For Quick Alerts
ALLOW NOTIFICATIONS  
For Daily Alerts

ಮೇ ಅಂತ್ಯದಲ್ಲಿ ಮುಷ್ಕರಕ್ಕೆ ಬ್ಯಾಂಕ್ ನೌಕರರ ಎಚ್ಚರಿಕೆ, ಕಾರಣವೇನು?

|

ಬ್ಯಾಂಕ್ ನೌಕರರು ಈಗಾಗಲೇ ಹಲವಾರು ಬಾರಿ ಸರ್ಕಾರದ ವಿರುದ್ಧ ಮುಷ್ಕರವನ್ನು ನಡೆಸಿದ್ದಾರೆ. ಹಲವಾರು ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದರ ವಿರುದ್ಧವಾಗಿ ಈ ಪ್ರತಿಭಟನೆಯನ್ನು ಬ್ಯಾಂಕ್ ನೌಕರರು ನಡೆಸುತ್ತಾ ಬಂದಿದ್ದಾರೆ. ಆದರೆ ಈಗ ಬ್ಯಾಂಕ್ ನೌಕರರು ಹೊಸ ಸಮಸ್ಯೆಯ ವಿಚಾರದಲ್ಲಿ ಈ ತಿಂಗಳಿನ ಅಂತ್ಯದಲ್ಲಿ ಮುಷ್ಕರ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.

 

ವಿವಿಧ ಬ್ಯಾಂಕ್‌ಗಳ ಹಲವು ಪ್ರಮುಖ ಒಕ್ಕೂಟಗಳು ಮೇ ಅಂತ್ಯದಲ್ಲಿ ಒಂದು ಅಥವಾ ಎರಡು ದಿನಗಳ ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿದೆ. ಬ್ಯಾಂಕ್ ನೌಕರರು ಮತ್ತೆ ಯುದ್ಧದ ಹಾದಿಯಲ್ಲಿದ್ದಾರೆ ಎಂದು ಕಾರ್ಯಕರ್ತರು ಗುರುವಾರ ತಿಳಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಶಾಖೆಗಳನ್ನು ಮುಚ್ಚುವುದು, ಉದ್ಯೋಗಿಗಳಿಗೆ ಇದರಿಂದಾಗುವ ಉದ್ಯೋಗ ನಷ್ಟ, ವರ್ಗಾವಣೆ ಮೊದಲಾದ ವಿಚಾರದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಗಳು ಮೇ 30-31 ರಂದು ಮುಷ್ಕರಕ್ಕೆ ಮುಂದಾಗಿದ್ದಾರೆ.

ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಪ್ರತಿಭಟನೆಗೆ ಎಡಪಕ್ಷಗಳ ಕರೆ

ಅದೇ ರೀತಿ, ಬ್ಯಾಂಕ್ ಆಫ್ ಬರೋಡಾ ಮತ್ತು ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಉದ್ಯೋಗಿಗಳು ಮೇ 30 ರಂದು ನಾವು ಕೆಲಸ ಮಾಡಲ್ಲ ಎಂದು ಹೇಳಿದ್ದಾರೆ. ಈ ನಡುವೆ ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಫೆಡರಲ್ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್ ಸಿಬ್ಬಂದಿಗಳು ಈಗಾಗಲೇ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಹಾಗಾದರೆ ಬ್ಯಾಂಕ್ ನೌಕರರು ಯಾಕಾಗಿ ಇಷ್ಟು ಆಕ್ರೋಶಕ್ಕೆ ಒಳಗಾಗಿದ್ದಾರೆ, ಅವರ ಅಸಮಾಧಾನ, ಬೇಡಿಕೆ ಏನು ಎಂದು ತಿಳಿಯೋಣ ಮುಂದೆ ಓದಿ...

 ಹೊರಗುತ್ತಿಗೆಯ ವಿರುದ್ಧ ಆಕ್ರೋಶ

ಹೊರಗುತ್ತಿಗೆಯ ವಿರುದ್ಧ ಆಕ್ರೋಶ

ಮಹಾರಾಷ್ಟ್ರ ಸ್ಟೇಟ್ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ (MSBEF) ಪ್ರಧಾನ ಕಾರ್ಯದರ್ಶಿ ದೇವಿದಾಸ್ ತುಳಜಾಪುರ್ಕರ್ ಮಾತನಾಡಿ, "ಇಡೀ ಬ್ಯಾಂಕಿಂಗ್ ಉದ್ಯಮದಲ್ಲಿ ಕೆಲವು ಆಂದೋಲನಗಳು ಬಹುತೇಕ ಪ್ರತಿ ಬ್ಯಾಂಕ್‌ಗಳ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಕಳೆದ 5-6 ವರ್ಷಗಳಿಂದ, ಬ್ಯಾಂಕ್‌ಗಳು ಅನೇಕ ಕೆಲಸಗಳನ್ನು ಹೊರಗಿನ ಖಾಸಗಿ ವ್ಯಕ್ತಿಗಳಿಗೆ ಹೊರಗುತ್ತಿಗೆ ನೀಡಲು ಪ್ರಾರಂಭಿಸಿವೆ. ಎಲ್ಲಾ ನೇಮಕಾತಿಗಳು ನಿಂತುಹೋಗಿವೆ," ಎಂದು ಹೇಳಿದ್ದಾರೆ.

