For Quick Alerts
ALLOW NOTIFICATIONS  
For Daily Alerts

Alert: ವಾಹನಗಳ ಖರೀದಿ ಮತ್ತಷ್ಟು ದುಬಾರಿ, 2ನೇ ತ್ರೈಮಾಸಿಕದಲ್ಲಿ ಬೆಲೆ ಹೆಚ್ಚಳ ಸಾಧ್ಯತೆ

|

ಇತ್ತೀಚೆಗಷ್ಟೇ ವಾಹನ ಕಂಪನಿಗಳು ವಾಹನಗಳ ಬೆಲೆ ಹೆಚ್ಚಿಸಿದ್ದನ್ನು ಕೇಳಿದ್ದೀರಿ, ವರ್ಷದ ಆರಂಭದಲ್ಲೂ ಕೂಡ ಬೆಲೆ ಏರಿಕೆ ಮಾಡಲಾಗಿತ್ತು. ಆದ್ರೀಗ ಮುಂಬರುವ ದಿನಗಳಲ್ಲಿ ವಾಹನಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

 

ಮೂಲಗಳ ಪ್ರಕಾರ ವಾಹನಗಳ ಇನ್ಪುಟ್‌ ವೆಚ್ಚವು ಹೆಚ್ಚುತ್ತಿರುವ ಕಾರಣ ವಾಹನ ತಯಾರಿಕಾ ಕಂಪನಿಗಳು ಎರಡನೇ ತ್ರೈಮಾಸಿಕದಲ್ಲಿ ವಾಹನಗಳ ಬೆಲೆಯನ್ನು ಹೆಚ್ಚಿಸಬಹುದು. ಜನವರಿಯಲ್ಲಿ ವಾಹನಗಳ ಬೆಲೆ ಏರಿಕೆಗೆ ತೃಪ್ತಿಯಾಗದ ಕಂಪನಿಗಳು ಕಂಪನಿಗಳ ಮೇಲಿನ ಹೊರೆ ಕಡಿಮೆ ಮಾಡಲು ಮತ್ತೆ ಬೆಲೆ ಏರಿಕೆ ಮಾಡಬಹುದು ಎಂದು ಆಟೊಮೊಬೈಲ್ ಉದ್ಯಮದ ಅಧಿಕಾರಿಗಳ ಅಭಿಪ್ರಾಯವಾಗಿದೆ.

Alert: ವಾಹನಗಳ ಖರೀದಿ ಇನ್ಮುಂದೆ ಮತ್ತಷ್ಟು ದುಬಾರಿ

ಹೆಚ್ಚಿನ ವಾಹನ ಕಂಪನಿಗಳು ತಮ್ಮ ಸಾಮಾನ್ಯ ವ್ಯವಹಾರ ತಂತ್ರದ ಭಾಗವಾಗಿ ಜನವರಿ 2021 ರ ಮೊದಲ ವಾರದಲ್ಲಿ ಶೇಕಡಾ 3ರಿಂದ 4ರಷ್ಟು ಬೆಲೆಗಳನ್ನು ಹೆಚ್ಚಿಸಿವೆ.

ಏಪ್ರಿಲ್ ತಿಂಗಳಲ್ಲಿ, ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಮುಂತಾದ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಈ ಕಾರಣದಿಂದಾಗಿ ಮಾರುತಿ ಸುಜುಕಿ, ರೆನಾಲ್ಟ್, ಹೀರೋ, ನಿಸ್ಸಾನ್ ಮುಂತಾದ ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ. ಆದಾಗ್ಯೂ, ಬೆಲೆ ಹೆಚ್ಚಳವು ಮಾರಾಟದ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.

ಜುಲೈನಲ್ಲಿ ಕಚ್ಚಾ ವಸ್ತುಗಳನ್ನು ತಯಾರಿಸುವ ಕಂಪನಿಗಳು ಬೆಲೆಯನ್ನು ಹೆಚ್ಚಿಸಬಹುದು ಮತ್ತು ಇದು ವಾಹನ ತಯಾರಿಕೆಯ ವೆಚ್ಚದ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ. ಬಿಎಸ್ 6 ಎಂಜಿನ್ ಜಾರಿಗೆ ಬಂದಾಗಿನಿಂದ ಉಕ್ಕು, ಪ್ಲಾಸ್ಟಿಕ್ ಮತ್ತು ರೋಡಿಯಂನಂತಹ ವಸ್ತುಗಳ ಬೆಲೆ ಹೆಚ್ಚಾಗಿದೆ. ಕಳೆದ 8 - 9 ತಿಂಗಳುಗಳಲ್ಲಿ, ಲೋಹದ ಬೆಲೆಗಳು ತೀವ್ರವಾಗಿ ಹೆಚ್ಚಾಗಿದೆ. ಇದು ವಾಹನಗಳ ತಯಾರಿಕಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿ ಬೆಲೆ ಏರಿಕೆಗೆ ದಾರಿ ಮಾಡಿಕೊಡಬಹುದು.

English summary

Alert: Automakers Plan To Another Round Of Price Hike In Q2

Indian auto OEMs did not rule out the possibility of price hikes because of the steep increase in raw material prices
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X