For Quick Alerts
ALLOW NOTIFICATIONS  
For Daily Alerts

ಮಿನಿ ಕೂಪರ್‌ ಎಸ್‌ಇ ಎಲೆಕ್ಟ್ರಿಕ್ ಕಾರು ಶೀಘ್ರ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿ

|

ಮಿನಿ ಇಂಡಿಯಾ ಮಾರುಕಟ್ಟೆಗೆ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಮಿನಿ ಇಂಡಿಯಾದ ಕೂಪರ್‌ ಎಸ್‌ಇ ಎಲೆಕ್ಟ್ರಿಕ್ ಕಾರು ಶೀಘ್ರವೇ ಬಿಡುಗಡೆ ಆಗಲಿದೆ. ಕೂಪರ್‌ ಎಸ್‌ಇ ಯು ಮಿನಿ ಇಂಡಿಯಾದಿಂದ ಮಾರುಕಟ್ಟೆ ಬರುತ್ತಿರುವ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ.

 

ಈ ಕೂಪರ್‌ ಎಸ್‌ಇ 2019 ರಲ್ಲಿ ಬಿಡುಗಡೆ ಆಗಿತ್ತು. ಆದರೆ ಈವರೆಗೂ ದೇಶದ ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ವಾಹನ ಕೂಪರ್‌ ಎಸ್‌ಇ ಲಭ್ಯವಿಲ್ಲ. ಆದರೆ ಶೀಘ್ರದಲ್ಲೇ ಈ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಪ್ರಸ್ತುತ ಮಿನಿ ಇಂಡಿಯಾ ಸಂಸ್ಥೆಯು ಈ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವ ನಿಗದಿತ ದಿನಾಂಕವನ್ನು ತಿಳಿಸಿಲ್ಲ. ಆದರೆ ಕೆಲವೇ ವಾರದಲ್ಲಿ ಈ ಕಾರು ಬಿಡುಗಡೆಯಾಗುವ ನಿರೀಕ್ಷೆ ಇದೆ.

ಬೆಂಗಳೂರಿಗೆ ವೋಲ್ವೋ ಪೆಟ್ರೋಲ್ ಮೈಲ್ಡ್-ಹೈಬ್ರಿಡ್‍ SUV ಎಂಟ್ರಿ

ಈ ಬಗ್ಗೆ ಟ್ವೀಟ್‌ ಮಾಡಿರುವ ಮಿನಿ ಇಂಡಿಯಾ, "ಭವಿಷ್ಯ ಇಲ್ಲಿದೆ, ನೀವು ಸಿದ್ದರಾಗಿದ್ದೀರಾ?," ಎಂದು ಪ್ರಶ್ನಿಸಿದೆ. ಹಾಗೆಯೇ ಈ ಕಾರು ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಹೇಳಿದೆ. "ಗೋ-ಕಾರ್ಟ್‌ನ ಭಾವನೆಯನ್ನು ಹೊಂದಲು ನೀವು ಸಿದ್ದರಾಗಿರಿ," ಎಂದು ಮಿನಿ ಇಂಡಿಯಾ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ. ಇನ್ನು ಈ ಎಲೆಕ್ಟ್ರಿಕ್ ಕಾರು ಕಳೆದ ವರ್ಷವೇ ದೇಶದಲ್ಲಿ ಬಿಡುಗಡೆ ಆಗಲಿದೆ ಎಂದು ಸುದ್ದಿ ಆಗಿತ್ತು. ಮಾರ್ಚ್ ವೇಳೆಗೆ ಈ ಕಾರು ಮಾರುಕಟ್ಟೆಗೆ ಬರಬಹುದು ಎಂದು ವರದಿಗಳು ಹೇಳಿದ್ದವು. ಆದರೆ ಈಗ ಮಿನಿ ಇಂಡಿಯಾವು ಅಧಿಕೃತವಾಗಿ ಶೀಘ್ರವಾಗಿ ಈ ಕೂಪರ್‌ ಎಸ್‌ಇ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

