For Quick Alerts
ALLOW NOTIFICATIONS  
For Daily Alerts

ಫೆಬ್ರವರಿ 26ರಿಂದ ಬೆಂಗಳೂರಲ್ಲಿ ‘ಏಷ್ಯಾ ಜ್ಯೂವೆಲ್ಸ್ ಫೇರ್ 2021’

|

ಬೆಂಗಳೂರು ಫೆಬ್ರವರಿ 14: ದಕ್ಷಿಣ ಭಾರತದ ಅತ್ಯಂತ ಆಕರ್ಷಕ ಮತ್ತು ವಿಶಿಷ್ಟ ಆಭರಣ ಪ್ರದರ್ಶನ ಏಷ್ಯಾ ಜ್ಯೂವೆಲ್ಸ್ ಫೇರ್ 2021 ಬೆಂಗಳೂರಿನಲ್ಲಿ ತನ್ನ 21ನೇ ಆವೃತ್ತಿಯನ್ನು ಫೆಬ್ರವರಿ 26ರಿಂದ 28, 2021ರಲ್ಲಿ ಆಯೋಜಿಸಿದೆ.

 

ಈ ಅದ್ದೂರಿ ಆಭರಣ ಮೇಳವು ನಗರದ ಅತ್ಯಂತ ಐಷಾರಾಮಿ 5-ಸ್ಟಾರ್ ಹೋಟೆಲ್ ವಿಠಲ್ ಮಲ್ಯ ರಸ್ತೆಯ ಯುಬಿ ಸಿಟಿಯ ಜೆಡಬ್ಲ್ಯೂ ಮಾರಿಯಟ್ ಹೋಟೆಲ್‍ನಲ್ಲಿ ಬೆಳಿಗ್ಗೆ 10.30 ರಾತ್ರಿ 8ರವರೆಗೆ ನಡೆಯಲಿದೆ. ಈ ಪ್ರದರ್ಶನದಲ್ಲಿ ಹಿಂದೆಂದೂ ಕಾಣದ ಭಾರತದಾದ್ಯಂತ ಎಚ್ಚರಿಕೆಯಿಂದ ಆಯ್ದ ಅತ್ಯುತ್ತಮ ಆಭರಣ ವಿನ್ಯಾಸಗಳನ್ನು ಒಂದೇ ಸೂರಿನಡಿ ನೀಡುತ್ತದೆ.

ಏಷ್ಯಾ ಜ್ಯೂವೆಲ್ಸ್ ಫೇರ್ ವಿಶೇಷವಾದ ಅತ್ಯುತ್ತಮ ಬ್ರಾಂಡೆಡ್ ಚಿನ್ನ ಮತ್ತು ವಜ್ರಾಭರಣಗಳನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ಚಿನ್ನ ಆಭರಣ, ವಜ್ರಾಭರಣ, ಪ್ಲಾಟಿನಂ ಆಭರಣ, ಸಾಂಪ್ರದಾಯಿಕ ಆಭರಣ, ವಿವಾಹದ ಆಭರಣ, ಅಮೂಲ್ಯ ಹರಳಿನ ಆಭರಣ, ಕುಂದನ್, ಜಡೌ ಮತ್ತು ಪೊಲ್ಕಿ ಆಭರಣಗಳಿದ್ದವು.

ಫೆಬ್ರವರಿ 26ರಿಂದ ಬೆಂಗಳೂರಲ್ಲಿ ‘ಏಷ್ಯಾ ಜ್ಯೂವೆಲ್ಸ್ ಫೇರ್ 2021’

