For Quick Alerts
ALLOW NOTIFICATIONS  
For Daily Alerts

ಏರ್ ಟೆಲ್ ಬ್ರಾಡ್ ಬ್ಯಾಂಡ್ ನಿಂದ ಜಿಯೋ ಫೈಬರ್ ಗೆ ಸಡ್ಡು; ಹೊಸ ಪ್ಲಾನ್ ಗಳು ಶುರು

|

ಭಾರ್ತಿ ಏರ್ ಟೆಲ್ ನಿಂದ ಭಾನುವಾರ ಏರ್ ಟೆಲ್ Xstream ಜತೆಗೆ ಹೊಸ ಪ್ಲಾನ್ ಗಳನ್ನು ಆರಂಭಿಸಲಾಗಿದೆ. ಪ್ಲಾನ್ ಆರಂಭಿಕ ದರ 499 ರುಪಾಯಿಯಿಂದ ಶುರುವಾಗುತ್ತದೆ. ಈಚೆಗಷ್ಟೇ ರಿಲಯನ್ಸ್ ಜಿಯೋ ಫೈಬರ್ ನಿಂದ 399 ರುಪಾಯಿ ಆರಂಭಿಕ ದರದೊಂದಿಗೆ ಪ್ಲಾನ್ ಶುರು ಮಾಡಲಾಗಿತ್ತು.

 

ಏರ್ ಟೆಲ್ Xstream ಫೈಬರ್ ಹೋಮ್ ಖರೀದಿಗೆ 1000 GB ಹೆಚ್ಚುವರಿ ಡೇಟಾ

ಏರ್ ಟೆಲ್ Xstream ಎಲ್ಲವನ್ನೂ ಒಳಗೊಂಡ ಪ್ಲಾನ್ Xstream ಫೈಬರ್ 1 Gbps ವೇಗದ ತನಕ ದೊರೆಯುತ್ತದೆ. ಅನಿಯಮಿತ ಡೇಟಾ, ಏರ್ ಟೆಲ್ Xstream ಆಂಡ್ರಾಯಿಡ್ 4K ಟಿವಿ ಬಾಕ್ಸ್ ಹಾಗೂ ಎಲ್ಲ OTT ಕಂಟೆಂಟ್ ಗೆ ಬಳಸಲು ಅವಕಾಶ ದೊರೆಯುತ್ತದೆ.

ಜಿಯೋ ಫೈಬರ್ ಹೊಸ ಪ್ಲಾನ್

ಜಿಯೋ ಫೈಬರ್ ಹೊಸ ಪ್ಲಾನ್

ಜಿಯೋ ಫೈಬರ್ ನಿಂದ ಕಳೆದ ಸೋಮವಾರದಂದು ಹೊಸ ಪ್ಲಾನ್ ಗಳ ದರವನ್ನು ಘೋಷಣೆ ಮಾಡಲಾಗಿತ್ತು. ಅದರಲ್ಲಿ ಕನಿಷ್ಠ ಅಥವಾ ಆರಂಭದ ದರ 399 ರುಪಾಯಿ ಇದೆ. ಆ ನಂತರ 999 ಹಾಗೂ 1499ರ ಪ್ಲಾನ್ ಗಳು ಸಹ ಇವೆ. ಹೆಚ್ಚಿನ ದರದ ಪ್ಲಾನ್ ನಲ್ಲಿ ಡೇಟಾ ಹೆಚ್ಚಿನ ವೇಗ ಹಾಗೂ ಒಟಿಟಿ ಅಪ್ಲಿಕೇಷನ್ ಗಳಿಗೆ ಸಬ್ ಸ್ಕ್ರಿಪ್ಷನ್ ದೊರೆಯುತ್ತವೆ. ಇನ್ನು ಒಂದು ತಿಂಗಳ ಟ್ರಯಲ್ 399 ರುಪಾಯಿಗೂ ದೊರೆಯಲಿದೆ. ಏರ್ ಟೆಲ್ Xstream ಪೈಬರ್ ಪ್ಲಾನ್ ನಲ್ಲಿ 3999 ರುಪಾಯಿಯ ಏರ್ ಟೆಲ್ Xstream ಬಾಕ್ಸ್ ಸಹ ಒಳಗೊಂಡಿರುತ್ತದೆ. ಯಾವುದೇ ಟೀವಿ ಸ್ಮಾರ್ಟ್ ಟೀವಿ ಆಗುತ್ತದೆ.

