For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಪ್ರೈಮ್ ವೀಡಿಯೋ: 89 ರೂಪಾಯಿಗೂ ಲಭ್ಯವಿದೆ!

|

ನವದೆಹಲಿ, ಜನವರಿ 16: ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಸಿನಿಮಾ, ವೆಬ್ ಸಿರೀಸ್‌ಗಳನ್ನು ನೋಡಲು ಬಯಸಿದವರಿಗೆ ಇಲ್ಲಿದೆ ಗುಡ್‌ನ್ಯೂಸ್. ಏಕೆಂದರೆ ಅಮೆಜಾನ್ ಪ್ರೈಮ್ ವಿಡಿಯೋ ತನ್ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

 

ಭಾರತದಲ್ಲಿ ಅಮೆಜಾನ್ ವಿಶ್ವದ ಮೊದಲ ಮೊಬೈಲ್ ಏಕೈಕ ವಿಡಿಯೋ ಯೋಜನೆಯಾದ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯನ್ನು ಪರಿಚಯಿಸಿದೆ. ನೀವು ಅಮೆಜಾನ್ ಪ್ರೈಮ್ ವೀಡಿಯೋಗಳನ್ನು ಒಂದು ತಿಂಗಳಿಗೆ ಕೇವಲ 89 ರೂಪಾಯಿ ನೀಡುವ ಮೂಲಕ ಚಂದಾದಾರರಾಗಬಹುದಾಗಿದೆ.

ಏರ್‌ಟೆಲ್ ಸಹಯೋಗದೊಂದಿಗೆ ಅಮೆಜಾನ್ ಈ ಯೋಜನೆಯನ್ನು ಪರಿಚಯಿಸಿದೆ. ಪ್ರೈಮ್ ವೀಡಿಯೋ ಮೊಬೈಲ್ ಆವೃತ್ತಿಯು ಒಬ್ಬರು ಮಾತ್ರ ಬಳಕೆ ಮಾಡಬಹುದಾದಂತಹ ಯೋಜನೆಯಾಗಿದೆ. ಇದರಲ್ಲಿ, ಬಳಕೆದಾರರು ಎಸ್‌ಡಿ ಗುಣಮಟ್ಟದ ಸ್ಟ್ರೀಮಿಂಗ್ ಪಡೆಯುತ್ತಾರೆ. ವಿಶೇಷವೆಂದರೆ ನೀವು ಏರ್‌ಟೆಲ್‌ ಬಳಕೆದಾರರಾಗಿದ್ದರೆ, ನೀವು ಅದರ ಚಂದಾದಾರಿಕೆಯನ್ನು 30 ದಿನಗಳವರೆಗೆ ಪಡೆಯಬಹುದು. ಏರ್‌ಟೆಲ್ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯಿಂದ ಅಮೆಜಾನ್ ನಲ್ಲಿ ಸೈನ್ ಇನ್ ಮಾಡಬೇಕಾಗುತ್ತದೆ.

 ಅಮೆಜಾನ್ ಪ್ರೈಮ್ ವೀಡಿಯೋ: 89 ರೂಪಾಯಿಗೂ ಲಭ್ಯವಿದೆ!

30 ದಿನಗಳ ಉಚಿತ ಅವಕಾಶವನ್ನು ಪೂರ್ಣಗೊಳಿಸಿದ ನಂತರ, ಏರ್‌ಟೆಲ್ ಗ್ರಾಹಕರು ಇದನ್ನು ಮುಂದುವರಿಸಲು ಬಯಸಿದರೆ ಅವರು ಪೂರ್ವ ಪಾವತಿಸಿದ ರೀಚಾರ್ಜ್ ಮೂಲಕ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯನ್ನು ಆನಂದಿಸಬಹುದು. ಇದರ ಆರಂಭಿಕ ಬೆಲೆ 89 ರೂಪಾಯಿಯಾಗಿದೆ. ಈ ಯೋಜನೆಯೊಂದಿಗೆ ನಿಮಗೆ 6 ಜಿಬಿ ಡೇಟಾವನ್ನು ನೀಡಲಾಗುವುದು. ಇದಲ್ಲದೆ, ನೀವು ಬಯಸಿದರೆ, ನೀವು 28 ದಿನಗಳ ಮಾನ್ಯತೆಯೊಂದಿಗೆ 299 ರೂ.ಗಳ ಯೋಜನೆಯನ್ನು ಸಹ ಪಡೆಯಬಹುದು. ಇದರಲ್ಲಿ ನೀವು 1.5 ಜಿಬಿ ಡೇಟಾವನ್ನು ಪಡೆಯುತ್ತೀರಿ. ಅಲ್ಲದೆ, ಅಮೆಜಾನ್ ಪ್ರೈಮ್ ವೀಡಿಯೋಗೆ ಪ್ರವೇಶವೂ ಲಭ್ಯವಿರುತ್ತದೆ.

ಏರ್‌ಟೆಲ್‌ನೊಂದಿಗೆ ಅಮೆಜಾನ್ ಪ್ರೈಮ್ ವೀಡಿಯೋ ಸೇವೆ

89 ರೂಗಳ ರೀಚಾರ್ಜ್: 28 ದಿನಗಳ ಮಾನ್ಯತೆಯೊಂದಿಗೆ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ ಮತ್ತು 6 ಜಿಬಿ ಡೇಟಾ

299 ರೂಪಾಯಿ: ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಅನಿಯಮಿತ ಕರೆ, ದಿನಕ್ಕೆ 1.5 ಜಿಬಿ ಡೇಟಾ, ಮಾನ್ಯತೆ 28 ದಿನಗಳು

 

131 ಕ್ಕೆ ರೀಚಾರ್ಜ್: ಅಮೆಜಾನ್ ಪ್ರೈಮ್ ಸದಸ್ಯತ್ವ 30 ದಿನಗಳವರೆಗೆ ಪ್ರೈಮ್ ವಿಡಿಯೋ ಮತ್ತು ಅನಿಯಮಿತ ಜಾಹೀರಾತು ಉಚಿತ ಸಂಗೀತ

349 ರೂಪಾಯಿ: ಅಮೆಜಾನ್ ಪ್ರೈಮ್ ಸದಸ್ಯತ್ವ 28 ದಿನಗಳವರೆಗೆ ಸಂಪೂರ್ಣ ಪ್ರವೇಶ, ಅನಿಯಮಿತ ಕರೆ, ದಿನಕ್ಕೆ 2 ಜಿಬಿ ಡೇಟಾ

English summary

Amazon Prime Video Now Offers A Rs 89 Worth Mobile Plan

Amazon has partnered with Bharti Airtel to launch mobile-only plans of Amazon Prime Video in India. With the move, Amazon plans to target the 500 million smartphone users in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X