For Quick Alerts
ALLOW NOTIFICATIONS  
For Daily Alerts

ಎಲೆಕ್ಟ್ರಿಕ್ ವಾಹನಗಳ ಪೂರೈಕೆ: ಮಹೀಂದ್ರಾ ಜೊತೆಗೆ ಅಮೆಜಾನ್ ಪಾಲುದಾರಿಕೆ

|

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿರುವುದರ ಜೊತೆಗೆ ಇ-ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು ಮುಂದಾಗಿದೆ. ಈ ಕಾರಣಕ್ಕಾಗಿ ಮಹೀಂದ್ರಾ ಎಲೆಕ್ಟ್ರಿಕ್ ಜೊತೆ ಸಹಭಾಗಿತ್ವ ಹೊಂದಿದೆ.

 

ಅಮೆಜಾನ್ ಇಂಡಿಯಾ ತನ್ನ ವಿತರಣಾ ವಾಹನಗಳ ಸಮೂಹವು 2025 ರ ವೇಳೆಗೆ 10,000 ಎಲೆಕ್ಟ್ರಿಕ್ ವಾಹನಗಳನ್ನು ಒಳಗೊಂಡಿರುತ್ತದೆ ಎಂದು ಘೋಷಿಸಿತ್ತು. ಮಹೀಂದ್ರಾ ಎಲೆಕ್ಟ್ರಿಕ್‌ನೊಂದಿಗಿನ ಸಹಭಾಗಿತ್ವವು ಪರಿಸರ ಸುಸ್ಥಿರತೆ ಗುರಿಗಳನ್ನು ಸಾಧಿಸಲು ಇ-ಮೊಬಿಲಿಟಿ ಉದ್ಯಮದಲ್ಲಿ ಭಾರತದ ಪ್ರಗತಿಯ ಪ್ರಮುಖ ಹೆಜ್ಜೆಯಾಗಿದೆ.

ಎಲೆಕ್ಟ್ರಿಕ್ ವಾಹನಗಳ ಪೂರೈಕೆ:ಮಹೀಂದ್ರಾ ಜೊತೆಗೆ ಅಮೆಜಾನ್ ಪಾಲುದಾರಿಕೆ

"ನಮ್ಮ ಕಾರ್ಯಾಚರಣೆಗಳ ಮೂಲಕ ಪರಿಸರ ಮಾಲಿನ್ಯ ಪರಿಣಾಮವನ್ನು ಕಡಿಮೆ ಮಾಡುವ ಪೂರೈಕೆ ಸರಪಳಿಯನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ" ಎಂದು ಗ್ರಾಹಕರ ನೆರವೇರಿಕೆ ಕಾರ್ಯಾಚರಣೆಗಳ ಅಮೆಜಾನ್ ಉಪಾಧ್ಯಕ್ಷ ಅಖಿಲ್ ಸಕ್ಸೇನಾ ಹೇಳಿದರು.

ಜೆಫ್ ಬೆಜೋಸ್ ನೇತೃತ್ವದ ಅಮೆಜಾನ್ ಹಲವಾರು ಮೂಲ ಸಲಕರಣೆಗಳ ತಯಾರಕರೊಂದಿಗೆ (ಒಇಎಂ) ಕೆಲಸ ಮಾಡುತ್ತಿದ್ದು, ಗ್ರಾಹಕರ ಆದೇಶಗಳ ಸುಸ್ಥಿರ ಮತ್ತು ಸುರಕ್ಷಿತ ವಿತರಣೆಯನ್ನು ಖಾತ್ರಿಪಡಿಸುವ 'ಮೇಡ್ ಇನ್ ಇಂಡಿಯಾ' ಇವಿಗಳ ಸಮೂಹವನ್ನು ನಿರ್ಮಿಸುತ್ತದೆ.

ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಜೆಫ್ ಬೆಜೋಸ್

''ಅಮೆಜಾನ್ ಇಂಡಿಯಾ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ನಡುವಿನ ಸಹಭಾಗಿತ್ವವು ಸ್ವಾಗತಾರ್ಹ ಹೆಜ್ಜೆಯಾಗಿದೆ, ಇದು ಇ-ಮೊಬಿಲಿಟಿ ಉದ್ಯಮದಲ್ಲಿ ಭಾರತದ ಮಹತ್ವದ ಪ್ರಗತಿಯನ್ನು ಪುನರುಚ್ಚರಿಸುತ್ತದೆ ಮತ್ತು ನಮ್ಮ ಪರಿಸರ ಸುಸ್ಥಿರ ಗುರಿಗಳನ್ನು ಸಾಧಿಸಲು ವಾಹನ ತಯಾರಕರು ಮತ್ತು ಇ-ಕಾಮರ್ಸ್ ಕಂಪನಿಗಳ ಪಾತ್ರವನ್ನು ಎತ್ತಿ ತೋರಿಸುತ್ತದೆ'' ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಅಮೆಜಾನ್ ಇಂಡಿಯಾದ ವಿತರಣಾ ಸೇವಾ ಪಾಲುದಾರರ ನೆಟ್‌ವರ್ಕ್‌ನೊಂದಿಗೆ ಬೆಂಗಳೂರು, ನವದೆಹಲಿ, ಹೈದರಾಬಾದ್, ಅಹಮದಾಬಾದ್, ಭೋಪಾಲ್, ಇಂದೋರ್ ಮತ್ತು ಲಕ್ನೋ ಸೇರಿದಂತೆ ಏಳು ನಗರಗಳಲ್ಲಿ ಈವರೆಗೆ ನಿಯೋಜಿಸಲಾಗಿದೆ.

English summary

Amazon Partners With Mahindra For EVs

Amazon.com Inc.’s India unit agreed to order more electric vehicles (EVs) from Mahindra Electric as part of a plan to boost its local eco-friendly delivery fleet to 10,000 by 2025
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X