For Quick Alerts
ALLOW NOTIFICATIONS  
For Daily Alerts

ಸಾಫ್ಟ್ ಬ್ಯಾಂಕ್ ಗ್ರೂಪ್ ಕಾರ್ಪೊರೇಷನ್ ನಿಂದ ಜಾಕ್ ಮಾ ಹೊರಗೆ

|

ಅಲಿಬಾಬಾ ಕಂಪೆನಿಯ ಸಹ ಸಂಸ್ಥಾಪಕ ಜಾಕ್ ಮಾ ಅವರು SoftBank ಗ್ರೂಪ್ ಕಾರ್ಪೊರೇಷನ್ ಆಡಳಿತ ಮಂಡಳಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಸೋಮವಾರ ತಿಳಿಸಲಾಗಿದೆ. ಮಂಡಳಿಗೆ ಮೂವರನ್ನು ಹೆಸರನ್ನು ಪ್ರಸ್ತಾವ ಮಾಡಲಿದೆ ಸಾಫ್ಟ್ ಬ್ಯಾಂಕ್.

ಜೂನ್ 25ನೇ ತಾರೀಕಿನಂದು ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ಅಂದು ಹೆಸರು ಪ್ರಸ್ತಾವ ಮಾಡಲಿದ್ದು, ಅದರಲ್ಲಿ ಗ್ರೂಪ್ ಚೀಫ್ ಫೈನಾನ್ಷಿಯಲ್ ಆಫೀಸರ್ ಯೋಷಿಮೊಟೊ ಗೋಟೊ ಹೆಸರು ಕೂಡ ಇರಲಿದೆ. ಮಂಡಳಿಯ ಒಟ್ಟು ಸದಸ್ಯರ ಸಂಖ್ಯೆಯು 13ಕ್ಕೆ ಏರಿಕೆ ಆಗಲಿದೆ.

ಯುನಿಕ್ಲೋ ಪೇರೆಂಟ್ ಫಾಸ್ಟ್ ರೀಟೇಲಿಂಗ್ ಸಿಇಒ ಹಾಗೂ ಸ್ಥಾಪಕ ಟಡಾಶಿ ಯಾನೈ ಈಚೆಗಷ್ಟೇ ಸಾಫ್ಟ್ ಬ್ಯಾಂಕ್ ಮಂಡಳಿಯಿಂದ ಹೊರಬಂದಿದ್ದರು. ಅವರ ಬೆನ್ನಿಗೇ ಈಗ ಜಾಕ್ ಮಾ ಹೊರ ಬೀಳುವ ಸುದ್ದಿ ಬಂದಿದೆ.

ಸಾಫ್ಟ್ ಬ್ಯಾಂಕ್ ಗ್ರೂಪ್ ಕಾರ್ಪೊರೇಷನ್ ನಿಂದ ಜಾಕ್ ಮಾ ಹೊರಗೆ

 

ಸಾಫ್ಟ್ ಬ್ಯಾಂಕ್ ಗ್ರೂಪ್ ಕಾರ್ಪೊರೇಷನ್ ಜಪಾನ್ ನ ಬಹುರಾಷ್ಟ್ರೀಯ ಹೋಲ್ಡಿಂಗ್ ಕಂಪೆನಿ. ಮುಖ್ಯ ಕಚೇರಿ ಟೋಕಿಯೋದಲ್ಲಿ ಇದೆ. ಇದು ವಿಷನ್ ಫಂಡ್ ನಡೆಸುತ್ತಿದ್ದು, ಜಗತ್ತಿನ ಅತಿ ದೊಡ್ಡ ವೆಂಚರ್ ಕ್ಯಾಪಿಟಲ್ ಫಂಡ್ ಇದ್ದು, 10 ಸಾವಿರ ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು ಬಂಡವಾಳ ಹೊಂದಿದೆ.

English summary

Alibaba Co Founder Jack Ma Will Resign From SoftBank Group

Alibaba co founder Jack Ma will resign from SoftBank group. Here is the details.
Story first published: Monday, May 18, 2020, 18:02 [IST]
Company Search
COVID-19