For Quick Alerts
ALLOW NOTIFICATIONS  
For Daily Alerts

ಅಬ್ಬರಿಸಿ ಬಂದ ಕೊರೊನಾ; ತಂದಿತು ಗೂಗಲ್ ಪೇ, ಪೇಟಿಎಂ, ಫೋನ್ ಪೇ ಹವಾನ

By ಅನಿಲ್ ಆಚಾರ್
|

ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡಿದ್ದೇ ಕಾಣಿಸಿಕೊಂಡಿದ್ದು ಗ್ರಾಹಕರ ನಡವಳಿಕೆ ಹಾಗೂ ಖರೀದಿ ವಿಧಾನವೂ ಬದಲಾಗಿಹೋಯಿತು. ಲಾಕ್ ಡೌನ್ ಇದೆಯೋ ಇಲ್ಲವೋ ಎಂಬುದೇ ಮರೆತು ಹೋಗುವಷ್ಟು ಎಲ್ಲವೂ ಸಾಮಾನ್ಯ ಸ್ಥಿತಿಗೆ ಬಂದಿದ್ದರೂ ಖರೀದಿ ಸ್ವಭಾವ ಮಾತ್ರ ಹಾಗೇ ಮುಂದುವರಿದಿದೆ. ಯಾವಾಗ ಮಾರ್ಚ್ ನಲ್ಲಿ ಲಾಕ್ ಡೌನ್ ಘೋಷಿಸಲಾಯಿತೋ ಆಗಿನಿಂದ ಬಹುತೇಕ ಗ್ರಾಹಕರು ಆನ್ ಲೈನ್ ಶಾಪಿಂಗ್ ಗೆ ಆದ್ಯತೆ ನೀಡುತ್ತಿದ್ದಾರೆ.

 

ಅದು ಅಗತ್ಯ ವಸ್ತುವೇ ಇರಬಹುದು ಅಥವಾ ತೀರಾ ಅಗತ್ಯ ಅಲ್ಲದ್ದೇ ಇರಬಹುದು, ಸುರಕ್ಷಿತ ವಿಧಾನದಲ್ಲಿ ಖರೀದಿ ಮಾಡುವುದು ಹೇಗೆ ಎನ್ನುವುದಕ್ಕೆ ಪ್ರಾಮುಖ್ಯ ಕೊಡುತ್ತಿದ್ದಾರೆ. ಇದರ ಜತೆಗೆ ಕಾಂಟ್ಯಾಕ್ಟ್ ರಹಿತ ಪಾವತಿ ಅಥವಾ ಪೇಮೆಂಟ್ ವಿಧಾನಕ್ಕೇ ಆದ್ಯತೆ ನೀಡುತ್ತಿದ್ದಾರೆ ಎಂಬುದು ಅಧ್ಯಯನವೊಂದರಿಂದ ಗೊತ್ತಾಗಿದೆ.

ಅಮೆರಿಕನ್ ಎಕ್ಸ್ ಪ್ರೆಸ್ ಇಂಡಿಯಾದ ಜಾಗತಿಕ ಮಾರುಕಟ್ಟೆ ಸಂಶೋಧನೆ ಕಂಪೆನಿ YouGov ನಡೆಸಿರುವ ಈ ಸಮೀಕ್ಷೆಯಿಂದ ಗೊತ್ತಾಗಿರೋದು ಏನೆಂದರೆ, ಶೇಕಡಾ 69ರಷ್ಟು ಮಂದಿ ಕಾಂಟ್ಯಾಕ್ಟ್ ರಹಿತ ಪೇಮೆಂಟ್ ವಿಧಾನಕ್ಕೆ ಆದ್ಯತೆ ನೀಡುತ್ತಾರೆ. ಪೇಟಿಎಂ, ಭಿಮ್, ಗೂಗಲ್ ಪೇ ಅಥವಾ ಫೋನ್ ಪೇ ಮೂಲಕವಾಗಿ ಖರೀದಿಸಲು ಇಚ್ಛೆ ಪಡುತ್ತಾರೆ. ಅಂದ ಹಾಗೆ ಈ ಸಮೀಕ್ಷೆಯು ಬೆಂಗಳೂರು ಸೇರಿದಂತೆ ಹತ್ತು ನಗರಗಳಲ್ಲಿ ನಡೆದಿದ್ದು, ಸ್ಯಾಂಪಲ್ ಆಗಿ 1000 ಗ್ರಾಹಕರನ್ನು ಆರಿಸಿಕೊಳ್ಳಲಾಗಿತ್ತು.