"ಏಷ್ಯಾ ಜ್ಯೂವೆಲ್ಸ್ ಫೇರ್" ನಗರದ ಅತ್ಯುತ್ತಮ ಆಭರಣ ಪ್ರದರ್ಶನಗಳಲ್ಲಿ ಒಂದಾಗಿದೆ. ಮುಂದಿನ ವಿವಾಹದ ಋತುವಿಗೆ ಮತ್ತು ಎಲ್ಲ ಸಂಭವನೀಯ ವಧು ವರರು ಕೊಳ್ಳಿರಿ ಅಥವಾ ನಿಮ್ಮ ಆಭರಣವನ್ನು ಪ್ರಿ-ಬುಕ್ ಮಾಡಿ. ಈ ಮೇಳವು ಅತ್ಯುತ್ತಮ ಆಭರಣ, ವಿನ್ಯಾಸ ಮತ್ತು ಅಮೂಲ್ಯ ಹರಳುಗಳನ್ನು ಒಂದೇ ಸೂರಿನಡಿ ಪಡೆಯಬಹುದು. ಇದು ದಕ್ಷಿಣ ಭಾರತದ ವಿಶೇಷ ಮತ್ತು ವಿಶ್ವಮಟ್ಟದ ಆಭರಣ ಕೊಳ್ಳಲು ಪರಿಪೂರ್ಣ ತಾಣವಾಗಿದೆ" ಎಂದರು.

ಬೆಂಗಳೂರು, ನವದೆಹಲಿ, ಮುಂಬೈ, ಜೈಪುರ, ಸೂರತ್ ಮತ್ತು ಹೈದರಾಬಾದ್‍ನ ಮುಂಚೂಣಿಯ ಐಷಾರಾಮಿ ಆಭರಣ ವಿನ್ಯಾಸಗಳನ್ನು ಹೊಂದಿದೆ. ಈ ವಿಶೇಷ ಆಭರಣಗಳಿಗೆ ಕೆಲ ಅಂತಾರಾಷ್ಟ್ರೀಯ ಆಭರಣ

ಬ್ರಾಂಡ್‍ಗಳಿದ್ದು ಅವುಗಳು:
ಗಜ್‍ರಾಜ್ ಜ್ಯೂವೆಲ್ಲರ್ಸ್, ಶ್ರೀ ಗಣೇಶ್ ಡೈಮಂಡ್ಸ್ ಅಂಡ್ ಜ್ಯೂವೆಲ್ಲರಿ, ನಿಖಾರ ಜ್ಯೂವೆಲ್ಸ್, ಆನಂದ್ ಶಾ ಗೋಲ್ಡನ್ ಜ್ಯೂವೆಲ್ಸ್, ನೊರ್ನಮೆಂಟ್, ವಿತ್ರಾಗ್ ಜ್ಯೂವೆಲ್ಸ್, ಔರಾ ಜ್ಯೂವೆಲ್ಸ್, ರೇಣುಕಾ ಇಂಪೆಕ್ಸ್, ಝುರೀ ಜ್ಯೂವೆಲ್ಸ್, ನೇಹಾ ಕ್ರಿಯೇಷನ್ಸ್, ಅನನ್ಯ ಜ್ಯೂವೆಲ್ಸ್, ಆಶರ್ ಜ್ಯೂವೆಲ್ಸ್, ಗೋಲ್ಡ್ ಕಾರಟ್, ಮೋದಿ ಗೋಲ್ಡ್, ಸೆಹಗಲ್ ಜ್ಯೂವೆಲ್ಲರ್ಸ್, ಶ್ರೀ ಪರಮನಿ ಜ್ಯೂವೆಲ್ಸ್, ಮಂಗಲ್ ಜೆಮ್ಸ್, ಸುನಿಲ್ ಜ್ಯೂವೆಲ್ಲರ್ಸ್, ರೂಪಮ್ ಸಿಲ್ವರ್, ಸೋಹಂ ಕ್ರಿಯೇಷನ್ಸ್, ಇಂಟರ್‍ನ್ಯಾಷನಲ್ ಡೈಮಂಡ್ ಕಂಪನಿ ಅಂಡ್ ಎಫ್‍ಝಡ್ ಜೆಮ್ಸ್.

English summary

Asia Jewels Fair 2021 comes to Bengaluru

Asia Jewels Fair 2021 will be held at JW Marriott Hotel, Bengaluru starting on 26th February
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X