For Quick Alerts
ALLOW NOTIFICATIONS  
For Daily Alerts

ಆಂಟೋನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಐಪಿಒ 38% ಪ್ರೀಮಿಯಂಗೆ ಲಿಸ್ಟಿಂಗ್

|

ಆಂಟೋನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಐಪಿಒ 436.10 ರುಪಾಯಿಯೊಂದಿಗೆ ಎನ್ ಎಸ್ ಇಯಲ್ಲಿ ಲಿಸ್ಟಿಂಗ್ ಆಗಿದೆ. ಇಶ್ಯೂ ದರ ಎಂದು 315 ರುಪಾಯಿಗೆ ವಿತರಣೆ ಮಾಡಲಾಗಿತ್ತು. ಆ ಬೆಲೆಗಿಂತ 38% ಹೆಚ್ಚಳ ಕಂಡಿದೆ. ಇನ್ನು ಬಿಎಸ್ ಇಯಲ್ಲಿ ಷೇರು ದರವು 36.51 ಪರ್ಸೆಂಟ್ ಮೇಲೇರಿ 430 ರುಪಾಯಿಗೆ ಲಿಸ್ಟಿಂಗ್ ಆಗಿದೆ.

2020ರಲ್ಲಿ ನಿಫ್ಟಿ 15% ಏರಿಕೆ: 2017ರ ನಂತರ ಉತ್ತಮ ವಾರ್ಷಿಕ ರಿಟರ್ನ್2020ರಲ್ಲಿ ನಿಫ್ಟಿ 15% ಏರಿಕೆ: 2017ರ ನಂತರ ಉತ್ತಮ ವಾರ್ಷಿಕ ರಿಟರ್ನ್

ಡಿಸೆಂಬರ್ 21- 23ರ ಮಧ್ಯೆ ಷೇರು ಐಪಿಒ ಸಬ್ ಸ್ಕ್ರಿಪ್ಷನ್ ಗೆ ಇತ್ತು. 15 ಪಟ್ಟು ಹೆಚ್ಚಿನ ಬೇಡಿಕೆ ಬಂದಿತ್ತು. ರೀಟೇಲ್ ಹೂಡಿಕೆದಾರರಿಗೆ ಮೀಸಲಿದ್ದ ಭಾಗವು 16.54 ಪಟ್ಟು ಮತ್ತು ಸಾಂಸ್ಥಿಕೇತರ ಹೂಡಿಕೆದಾರರ ಭಾಗವು 18.68 ಪಟ್ಟು ಹೆಚ್ಚು ಬೇಡಿಕೆ ಪಡೆದಿತ್ತು. ಇನ್ನು QIB ಹೂಡಿಕೆದಾರರಿಗೆ ಮೀಸಲಾಗಿದ್ದ ಪಾಲು 9.67 ಪಟ್ಟು ಹೆಚ್ಚು ಸಬ್ ಸ್ಕ್ರೈಬ್ ಆಗಿತ್ತು.

ಆಂಟೋನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ IPO 38% ಪ್ರೀಮಿಯಂಗೆ ಲಿಸ್ಟಿಂಗ್

ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಜೋರಾಗಿ ಇರುವುದರಿಂದ ಆಂಟೋನಿ ವೇಸ್ಟ್ ಉತ್ತಮವಾದ ಲಿಸ್ಟಿಂಗ್ ಕಾಣಬಹುದು ಎಂಬ ನಿರೀಕ್ಷೆ ಇತ್ತು. ಮುನ್ಸಿಪಲ್ ಸಾಲಿಡ್ ವೇಸ್ಟ್ (MSW) ನಿರ್ವಹಣೆ ಕಂಪೆನಿಯು 300 ಕೋಟಿ ರುಪಾಯಿ ಸಂಗ್ರಹ ಮಾಡುವುದಕ್ಕಾಗಿ ಐಪಿಒ ಮೂಲಕ ಮಾರುಕಟ್ಟೆ ಪ್ರವೇಶಿಸಿತು.

English summary

Antony Waste Handling Cell IPO Listed With 38 Percent Premium

Antony waste handling cell IPO listed with 38 percent in NSE and 36 percent in sensex.
Story first published: Friday, January 1, 2021, 10:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X