ಮನೆಯಿಂದ ಹೊರಗೆ ಹೋಗಿ ಖರೀದಿಸಲು ಭಯ

ಮನೆಯಿಂದ ಹೊರಗೆ ಹೋಗಿ ಖರೀದಿಸಲು ಭಯ

ಹತ್ತಕ್ಕೆ ಎಂಟು ಮಂದಿ ತಮ್ಮ ಮನೆಯಿಂದ ಹೊರಕ್ಕೆ ಹೋಗಿ ಖರೀದಿಸುವುದಕ್ಕೆ ಭಯ ಆಗುತ್ತದೆ ಎಂದಿದ್ದಾರೆ. ತೀರಾ ಅಗತ್ಯ ವಸ್ತು ಅಲ್ಲದಿದ್ದರೂ ಆನ್ ಲೈನ್ ನಲ್ಲೇ ಖರೀದಿಸುವುದಾಗಿ ಹತ್ತಕ್ಕೆ ಆರು ಮಂದಿ ಹೇಳಿದ್ದಾರೆ. ಇನ್ನು ಮುಂದಿನ ಮೂರರಿಂದ ಆರು ತಿಂಗಳಲ್ಲಿ ಕೊರೊನಾಗೂ ಮುಂಚಿನಂತೆಯೇ ತಾವು ಖರೀದಿ ಮಾಡಬಹುದು ಎಂಬ ಭರವಸೆಯಲ್ಲಿ ಶೇಕಡಾ 63ರಷ್ಟು ಮಂದಿ ಇದ್ದಾರೆ. ಈ ಸಮೀಕ್ಷೆಯನ್ನು ಬೆಂಗಳೂರು, ದೆಹಲಿ, ಮುಂಬೈ ಹಾಗೂ ಕೋಲ್ಕತ್ತಾ ಸೇರಿ ಹತ್ತು ನಗರಗಳಲ್ಲಿ ಸೆಪ್ಟೆಂಬರ್ ನ ಮೊದಲ ಹದಿನೈದು ದಿನಗಳ ಕಾಲ ನಡೆಸಲಾಗಿತ್ತು. ಇದರಲ್ಲಿ ಮುನ್ನೂರು ಸಣ್ಣ ಹಾಗೂ ಮಧ್ಯಮ ಪ್ರಮಾಣದ ವ್ಯವಹಾರಗಳನ್ನು ಸಹ ಒಳಗೊಳ್ಳಲಾಗಿತ್ತು. ಇನ್ನು ಗ್ರಾಹಕರಲ್ಲಿ ಸ್ಥಳೀಯ ಮಳಿಗೆಗಳು/ಸಣ್ಣ ವ್ಯವಹಾರಸ್ಥರ ಬಳಿ ಖರೀದಿ ಮಾಡುವುದಕ್ಕೆ ಆಸಕ್ತಿ ಜಾಸ್ತಿ ಆಗಿದೆ.

