For Quick Alerts
ALLOW NOTIFICATIONS  
For Daily Alerts

ಐಫೋನ್ 11, XR ಬೆಲೆ ಭಾರತದಲ್ಲಿ 14,200 ರುಪಾಯಿ ತನಕ ಕಡಿತ

|

ಆಪಲ್ ನಿಂದ ಐಫೋನ್ 11 ಹಾಗೂ ಐಫೋನ್ XR ಬೆಲೆಯನ್ನು ಪರಿಷ್ಕರಿಸಲಾಗಿದೆ. ಐಫೋನ್ 11 ಪ್ರೊ ಹಾಗೂ ಐಫೋನ್ 11 ಪ್ರೊ ಮ್ಯಾಕ್ಸ್ ಉತ್ಪಾದನೆ -ಮಾರಾಟ ನಿಲ್ಲಿಸಲಾಗುತ್ತದೆ. ಐಫೋನ್ 12 ಸರಣಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ ಮೇಲೆ ಈ ಘೋಷಣೆ ಮಾಡಲಾಗಿದೆ. ಹಲವು ವಿಶ್ಲೇಷಕರ ಅಭಿಪ್ರಾಯದ ಪ್ರಕಾರ, ಸದ್ಯಕ್ಕೆ ವಿಶ್ವದಲ್ಲಿ ಅತಿ ಹೆಚ್ಚು ಮಾರಾಟ ಆಗುತ್ತಿರುವ ಸ್ಮಾರ್ಟ್ ಫೋನ್ ಐಫೋನ್ 11.

ಆ ಫೋನ್ ಬೆಲೆಯಲ್ಲಿ 14,200 ರುಪಾಯಿ ಕಡಿತ ಆಗಲಿದೆ. ಈ ಹಿಂದೆ ಮೊಬೈಲ್ ಫೋನ್ ನ ನಿರ್ದಿಷ್ಟ ಬಿಡಿ ಭಾಗಗಳು ಮತ್ತು ಮೊಬೈಲ್ ಫೋನ್ ಗಳ ಮೇಲಿನ ಜಿಎಸ್ ಟಿ ಹೆಚ್ಚಳ ಮಾಡಿದಾಗ ಐಫೋನ್ 11 ಹಾಗೂ ಐಫೋನ್ XR ಬೆಲೆಯನ್ನು ಭಾರತದಲ್ಲಿ ಪರಿಷ್ಕರಿಸಲಾಗಿತ್ತು.

 

ಭಾರತದಲ್ಲಿ ಆಪಲ್ ಐಫೋನ್ 11ರ ಪರಿಷ್ಕೃತ ದರದ ವಿವರ ಹೀಗಿದೆ:

64GB: ರು. 54,900 (ಈ ಹಿಂದಿನ ದರ 68,300) 13,400 ಬೆಲೆ ಇಳಿಕೆ

128GB: ರು. 59,900 (ಈ ಹಿಂದಿನ ದರ 73,600) 13,700 ಬೆಲೆ ಇಳಿಕೆ

256GB: ರು. 69,900 (ಈ ಹಿಂದಿನ ದರ 84,100) 14,200 ಬೆಲೆ ಇಳಿಕೆ

ಐಫೋನ್ 11, XR ಬೆಲೆ ಭಾರತದಲ್ಲಿ 14,200 ರುಪಾಯಿ ತನಕ ಕಡಿತ

ಐಫೋನ್ XR

64GB: ರು. 47,900 (ಈ ಹಿಂದಿನ ದರ 52,500) 4,600 ಬೆಲೆ ಇಳಿಕೆ

128GB: ರು. 52,900 (ಈ ಹಿಂದಿನ ದರ 57,800) 4,900 ಬೆಲೆ ಇಳಿಕೆ

ಐಫೋನ್ 11 ಖರೀದಿಸಿದರೆ 14,900 ರುಪಾಯಿಯ ಏರ್ ಪಾಡ್ ಉಚಿತ

ಐಫೋನ್ ದರದಲ್ಲಿ ಬೆಲೆ ಇಳಿಕೆ ಒಂದು ಕಡೆಯಾಯಿತು, ಇದರ ಜತೆಗೆ ಆಪಲ್ ಆನ್ ಲೈನ್ ಸ್ಟೋರ್ ನಲ್ಲಿ ಅಕ್ಟೋಬರ್ 17ರಿಂದ ದೀಪಾವಳಿ ಆಪರ್ ಇದ್ದು, ಐಫೋನ್ 11 ಖರೀದಿಗೆ 14,900 ರುಪಾಯಿಯ ಏರ್ ಪಾಡ್ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ ದೊರೆಯಲಿದೆ. ಇದು ಲಭ್ಯತೆಯ ಆಧಾರದಲ್ಲಿ ದೊರೆಯಲಿದೆ.

English summary

Apple iPhone 11, XR Price Slash Upto 14200 Rupees After iPhone 12 Launch

Apple iPhone 11 and XR price slash in India upto 14,200 rupees after iPhone 12 launch. Here is the details.
Company Search
COVID-19