 3-ಡೋರ್‌ ಎಲೆಕ್ಟ್ರಿಕ್ ಕಾರು ಕೂಪರ್‌ ಎಸ್‌ಇ

3-ಡೋರ್‌ ಎಲೆಕ್ಟ್ರಿಕ್ ಕಾರು ಕೂಪರ್‌ ಎಸ್‌ಇ

ಮಿನಿ ಇಂಡಿಯಾದ ಈ ಎಲೆಕ್ಟ್ರಿಕ್ ಕಾರು ಕೂಪರ್‌ ಎಸ್‌ಇ 3-ಡೋರ್‌ ಕಾರು ಆಗಿದೆ. ಇತ್ತೀಚೆಗೆ ತನ್ನ 60ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿ 3-ಡೋರಿನ ಆನಿವರ್ಸರಿ ಎಡಿಷನ್ ಅನ್ನು ಇತ್ತೀಚೆಗೆ ಮಿನಿ ಇಂಡಿಯಾ ತನ್ನ ಕೂಪರ್‌ ಸೀರಿಸ್‌ನಲ್ಲಿ ಪ್ರಸ್ತುತ ಪಡಿಸಿತ್ತು. ಈಗ ಮಿನಿ ಇಂಡಿಯಾದ ಈ ಎಲೆಕ್ಟ್ರಿಕ್ ಕಾರು ಕೂಡಾ 3-ಡೋರಿನ ಕಾರು ವಿನ್ಯಾಸವನ್ನು ಹೊಂದಿದೆ. ಮಿನಿ ಇಂಡಿಯಾ ತನ್ನ 60ನೇ ವರ್ಷದ ವಾರ್ಷಿಕೋತ್ಸವದ ಮೂಲಕ 2000 ರಲ್ಲಿ ನಿಧನರಾದ ಜಾನ್ ಕೂಪರ್‌ಗೆ ಗೌರವ ಸಲ್ಲಿಸಲಿದೆ. ಮಿನಿ ಇಂಡಿಯಾ ತನ್ನ ಈ ಕೂಪರ್‌ ಸೀರಿಸ್‌ನಲ್ಲಿ ಮಿನಿ ಕೂಪರ್, ಮಿನಿ ಕೂಪರ್ ಎಸ್ ಮತ್ತು ಮಿನಿ ಜಾನ್ ಕೂಪರ್ ವರ್ಕ್ಸ್ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲಿದೆ.

 ಕೂಪರ್‌ ಎಸ್‌ಸಿಯ ಬೆಲೆಯೆಷ್ಟು ಗೊತ್ತಾ?

ಕೂಪರ್‌ ಎಸ್‌ಸಿಯ ಬೆಲೆಯೆಷ್ಟು ಗೊತ್ತಾ?

ಈ ಮಿನಿ ಇಂಡಿಯಾದ ಕೂಪರ್‌ ಎಸ್‌ಇ ಎಲೆಕ್ಟ್ರಿಕ್ ಕಾರಿನ ಬೆಲೆಯು 38 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ. ಇದಕ್ಕಿಂತಲೂ ಅಧಿಕ ಬೆಲೆ ಆಗಿರುವ ಸಾಧ್ಯತೆಗಳು ಇದೆ. ಸಂಪೂರ್ಣವಾಗಿ ನಿರ್ಮಿಸಿದ ಘಟಕವಾಗಿ ಕೂಪರ್‌ ಎಸ್‌ಇ ದೊರೆಯಲಿದೆ. ಇದರ ಬೆಲೆ ಪಟ್ಟಿಯು 50 ಆಗಿರಲಿದೆ. ಮಾರುಕಟ್ಟೆಯಲ್ಲಿ ಲಭ್ಯವಾಗುವ ಅತೀ ಅಗ್ಗದ ಎಲೆಕ್ಟ್ರಿಕ್ ಕಾರು ಇದಾಗಲಿದೆ.