ಸ್ಥಳೀಯ ಮಳಿಗೆಗಳ ಕಡೆಗೆ ಒಲವು ಜಾಸ್ತಿ
 

ಸ್ಥಳೀಯ ಮಳಿಗೆಗಳ ಕಡೆಗೆ ಒಲವು ಜಾಸ್ತಿ

ಪ್ರತಿ ನಾಲ್ವರಲ್ಲಿ ಮೂರು ಸ್ಥಳೀಯ ಮಳಿಗೆಗಳು ಪ್ರಯೋಜನಕಾರಿ ಎಂದಿದ್ದರೆ, ಶೇಕಡಾ 70ರಷ್ಟು ಮಂದಿ ಸ್ಥಳೀಯ ಸಣ್ಣ ವ್ಯವಹಾರಸ್ಥರಲ್ಲಿ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಇನ್ನು ಸ್ಥಳೀಯ ಮಳಿಗೆಗಳಿಗೆ ತೆರಳಬೇಕು ಅಂದರೂ ಸುರಕ್ಷತೆಗೆ ತಮ್ಮ ಪ್ರಮುಖ ಆದ್ಯತೆ ಎಂದು ಶೇಕಡಾ 53ಕ್ಕೂ ಹೆಚ್ಚು ಗ್ರಾಹಕರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. "ಲಾಕ್ ಡೌನ್ ನಿರ್ಬಂಧ ಸಡಿಲ ಆಗುತ್ತಿದ್ದಂತೆ ಸಣ್ಣ ವ್ಯಾಪಾರಗಳು ಮತ್ತು ಗ್ರಾಹಕರು ಸುರಕ್ಷತಾ ಕ್ರಮಗಳೊಂದಿಗೆ ಮತ್ತೆ ಕೊರೊನಾ ಹಿಂದಿನ ಖರೀದಿ ಮಟ್ಟಕ್ಕೆ ಬರುತ್ತದೆ ಎಂಬ ಭರವಸೆ ಇರಿಸಿರುವುದು ಹೃದಯ ತುಂಬಿ ಬರುತ್ತದೆ. ಆಸಕ್ತಿಕರ ಸಂಗತಿ ಏನೆಂದರೆ, ವ್ಯಾಪಾರಗಳು ಮತ್ತೆ ಆರಂಭವಾಗುತ್ತಿದ್ದಂತೆ ಶೇಕಡಾ ಎಪ್ಪತ್ತರಷ್ಟು ಮಂದಿ ಗ್ರಾಹಕರು ಸ್ಥಳೀಯ ಮಳಿಗೆಗಳಿಂದ ಖರೀದಿಸುವುದಕ್ಕೆ ಆದ್ಯತೆ ನೀಡುತ್ತಾರೆ," ಎಂದಿದ್ದಾರೆ ಅಮೆರಿಕನ್ ಎಕ್ಸ್ ಪ್ರೆಸ್ ಬ್ಯಾಂಕಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಎಸ್ ವಿಪಿ ಹಾಗೂ ಸಿಇಒ ಮನೋಜ್ ಅದ್ಲಖ.

ಅಮೆರಿಕನ್ ಎಕ್ಸ್ ಪ್ರೆಸ್ ನಿಂದ 20 ಕೋಟಿ ಅಮೆರಿಕನ್ ಡಾಲರ್ ಜಾಗತಿಕ ನಿಧಿ

ಅಮೆರಿಕನ್ ಎಕ್ಸ್ ಪ್ರೆಸ್ ನಿಂದ 20 ಕೋಟಿ ಅಮೆರಿಕನ್ ಡಾಲರ್ ಜಾಗತಿಕ ನಿಧಿ

ಗ್ರಾಹಕರನ್ನು ಉತ್ತೇಜಿಸಲು ಸಣ್ಣ ಹಾಗೂ ಮಧ್ಯಮ ವ್ಯವಹಾರಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಅಮೆರಿಕನ್ ಎಕ್ಸ್ ಪ್ರೆಸ್ 20 ಕೋಟಿ ಅಮೆರಿಕನ್ ಡಾಲರ್ ಜಾಗತಿಕ ನಿಧಿ ಸ್ಥಾಪಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಇನ್ನು ಸಣ್ಣ ಹಾಗೂ ಮಧ್ಯಮ ವ್ಯವಹಾರಗಳ ಮಾಲೀಕರ ಪೈಕಿ ಶೇಕಡಾ ಎಂಬತ್ತರಷ್ಟು ಮಂದಿ ಕೊರೊನಾ ಬಿಕ್ಕಟ್ಟಿನಿಂದ ಉಳಿದುಕೊಳ್ಳುತ್ತೇವೆ ಎಂಬ ಆಶಾಭಾವ ಹೊಂದಿದ್ದಾರೆ. ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಹಾಗೂ ಗಳಿಸಲು ಬೇಕಾದ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದನ್ನು ಕೊರೊನಾ ಬಿಕ್ಕಟ್ಟು ಮುಗಿದ ನಂತರವೂ ಮುಂದುವರಿಸಲಿದ್ದಾರೆ. ಶೇಕಡಾ 45ರಷ್ಟು ಸಣ್ಣ ಹಾಗೂ ಮಧ್ಯಮ ವ್ಯವಹಾರಗಳವರು ಹೊಸ ಪಾವತಿ ವಿಧಾನಗಳಾದ ಕಾಂಟ್ಯಾಕ್ಟ್ ರಹಿತ ಪೇಮೇಂಟ್ ಮೂಲಕ ಹಣ ಸ್ವೀಕರಿಸಲು ಈಗಾಗಲೇ ಆರಂಭಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

English summary

American Express Survey: Surge In Contactless Payments After Corona Pandemic

Even corona lockdown eases in India contactless payment surge can be seen. Here is the Survey findings of American Express.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X