For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಸಿಇಒ ಸ್ಥಾನದಿಂದ ಕೆಳಗಿಳಿದ ಜೆಫ್‌ ಬೇಜೋಸ್

|

ಜಗತ್ತಿನ ಬಹುದೊಡ್ಡ ಇ-ಕಾಮರ್ಸ್ ಕಂಪನಿ ಅಮೆಜಾನ್‌ನ ಸಿಇಒ ಹಾಗೂ ವಿಶ್ವದ ಶ್ರೀಮಂತ ವ್ಯಕ್ತಿಯಾಗಿರುವ ಜೆಫ್ ಬೇಜೋಸ್ ತಮ್ಮ ಅಧಿಕಾರ ಸ್ಥಾನದಿಂದ ಇಂದು (ಜುಲೈ 5) ಕೆಳಗಿಳಿದಿದ್ದಾರೆ.

 

ಬೇಜೋಸ್ ತಮ್ಮ ಸಿಇಒ ಸ್ಥಾನವನ್ನು ಅಮೆಜಾನ್ ವೆಬ್‌ ಸೇವೆಗಳ ಮುಖ್ಯಸ್ಥ ಆಂಡಿ ಜಾಸ್ಸಿಗೆ ಹಸ್ತಾಂತರಿಸಿದ್ದಾರೆ. ಇನ್ಮುಂದೆ ಅವರು ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷರ ಪಾತ್ರವನ್ನು ನಿರ್ವಹಿಸಲಿದ್ದಾರೆ.

ವಿಶ್ವದ ಶ್ರೀಮಂತ ವ್ಯಕ್ತಿಯಾಗಿರುವ ಬೇಜೋಸ್ ಅವರು ಇದೀಗ ಅಮೆಜಾನ್‌ ಸಿಇಒ ಸ್ಥಾನದಿಂದ ಕೆಳಗಿಳಿದ ಬಳಿಕ ಅವರ ಮುಂದಿನ ಕಾರ್ಯವೇನು ಎಂಬುದು ಕುತೂಹಲಕ್ಕೆ ಎಡೆಮಾಡಿದೆ.

ಅಮೆಜಾನ್ ಸಿಇಒ ಸ್ಥಾನದಿಂದ ಕೆಳಗಿಳಿದ ಜೆಫ್‌ ಬೇಜೋಸ್

ಇನ್ನು ಅವರು ಹೊಂದಿರುವ ಬ್ಲೂ ಒರಿಜಿನ್ ಬಾಹ್ಯಾಕಾಶ ಕಂಪನಿ ಮೂಲಕ ಜುಲೈ 20ರಂದು ತನ್ನ ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳಲು ಬಾಹ್ಯಾಕಾಶಕ್ಕೆ ಜಿಗಿಯಲಿದ್ದಾರೆ.

ಬಾಹ್ಯಾಕಾಶ ಪರಿಶೋಧಾನಾ ಕಂಪನಿಯಾದ ಬ್ಲೂ ಒರಿಜಿನ್‌ನ ಮೊದಲ ಮಾನವ ಬಾಹ್ಯಾಕಾಶ ಹಾರಾಟದ ಮಿಷನ್‌ನಲ್ಲಿ ಜೆಫ್‌ ಬೇಜೋಸ್ ಕೂಡ ಬುಕ್ ಮಾಡಿದ್ದು, ಜುಲೈ 20ರಂದು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ.

ತನ್ನ ಬಹುನೆಚ್ಚಿನ ಕಂಪನಿಯಾದ ಬ್ಲೂ ಒರಿಜಿನ್ಸ್‌ಗೆ ಶತಕೋಟಿ ಡಾಲರ್‌ಗಳು ಮತ್ತು ಲೆಕ್ಕವಿಲ್ಲದಷ್ಟು ಗಂಟೆಗಳ ಕಾಲ ಕಾರ್ಯ ನಿರ್ವಹಣೆ ಬಳಿಕ ಜೆಫ್‌ ಬಾಹ್ಯಾಕಾಶಕ್ಕೆ ಹೋಗುವ ಸಾಹಕ್ಕೆ ಕೈ ಹಾಕಿದ್ದಾರೆ. ಜೊತೆಗೆ ವ್ಯಾಪಕ ಶ್ರೇಣಿಯ ಜನರಿಗೆ ಬಾಹ್ಯಾಕಾಶ ಪ್ರಯಾಣವನ್ನು ಹೆಚ್ಚು ಪ್ರವೇಶಿಸುವಂತೆ ಮಾಡುವತ್ತ ಗಮನಹರಿಸುವುದು ಕಂಪನಿಯ ಗುರಿಯಾಗಿದೆ.

English summary

Amazon CEO Jeff Bezos Step Down As CEO: What Next?

Amazon founder Jeff Bezos step down as ceo of biggest e-commerce company.
Story first published: Monday, July 5, 2021, 13:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X