For Quick Alerts
ALLOW NOTIFICATIONS  
For Daily Alerts

ದಾಖಲೆ ಮಟ್ಟಕ್ಕೇರಿದ್ದ ಚಿನ್ನ 11, 000 ರು ನಷ್ಟು ಕುಸಿತ ಕಂಡಿದ್ದೇಕೆ?

|

ಜಾಗತಿಕ ವಿದ್ಯಮಾನಗಳ ಮೇಲೆ ಅವಲಂಬಿತವಾಗಿರುವ ಹಳದಿ ಲೋಹದ ಬೆಲೆ 10 ತಿಂಗಳಲ್ಲೇ ಕನಿಷ್ಠ ಮಟ್ಟ ಎನ್ನುವ ಹಂತ ತಲುಪಿದೆ. ಚಿನ್ನ ಹಾಗೂ ಬೆಲೆ ಸತತವಾಗಿ ಕುಸಿತ ಕಂಡಿವೆ. ಆಗಸ್ಟ್ ತಿಂಗಳಿನಲ್ಲಿ 56, 200 ರು ಪ್ರತಿ 10 ಗ್ರಾಂ ತಲುಪಿದ್ದ ವಹಿವಾಟು ಚಿನ್ನದ ಬೆಲೆ ಈಗ 11,000 ರು ನಷ್ಟು ಕಳೆದುಕೊಂಡಿದೆ. ಇದರ ಜೊತೆಗೆ ಖರೀದಿ ಚಿನ್ನ ಕೂಡಾ ಕುಸಿತ ಕಾಣುತ್ತಿದೆ.

ರಾಯಿಟರ್ಸ್ ಪ್ರಕಾರ, ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,734.16 ಡಾಲರ್ ತಲುಪಿದೆ. ಸುಮಾರು 1.9 ಟ್ರಿಲಿಯನ್ ಡಾಲರ್ ಯುಎಸ್ ಆರ್ಥಿಕ ಉತ್ತೇಜನ ಪ್ಯಾಕೇಜ್ ಮಸೂದೆ ಬಗ್ಗೆ ಸೆನೆಟ್ ಚರ್ಚೆ ಆರಂಭವಾಗಿದೆ. ಆದರೆ, ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ವಹಿಸಿಲ್ಲ.

 

ಇದೇ ವೇಳೆ ಬೆಳ್ಳಿ ಬೆಲೆ ಶೇ 0.3% ಕುಸಿತ ಕಂಡು 26.67 ಡಾಲರ್ ಪ್ರತಿ ಔನ್ಸ್ ಆಗಿದೆ. ಪಲ್ಲಾಡಿಯಂ ಶೇ 0.6% ಏರಿಕೆ ಕಂಡು 2,376.50 ಡಾಲರ್‌ಗೆ ಏರಿಕೆಯಾಗಿದ್ದರೆ, ಪ್ಲಾಟೀನಂ ಶೇ 0.3% ಏರಿಕೆ ಕಂಡು 1,200.50 ರು ಗೆ ಕುಸಿದಿದೆ. ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ಪ್ರಕಾರ ಗೋಲ್ಡ್ ಫ್ಯೂಚರ್ ಶೇ 0.11 ಕುಸಿತ ಕಂಡು ಪ್ರತಿ 10 ಗ್ರಾಂಗೆ 45,500 ರು ನಂತೆ ವಹಿವಾಟು ನಡೆಸಿತ್ತು.

ದಾಖಲೆ ಮಟ್ಟಕ್ಕೇರಿದ್ದ ಚಿನ್ನ 11, 000 ರು ನಷ್ಟು ಕುಸಿತ ಕಂಡಿದ್ದೇಕೆ?

ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಪ್ರತಿಕ್ರಿಯಿಸಿ, ದೆಹಲಿ ಚಿನಿವಾರ ಪೇಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 208 ರು ಕುಸಿತ ಕಂಡಿದೆ, ಇದಕ್ಕೆ ಜಾಗತಿಕ ಚಿನ್ನದ ದರದ ವ್ಯತ್ಯಾಸ ಹಾಗೂ ರುಪಾಯಿ ಮೌಲ್ಯದ ಏರಿಳಿತ ಕಾರಣ ಎಂದಿದ್ದಾರೆ. ಡಾಲರ್ ಎದುರು ಇಂದು ರುಪಾಯಿ 45 ಪೈಸೆ ಮೌಲ್ಯ ಹೆಚ್ಚಿಸಿಕೊಂಡಿದೆ.

English summary

Amid Uncertain Global Cues; Gold Prices Down Rs 11,000 From Record Highs

Due to poor global cues and following international markets, gold and silver were seen trading lower in India. In the previous seven days, this was their sixth day of decline.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X