For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ 31ರ ತನಕ ಯು.ಕೆ.- ಭಾರತ ಮಧ್ಯೆ ವಿಮಾನ ಹಾರಾಟ ಅಮಾನತು

By ಅನಿಲ್ ಆಚಾರ್
|

ಯುನೈಟೆಡ್ ಕಿಂಗ್ ಡಮ್ ನಿಂದ ಭಾರತಕ್ಕೆ ಬರುವ ಎಲ್ಲ ವಿಮಾನಗಳನ್ನು ಭಾರತ ಸರ್ಕಾರದಿಂದ ಡಿಸೆಂಬರ್ 31ನೇ ತಾರೀಕಿನ ತನಕ ಅಮಾನತು ಮಾಡಲಾಗಿದೆ. ಹೊಸ ಬಗೆಯ ಕೊರೊನಾ ಯು.ಕೆ.ದಲ್ಲಿ ಕಾಣಿಸಿಕೊಂಡಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಡಿಸೆಂಬರ್ 22, 2020ರಿಂದ ಇದು ಅನ್ವಯ ಆಗುತ್ತದೆ. ಈ ಅವಧಿಯಲ್ಲಿ ಭಾರತದಿಂದಲೂ ಯು.ಕೆ.ಗೆ ಯಾವುದೇ ವಿಮಾನ ಹಾರಾಟ ಇರುವುದಿಲ್ಲ.

 

ಅಂತರರಾಷ್ಟ್ರೀಯ ವಿಮಾನ ಹಾರಾಟ ಡಿಸೆಂಬರ್ 31, 2020ರ ತನಕ ಅಮಾನತು

ಯು.ಕೆ. ಟ್ರಾನ್ಸಿಟ್ ವಿಮಾನಗಳ ಮೂಲಕ ಭಾರತಕ್ಕೆ ಡಿಸೆಂಬರ್ 22ನೇ ತಾರೀಕಿನ ಮುಂಚೆ ಬರುವ ಪ್ರಯಾಣಿಕರಿಗೆ ಮುಂಜಾಗ್ರತೆ ಕ್ರಮವಾಗಿ ಆರ್ ಟಿ- ಪಿಸಿಆರ್ ಪರೀಕ್ಷೆಯನ್ನು ವಿಮಾನ ನಿಲ್ದಾಣದಲ್ಲಿ ಕಡ್ಡಾಯ ಮಾಡಲಾಗಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯವು ಮಾಹಿತಿ ನೀಡಿದೆ.

ಡಿಸೆಂಬರ್ 31ರ ತನಕ ಯು.ಕೆ.- ಭಾರತ ಮಧ್ಯೆ ವಿಮಾನ ಹಾರಾಟ ಅಮಾನತು

ಬ್ರಿಟನ್ ನಲ್ಲಿ ಹೊಸ ಬಗೆಯ ಕೋವಿಡ್- 19 ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಈಗಾಗಲೇ ಯುರೋಪ್ ನ ಹಲವು ದೇಶಗಳು ಬ್ರಿಟನ್ ಜತೆಗಿನ ವಿಮಾನ ಹಾರಾಟ ಸಂಪರ್ಕವನ್ನು ಕಡಿದುಕೊಂಡಿವೆ. ಇದೀಗ ಭಾರತ ಕೂಡ ಇದೇ ಕ್ರಮಕ್ಕೆ ಮುಂದಾಗಿದೆ.

English summary

All Flights Suspended Between UK- India Till December 31

After rising spread of Covid- 19 in UK, India cancels all flights originating from UK, till December 31, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X