For Quick Alerts
ALLOW NOTIFICATIONS  
For Daily Alerts

ಅಮೆರಿಕ ಕೆಲಸ‌ದ ಕನಸಿಗೆ ವೀಸಾ ಸಿಗೋದು ಕಷ್ಟ; ಇದು ಟ್ರಂಪ್ ಇರಾದೆ

|

ಕೆಲವು ವಿದೇಶಿ ಉದ್ಯೋಗಿಗಳು ಅಮೆರಿಕ ಪ್ರವೇಶಿಸದಂತೆ ಇನ್ನು ಕೆಲವೇ ದಿನಗಳಲ್ಲಿ ನಿರ್ಬಂಧ ಹಾಕಲಾಗುವುದು. ಕೊರೊನಾ ಬಿಕ್ಕಟ್ಟಿನಿಂದಾಗಿ ಉದ್ಯೋಗ ಪಡೆಯಲು ಹೆಣಗಾಡುತ್ತಿರುವ ಅಮೆರಿಕನ್ನರ ಹಿತಾಸಕ್ತಿಯನ್ನು ಆ ಮೂಲಕ ಕಾಪಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.

ನಾಳೆ ಅಥವಾ ನಾಡಿದ್ದು ವೀಸಾಗೆ ಸಂಬಂಧಿಸಿದಂತೆ ಘೋಷಣೆ ಮಾಡಲಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ ಎಂಬುದನ್ನು ಫಾಕ್ಸ್ ಸುದ್ದಿ ಸಂಸ್ಥೆ ತಿಳಿಸಿದೆ. ಹೊಸ ನಿರ್ಬಂಧದಿಂದ ಏನಾದರೂ ವಿನಾಯಿತಿ ನೀಡಲಾಗುತ್ತದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವಕ್ಕೆ ಇರುತ್ತವೆ ಎಂದಿದ್ದಾರೆ.

ವಿನಾಯಿತಿಗಳನ್ನು ನೀಡಲಾಗುವುದು
 

ವಿನಾಯಿತಿಗಳನ್ನು ನೀಡಲಾಗುವುದು

ಕೆಲವು ದೊಡ್ಡ ಉದ್ಯಮಗಳಿಗೆ ಉದ್ಯೋಗಿಗಳು ಬೇಕಾಗುತ್ತಾರೆ. ಬಹಳ ದೀರ್ಘ ಕಾಲದಿಂದಲೂ ಅಂಥವರು ಬರುತ್ತಿದ್ದಾರೆ. ಆದರೆ ಇನ್ನು ಮುಂದೆ ಕೆಲವು ವಿನಾಯಿತಿ ನೀಡಲಾಗುವುದು ಹಾಗೂ ನಿಯಮಗಳನ್ನು ಕಠಿಣ ಮಾಡಬಹುದು. ಆ ನಂತರ ನಿಯಮಗಳು ಇನ್ನಷ್ಟು ಕಠಿಣ ಆಗಲಿದೆ ಎಂದು ಅವರು ಹೇಳಿದ್ದಾರೆ.

ಉದ್ಯೋಗ ವೀಸಾಗೆ ಕಠಿಣ ನಿಯಮಗಳು

ಉದ್ಯೋಗ ವೀಸಾಗೆ ಕಠಿಣ ನಿಯಮಗಳು

ಉದ್ಯೋಗದ ವೀಸಾಗೆ ಸಂಬಂಧಿಸಿದಂತೆ ಕೆಲವು ಕಠಿಣವಾದ ಹೊಸ ನಿಯಮಗಳನ್ನು ಟ್ರಂಪ್ ತರುವ ನಿರೀಕ್ಷೆ ಇದೆ. ಆದರೆ ಆ ಬಗ್ಗೆ ಇನ್ನಷ್ಟು ವಿವರ ನೀಡಲು ಅವರು ನಿರಾಕರಿಸಿದ್ದಾರೆ. ತಜ್ಞರು ಹೇಳುವಂತೆ, ಕೊರೊನಾ ಕಾರಣವನ್ನು ಮುಂದೆ ಮಾಡಿಕೊಂಡಿರುವ ಟ್ರಂಪ್, ತಮ್ಮ ಬಹುಕಾಲದ ಗುರಿಯಾದ ವಲಸಿಗರು ಅಮೆರಿಕ ಪ್ರವೇಶಿಸದಂತೆ ನೋಡಿಕೊಳ್ಳಬೇಕು ಎಂಬ ಇರಾದೆ ಪೂರೈಸಿಕೊಳ್ಳುತ್ತಿದ್ದಾರೆ. ವಲಸಿಗರು ಯು.ಎಸ್. ಪ್ರವೇಶಿಸದಂತೆ ತಡೆಯುವುದು ಚುನಾವಣೆ ಪ್ರಚಾರದ ಅತಿ ಮುಖ್ಯ ಭಾಗವಾಗಿ ಇರಲಿದೆ.

