ಎಂದು ದೇಶದ 2 ಬಹುದೊಡ್ಡ ಟೆಲಿಕಾಂ ಕಂಪನಿಗಳು ಸೋಮವಾರ ಘೋಷಿಸಿವೆ. ಆದರೆ ಎಷ್ಟು ಶುಲ್ಕ ಹೆಚ್ಚಾಗಲಿದೆ ಎಂಬುದನ್ನು ತಿಳಿಸಿಲ್ಲ. ಹೊಸ ದರವು ಡಿಸೆಂಬರ್‌ನಿಂದ ಅನ್ವಯವಾಗಲಿದೆ.

ಶುಲ್ಕವನ್ನು ಹೆಚ್ಚಿಸಲು ರೆಡಿಯಾಗಿವೆ ಏರ್‌ಟೆಲ್, ವೊಡಾಪೋನ್, ಐಡಿಯಾ

 

2019-20ರ ಹಣಕಾಸಿನ ವರ್ಷದ 2ನೇ ತ್ರೈಮಾಸಿಕ ಅವಧಿಯಲ್ಲಿ ಏರ್‌ಟೆಲ್, ವೊಡಾಫೋನ್-ಐಡಿಯಾ ಒಟ್ಟಾರೆ 74,000 ಕೋಟಿ ರುಪಾಯಿ ನಷ್ಟ ಅನುಭವಿಸಿವೆ.

ದಿವಾಳಿಯತ್ತ ವೊಡಾಫೋನ್, ಐಡಿಯಾ: ಭಾರತದಲ್ಲಿ ಸೇವೆ ಬಂದ್?

ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಹೊಂದಾಣಿಕೆಯ ಒಟ್ಟು ಆದಾಯ ಕುರಿತಾಗಿ ವೋಡಾಫೋನ್ , ಐಡಿಯಾ ಏರ್‌ಟೆಲ್ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರುಪಾಯಿಯಷ್ಟು ಬಾಕಿ ಮೊತ್ತ ಹಾಗೂ ಬಡ್ಡಿ ಸೇರಿದ ಹಣವನ್ನು ಪಾವತಿಸಬೇಕಾಗಿತ್ತು. ಹೀಗಾಗಿ ಈ ಸಂಸ್ಥೆಗಳ ಆದಾಯದಲ್ಲಿ ತೀವ್ರ ಕುಸಿತ ದಾಖಲಾಗಿದ್ದು ನಷ್ಟದ ಹಾದಿ ಹಿಡಿದಿವೆ.

ಹೆಚ್ಚಿದ ಬಾಕಿಯಿಂದಾಗಿ ಈ ಕಂಪನಿಗಳು ಕರೆ ಮತ್ತು ಡೇಟಾ ಶುಲ್ಕ ಹೆಚ್ಚಳಕ್ಕೆ ಮುಂದಾಗಿವೆ. ಏರ್‌ಟೆಲ್-ವೊಡಾಫೋನ್ ಕಂಪನಿಗಳು ದರ ಹೆಚ್ಚಳವನ್ನು ಮಾಡಿದ ಬಳಿಕ ಜಿಯೋ ಕೂಡ ದರ ಹೆಚ್ಚಿಸುವ ಸಾಧ್ಯತೆ ಇದೆ. ಈಗಾಗಲೇ ಅಕ್ಟೋಬರ್‌ನಿಂದ ಜಿಯೋಯಿಂದ ಬೇರೆ ಯಾವುದೇ ನೆಟ್‌ವರ್ಕ್‌ಗೆ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸುತ್ತದೆ. ಆರಂಭಿಕ 3 ವರ್ಷಗಳಲ್ಲಿ ಜಿಯೋ ವಾಯ್ಸ್ ಕರೆ ಉಚಿತವಾಗಿತ್ತು.

English summary

Airtel,Vodafone,Idea Plans To Increase Call And Data Charges

India's Biggest Telecom Companies like Airtel, Vodafone-Idea announced their plans to raise tarriffs for the viability of operations amid mounting dues.
Story first published: Tuesday, November 19, 2019, 12:32 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more