For Quick Alerts
ALLOW NOTIFICATIONS  
For Daily Alerts

ಫ್ಯೂಚರ್-ರಿಲಯನ್ಸ್ ಒಪ್ಪಂದದಲ್ಲಿ ನಿಯಮ ಉಲ್ಲಂಘನೆ: ಸೆಬಿಗೆ ಅಮೇಜಾನ್ ದೂರು

|

ನವದೆಹಲಿ, ಅಕ್ಟೋಬರ್ 31: ತನ್ನ ಸ್ಥಳೀಯ ಪಾಲುದಾರ ಫ್ಯೂಚರ್ ರಿಟೈಲ್ ಷೇರುದಾರರನ್ನು ತಪ್ಪುದಾರಿಗೆ ಎಳೆದಿದೆ ಎಂದು ಅಮೇಜಾನ್ ಇಂಡಿಯಾ ಸಂಸ್ಥೆಯು ಭಾರತೀಯ ಭದ್ರತೆಗಳು ಮತ್ತು ವಿನಿಮಯ ಮಂಡಳಿಗೆ (ಸೆಬಿ) ದೂರು ನೀಡಿದೆ. ಫ್ಯೂಚರ್ ರಿಟೈಲ್ ತಾನು ಅಮೆರಿಕದ ಇ-ಕಾಮರ್ಸ್ ದಿಗ್ಗಜ ಅಮೇಜಾನ್ ಜತೆ ಕರಾರಿನ ನಿಯಮಗಳಿಗೆ ಒಳಪಟ್ಟಿರುವುದಾಗಿ ಸುಳ್ಳು ಮಾಹಿತಿ ನೀಡಿದೆ ಎಂದು ಆರೋಪಿಸಲಾಗಿದೆ.

 

ಫ್ಯೂಚರ್ ಸಮೂಹವು ಆಗಸ್ಟ್‌ನಲ್ಲಿ ತನ್ನ ರಿಟೈಲ್ ಸಂಪತ್ತನ್ನು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್‌ಗೆ 3.4 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಿದ ವೇಳೆಯಿಂದ ಅಮೇಜಾನ್ ಹಾಗೂ ಫ್ಯೂಚರ್ ನಡುವೆ ಕಾನೂನಾತ್ಮಕ ತಿಕ್ಕಾಟ ನಡೆಯುತ್ತಿದೆ. ಈ ವ್ಯವಹಾರವು 2019ರಲ್ಲಿ ಫ್ಯೂಚರ್ ಸಮೂಹವು ಮಾಡಿಕೊಂಡಿದ್ದ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಅಮೇಜಾನ್ ದೂರಿದೆ.

ಭಾರತದ ಪ್ರಮುಖ ಚಿಲ್ಲರೆ ಮಾರಾಟ ಸಮೂಹಗಳಲ್ಲಿ ಒಂದಾದ ಫ್ಯೂಚರ್ ರೀಟೈಲ್ ಮಾತ್ರವಲ್ಲ, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಹಾಗೂ ಅವರ ರಿಲಯನ್ಸ್ ಸಮೂಹದ ಜತೆಗೂ ಅಮೇಜಾನ್ ಸಂಘರ್ಷ ನಡೆದಿದೆ. ರಿಲಯನ್ಸ್ ಸಮೂಹವು ತನ್ನ ಇ-ಕಾಮರ್ಸ್ ವಹಿವಾಟನ್ನು ವೇಗವಾಗಿ ವಿಸ್ತರಿಸುತ್ತಿದ್ದು, ಭಾರತದಲ್ಲಿನ ಇ-ವಾಣಿಜ್ಯ ವಿಭಾಗದಲ್ಲಿ ಅಮೇಜಾನ್ ಹಾಗೂ ಇತರೆ ಕಂಪೆನಿಗಳಿಗೆ ಪ್ರತಿಸ್ಪರ್ಧೆಯೊಡ್ಡುತ್ತಿದೆ.

ಫ್ಯೂಚರ್-ರಿಲಯನ್ಸ್ ಒಪ್ಪಂದ: ಸೆಬಿಗೆ ಅಮೇಜಾನ್ ದೂರು

ಸೆಬಿ ಅಧ್ಯಕ್ಷ ಅಜಯ್ ತ್ಯಾಗಿ ಅವರಿಗೆ ಬುಧವಾರ ಪತ್ರ ಬರೆದಿರುವ ಅಮೇಜಾನ್, ತಾನು ಎಲ್ಲ ಒಪ್ಪಂದಗಳನ್ನೂ ಸೂಕ್ತವಾಗಿ ಅನುಸರಿಸಿದ್ದು, ಕಾನೂನಾತ್ಮಕ ವಿಚಾರಣೆಗಳಿಂದ ತನ್ನ ಹೊಸ ಒಪ್ಪಂದವನ್ನು ತಡೆಯುವಂತಿಲ್ಲ ಎಂಬ ಫ್ಯೂಚರ್ ಸಮೂಹದ ಹೇಳಿಕೆಯು ಭಾರತದ ನಿಯಮಾವಳಿಗಳನ್ನು ಉಲ್ಲಂಘಿಸಿದೆ. ಹೀಗಾಗಿ ಈ ವಿಚಾರವಾಗಿ ಸೂಕ್ತ ತನಿಖೆ ನಡೆಸಬೇಕು ಮತ್ತು ಒಪ್ಪಂದಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದೆ.

2019ರಲ್ಲಿ ಫ್ಯೂಚರ್ ಸಮೂಹದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಫ್ಯೂಚರ್ ಘಟಕದಲ್ಲಿ 200 ಮಿಲಿಯನ್ ಡಾಲರ್‌ನಷ್ಟು ಹೂಡಿಕೆ ಮಾಡಿದ್ದು, ರಿಲಯನ್ಸ್ ಸೇರಿದಂತೆ ನಿರ್ಬಂಧಿತ ಪಟ್ಟಿಯಲ್ಲಿನ ಯಾವ ವ್ಯಕ್ತಿಗಳಿಗೂ ತನ್ನ ರಿಟೈಲ್ ಸಂಪತ್ತನ್ನು ಮಾರಾಟ ಮಾಡುವಂತಿಲ್ಲ ಎಂದು ಅದರ ನಿಯಮದಲ್ಲಿ ಹೇಳಲಾಗಿತ್ತು ಎಂದು ಅಮೇಜಾನ್ ಹೇಳಿದೆ.

English summary

Amazon Complaint To Sebi Against Future Retail And Reliance Group Deal

Amazon India wrote a complaint to Sebi against the deal between Future Retail and Reliance group.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X