ಅಮೆರಿಕ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುತ್ತದೆ

ಅಮೆರಿಕ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುತ್ತದೆ

ವಿದೇಶಿ ಉದ್ಯೋಗಿಗಳನ್ನು ಅಮೆರಿಕದೊಳಕ್ಕೆ ಬರುವುದನ್ನು ತಡೆದರೆ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ತಂತ್ರಜ್ಞಾನ ಕ್ಷೇತ್ರದಲ್ಲಿನ ಹಲವು ಪ್ರಮುಖ ಕಂಪೆನಿಗಳು ಹೇಳಿವೆ. ಕೊರೊನಾ ಬಿಕ್ಕಟ್ಟು ಹಾಗೂ ಆರ್ಥಿಕ ಸಂಕಷ್ಟಕ್ಕೆ ಟ್ರಂಪ್ ಕಂಡುಕೊಂಡಿರುವ ಮಾರ್ಗ ವಲಸಿಗರ ಮೇಲೆ ನಿರ್ಬಂಧ ಹೇರುವುದಾಗಿದೆ.

ಗಡಿಯನ್ನು ಮುಚ್ಚಲಾಗಿದೆ
 

ಗಡಿಯನ್ನು ಮುಚ್ಚಲಾಗಿದೆ

ಕಳೆದ ಏಪ್ರಿಲ್ ನಲ್ಲಿ ಒಂದು ಆದೇಶ ಹೊರಡಿಸಿದ್ದರು. ಯುನೈಟೆಡ್ ಸ್ಟೇಟ್ಸ್ ಶಾಶ್ವತ ನಿವಾಸಿಗಳು ಆಗುವುದರಿಂದ ಕೆಲವು ವಿದೇಶೀಯರನ್ನು ತಾತ್ಕಾಲಿಕವಾಗಿ ತಡೆಯುವ ಆದೇಶ ಅದಾಗಿತ್ತು. ಮಾರ್ಚ್ ನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಮತ್ತೊಂದು ನಿಯಮ ಘೋಷಿಸಿದ್ದರು. ಅದರ ಪ್ರಕಾರ, ಗಡಿಯಲ್ಲಿ ಸಿಲುಕಿಕೊಂಡವರನ್ನು ಶೀಘ್ರವೇ ಗಡೀಪಾರು ಮಾಡುವ ಅಧಿಕಾರ ನೀಡುತ್ತದೆ ಹಾಗೂ ಯು.ಎಸ್. ಆಶ್ರಯ ವ್ಯವಸ್ಥೆಯ ಸಂಪರ್ಕವನ್ನೇ ಕಡಿದು ಹಾಕುತ್ತದೆ. ಅಗತ್ಯ ಅಲ್ಲದ ಕಾರಣಗಳಿಗೆ ಯು.ಎಸ್. ಗಡಿ ದಾಟಬಾರದು ಎಂಬ ಕಾರಣಕ್ಕೆ ಕೆನಡಾ ಮತ್ತು ಮೆಕ್ಸಿಕೋ ಜತೆಗಿನ ಭೂ ಗಡಿಯನ್ನು ಮುಚ್ಚಲಾಗಿದೆ. ಈ ಅವಧಿಯನ್ನು ಹಲವು ಬಾರಿ ವಿಸ್ತರಣೆ ಕೂಡ ಮಾಡಲಾಗಿದೆ.

English summary

America Job Visa Policy Will Change And Announced Soon: Trump

Donald Trump said, U.S. job visa policy will be change and announced soon.
Story first published: Sunday, June 21, 2020, 15:50 [IST]
Company Search
COVID-19