ಹೊಸ ರೂಪದ SUV Astor ಕಾರು ಬಿಡುಗಡೆ ಮಾಡಿದ ಎಂಜಿ ಮೋಟಾರ್

 ಸಿಂಗಲ್‌ ಎಲೆಕ್ಟ್ರಿಕ್ ಮೋಟಾರ್‌ ಹೊಂದಿರುವ ಕಾರು
 

ಸಿಂಗಲ್‌ ಎಲೆಕ್ಟ್ರಿಕ್ ಮೋಟಾರ್‌ ಹೊಂದಿರುವ ಕಾರು

ಮಿನಿ ಇಂಡಿಯಾದ ಕೂಪರ್‌ ಎಸ್‌ಇ ಎಲೆಕ್ಟ್ರಿಕ್ ಕಾರು ಸಿಂಗಲ್‌ ಎಲೆಕ್ಟ್ರಿಕ್ ಮೋಟಾರ್‌ ಹೊಂದಿರುವ ಕಾರು ಆಗಿದೆ. ಇದರಲ್ಲಿ ಆಂತರಿಕ ದಹನಕಾರಿ ಎಂಜಿನ್ (ಇಂಟರ್ನೆಲ್‌ ಕಂಬ್ಯೂಷನ್‌ ಇಂಜಿನ್‌- ಐಸಿಇ) ಇರಲಿದೆ. ಮೋಟಾರ್‌ 32.6 ಕಿಲೋ ವ್ಯಾಟ್‌ನ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗುತ್ತದೆ. ಇದು 181 ಹಾರ್ಸ್ ಪವರ್‌ ಹಾಗೂ 270 ನ್ಯಾನೋ ಮೀಟರ್‌ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಭಾರತದ ಅತ್ಯಂತ ಸುರಕ್ಷಿತ ಕಾರು ಟಾಟಾ ಪಂಚ್‌: NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್‌ ರೇಟಿಂಗ್

 ಸಿಂಗಲ್‌ ಚಾರ್ಜ್‌ನಲ್ಲಿ  235-270 ಓಡಾಟ ಮಾಡಬಲ್ಲ ಕಾರು

ಸಿಂಗಲ್‌ ಚಾರ್ಜ್‌ನಲ್ಲಿ 235-270 ಓಡಾಟ ಮಾಡಬಲ್ಲ ಕಾರು

ಈ ಸ್ಪೋರ್ಟ್ಸ್ ಕಾರು 7.3 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್ ವೇಗವನ್ನು ಹೊಂದಬಹುದು. ಇದರ ಗರಿಷ್ಠ ವೇಗ ಗಂಟೆಗೆ 150 ಕಿಮೀ ಆಗಿದೆ. ಈ ಕಾರು ಜಾಗ್ವಾರ್ ಐ-ಪೇಸ್, ಮರ್ಸಿಡಿಸ್-ಬೆನ್ಜ್ ಇಕ್ಯೂಸಿ, ಮತ್ತು ಆಡಿ ಇ-ಟ್ರಾನ್‌ಗಳಿಗೆ ಉತ್ತಮ ಸ್ಪರ್ಧೆಯನ್ನು ನೀಡುವ ನಿರೀಕ್ಷೆ ಇದೆ. ಈ ಕಾರು ಸಿಂಗಲ್‌ ಚಾರ್ಜ್‌ನಲ್ಲಿ 235-270 ಓಡಾಟ ಮಾಡಬಲ್ಲಂತಹ ಕಾರು ಆಗಿದೆ. 11 ಕಿಲೋ ವ್ಯಾಟ್‌ ಚಾರ್ಜರ್‌ ಮೂಲಕ 150 ನಿಮಿಷದಲ್ಲೇ ಈ ಕೂಪರ್‌ ಎಸ್‌ಇ ಎಲೆಕ್ಟ್ರಿಕ್ ಕಾರು ಶೇಕಡ 80 ರಷ್ಟು ಚಾರ್ಜ್ ಆಗುತ್ತದೆ. ಸಂಪೂರ್ಣ ಚಾರ್ಜ್ ಮಾಡಲು ಮೂರು ಗಂಟೆಗಳು ಬೇಕಾಗುತ್ತದೆ.

English summary

MINI Cooper SE electric car officially teased: India launch soon; Check Features and Specifications In Kannada

All Electric MINI Cooper SE on Indian Roads Soon, Check Features In Kannada. To know more about this Car Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X