10,000ಕ್ಕೂ ಹೆಚ್ಚು ಸಿನಿಮಾಗಳು ಮತ್ತು ಶೋಗಳು

10,000ಕ್ಕೂ ಹೆಚ್ಚು ಸಿನಿಮಾಗಳು ಮತ್ತು ಶೋಗಳು

ಇದರಿಂದ ಲೈವ್ ಟಿವಿ ಚಾನೆಲ್ ಗಳಿಗೆ ಮತ್ತು ವಿವಿಧ ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಷನ್ ಬಳಕೆಗೆ ಸಂಪರ್ಕ ದೊರೆಯುತ್ತದೆ. ಏರ್ ಟೆಲ್ Xstream ಆಂಡ್ರಾಯಿಡ್ 4K ಟಿವಿ ಬಾಕ್ಸ್ ಜತೆಗೆ 550 ಟೀವಿ ಚಾನೆಲ್ ದೊರೆಯುತ್ತದೆ. ಮತ್ತು ಏರ್ ಟೆಲ್ Xstream ಅಪ್ಲಿಕೇಷನ್ ಒಟಿಟಿ ಸಂಪರ್ಕ ಬಳಸಬಹುದು. ಅದರಲ್ಲಿ 10,000ಕ್ಕೂ ಹೆಚ್ಚು ಸಿನಿಮಾಗಳು ಮತ್ತು ಶೋಗಳು ಇವೆ. ಏಳು ಒಟಿಟಿ ಅಪ್ಲಿಕೇಷನ್ ಮತ್ತು ಐದು ಸ್ಟುಡಿಯೋಗಳ ಸೇವೆ ಒಂದೇ ಕಂಡೆ ಸಿಗುತ್ತದೆ.

ವಿವಿಧ ಬ್ರಾಡ್ ಬ್ಯಾಂಡ್ ಪ್ಲಾನ್ ಗಳು
 

ವಿವಿಧ ಬ್ರಾಡ್ ಬ್ಯಾಂಡ್ ಪ್ಲಾನ್ ಗಳು

ಏರ್ ಟೆಲ್ Xstream ಜತೆಗೆ ಕಾಂಪ್ಲಿಮೆಂಟರಿಯಾಗಿ ಡಿಸ್ನಿ+ ಹಾಟ್ ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೋ, ZEE5 - ಈ ಥರದ್ದು ಸಿಗುತ್ತದೆ. ಏರ್ ಟೆಲ್ Xstream ಬಾಕ್ಸ್ ಮೂಲಕ ಅದನ್ನು ಬಳಸಬಹುದು. ಸೆಪ್ಟೆಂಬರ್ 7, 2020ರಿಂದ ಈ ಆಫರ್ ದೊರೆಯಲಿದೆ. 499, 799, 999, 1499 ಹಾಗೂ 3999 ರುಪಾಯಿ ತಿಂಗಳ ಪ್ಲಾನ್ ಇದೆ. ಇದಕ್ಕೆ ಕ್ರಮವಾಗಿ 40, 100, 200, 300 Mbps ಹಾಗೂ 1 Gbps ವೇಗ ದೊರೆಯುತ್ತದೆ. ಈ ಎಲ್ಲ ಪ್ಲಾನ್ ಗೆ ಅನಿಯಮಿತ ಡೇಟಾ, ಕರೆ ಹಾಗೂ ಏರ್ ಟೆಲ್ Xstream 4K ಟೀವಿ ಬಾಕ್ಸ್ ಹಾಗೂ ಒಟಿಟಿ ಅಪ್ಲಿಕೇಷನ್ ಗಳ ಕಂಟೆಂಟ್ ದೊರೆಯುತ್ತವೆ.

English summary

Airtel Xstream Bundled With Broadband: New Plans Launched Start With 499

Bharti Airtel launched Xstream bundled with broadband scheme. Starting from 499 Rupees. Here is the details of various plans.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X