For Quick Alerts
ALLOW NOTIFICATIONS  
For Daily Alerts

ಸಾರ್ವಕಾಲಿಕ ದಾಖಲೆ: ಏಪ್ರಿಲ್‌ನಲ್ಲಿ 1.41 ಲಕ್ಷ ಕೋಟಿ ರೂ. GST ಆದಾಯ ಸಂಗ್ರಹ

|

ಕೋವಿಡ್‌-19 ಮಹಾಮಾರಿಯ ಕಾಟದ ನಡುವೆ ದೇಶದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಸಂಗ್ರಹವು ಏಪ್ರಿಲ್‌ನಲ್ಲಿ ದಾಖಲೆಯ ಮಟ್ಟದಲ್ಲಿ ಸಂಗ್ರಹವಾಗಿದೆ. ಏಪ್ರಿಲ್‌ನಲ್ಲಿ ಒಟ್ಟು ಸಂಗ್ರಹವಾದ ಜಿಎಸ್‌ಟಿ ಆದಾಯವು 1.41 ಲಕ್ಷ ಕೋಟಿ ರೂಪಾಯಿನಷ್ಟಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.

 

ಗುಡ್‌ನ್ಯೂಸ್: ಗೃಹ ಸಾಲ ಬಡ್ಡಿ ದರ ಇಳಿಕೆ ಮಾಡಿದ ಎಸ್‌ಬಿಐ

ಶನಿವಾರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಒಟ್ಟು ಜಿಎಸ್‌ಟಿ ಆದಾಯ 1,41,384 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) 27,837 ಕೋಟಿ ಆಗಿದ್ದರೆ, ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) 35,621 ಕೋಟಿ ರೂಪಾಯಿನಷ್ಟಿದೆ.

ಏಪ್ರಿಲ್‌ನಲ್ಲಿ 1.41 ಲಕ್ಷ ಕೋಟಿ ರೂ. ಜಿಎಸ್‌ಟಿ ಆದಾಯ ಸಂಗ್ರಹ

ಹೆಚ್ಚುವರಿಯಾಗಿ, ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) 68,481 ಕೋಟಿ ರೂಪಾಯಿ ಮತ್ತು ಸೆಸ್ 9,445 ಕೋಟಿ ರೂಪಾಯಿನಷ್ಟಿದೆ (ಸರಕುಗಳ ಆಮದಿಗೆ ಸಂಗ್ರಹಿಸಿದ 981 ಕೋಟಿ ಸೇರಿದಂತೆ).

ಜಿಎಸ್‌ಟಿ ವ್ಯವಸ್ಥೆಯನ್ನು ಪರಿಚಯಿಸಿದ ನಂತರದ ಅತಿ ಹೆಚ್ಚು ಆದಾಯ ಸಂಗ್ರಹ ಇದಾಗಿದ್ದು, ಸತತ ಏಳನೇ ತಿಂಗಳು ಜಿಎಸ್‌ಟಿ ಆದಾಯ ಸಂಗ್ರಹವು 1 ಲಕ್ಷ ಕೋಟಿ ರೂಪಾಯಿ ದಾಟಿದೆ. ಮಾರ್ಚ್‌ 2021ಕ್ಕೆ ಹೋಲಿಸಿದರೆ ಜಿಎಸ್‌ಟಿ ಆದಾಯ ಶೇಕಡಾ 14ರಷ್ಟು ಹೆಚ್ಚಾಗಿದೆ.

English summary

April 2021 GST collection at Rs 1.41 lakh crore: Finance ministry

The gross goods and services tax (GST) revenue collected in the month of April 2021 stood at an all-time high record of Rs 1.41 lakh crore, said the Ministry of Finance on Saturday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X