 ನೇಮಕಾತಿ ವಿಚಾರ, ಭಿನ್ನಾಭಿಪ್ರಾಯ

ನೇಮಕಾತಿ ವಿಚಾರ, ಭಿನ್ನಾಭಿಪ್ರಾಯ

ಫೆಡರಲ್ ಬ್ಯಾಂಕ್‌ನಂತಹ ಕೆಲವು ಸಂಸ್ಥೆಗಳಲ್ಲಿ, ಯೂನಿಯನ್ ಪ್ರತಿನಿಧಿಗಳ ಭಿನ್ನಾಭಿಪ್ರಾಯದ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಬ್ಯಾಂಕ್ ನೌಕರರು ಆಕ್ರೋಶಗೊಂಡಿದ್ದಾರೆ. ಹಾಗೆಯೇ ಅವರ ಮೇಲೆ ದಾಳಿ ಮಾಡುವ ಆಡಳಿತದ ಪ್ರಯತ್ನಗಳ ವಿರುದ್ಧ ನೌಕರರು ಆಂದೋಲನ ನಡೆಸುತ್ತಿದ್ದಾರೆ ಎಂದು ಎಂಎಸ್‌ಬಿಇಎಫ್ ಅಧ್ಯಕ್ಷ ನಂದಕುಮಾರ್ ಚವಾಣ್ ಮಾಹಿತಿ ನೀಡಿದ್ದಾರೆ. "ಬ್ಯಾಂಕಿಂಗ್ ಉದ್ಯಮದಲ್ಲಿನ ಅತ್ಯಂತ ಗಂಭೀರ ಸಮಸ್ಯೆಗಳ ಪೈಕಿ ನೇಮಕಾತಿ ವಿಷಯವಾಗಿದೆ. ಈ ಬಗ್ಗೆ ಸಂಪೂರ್ಣ ಆಂದೋಲನವನ್ನು ಪ್ರಾರಂಭಿಸಲು ಯುಕೊ ಬ್ಯಾಂಕ್ ಒಕ್ಕೂಟಗಳು ಇತ್ತೀಚೆಗೆ ನಾಗ್ಪುರದಲ್ಲಿ ನಡೆದ ತಮ್ಮ ಸಭೆಯಲ್ಲಿ ನಿರ್ಧರಿಸಿವೆ," ಎಂದು ತಿಳಿಸಿದ್ದಾರೆ.

 ದೊಡ್ಡ ಕೆಲಸದ ಹೊರೆ, ಉದ್ಯೋಗಿಗಳ ಮೇಲೆ ಭಾರಿ ಒತ್ತಡ
 

ದೊಡ್ಡ ಕೆಲಸದ ಹೊರೆ, ಉದ್ಯೋಗಿಗಳ ಮೇಲೆ ಭಾರಿ ಒತ್ತಡ

ಮಹಾರಾಷ್ಟ್ರ ಸ್ಟೇಟ್ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ (MSBEF) ಪ್ರಧಾನ ಕಾರ್ಯದರ್ಶಿ ದೇವಿದಾಸ್ ತುಳಜಾಪುರ್ಕರ್ ಪ್ರಕಾರ, "ಪ್ರಸ್ತುತ ಎಲ್ಲಾ ಬ್ಯಾಂಕ್‌ಗಳಲ್ಲಿ ಭಾರತದಾದ್ಯಂತ ಸುಮಾರು 900,000 ಬ್ಯಾಂಕ್ ಉದ್ಯೋಗಿಗಳು ಇದ್ದಾರೆ. ಆದರೆ ವಿವಿಧ ಬ್ಯಾಂಕ್ ಕಾರ್ಯಗಳನ್ನು ಹೊರಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಗಳು ನಡೆಸುತ್ತಿದೆ. ಅಲ್ಲೂ ಸಮಾನ ಸಂಖ್ಯೆಯಲ್ಲಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಜೊತೆಗೆ, ಕೇಂದ್ರ ಸರ್ಕಾರವು ತಮ್ಮ ಎಲ್ಲಾ ಸಾಮಾಜಿಕ ಕ್ಷೇತ್ರದ ಯೋಜನೆಗಳನ್ನು ಬ್ಯಾಂಕ್‌ಗಳ ಮೂಲಕ ಜಾರಿಗೊಳಿಸಿದೆ. ಇದು ಉದ್ಯೋಗಿಗಳ ಕೆಲಸದ ಹೊರೆಯನ್ನು ಹೆಚ್ಚು ಮಾಡಿದೆ. ಬ್ಯಾಂಕ್‌ಗಳಲ್ಲಿ ಉದ್ಯೋಗಿಗಳ ದೊಡ್ಡ ಪ್ರಮಾಣದ ನಿವೃತ್ತಿ ಕಂಡುಬಂದಿದೆ. ಆದರೆ ಯಾವುದೇ ಹೊಸ ನೇಮಕಾತಿಗಳಿಲ್ಲದೆ ಅಸ್ತಿತ್ವದಲ್ಲಿರುವ ಉದ್ಯೋಗಿಗಳಲ್ಲಿಯೇ ದುಡಿಸುತ್ತಿದ್ದಾರೆ. ಇದು ಉದ್ಯೋಗಿಗಳ ಮೇಲೆ ಹೊರೆಯನ್ನು ಹೆಚ್ಚಿಸಿದೆ, ಭಾರೀ ಒತ್ತಡ ಉಂಟಾಗಿದೆ. ಇದು ನೌಕರರ ಅಸಮಾಧಾನಕ್ಕೆ ಕಾರಣ," ಎಂದು ವಿವರಿಸಿದ್ದಾರೆ.

 ಬ್ಯಾಂಕ್ ನೌಕರರ ಆಗ್ರಹವೇನು?

ಬ್ಯಾಂಕ್ ನೌಕರರ ಆಗ್ರಹವೇನು?

ಬ್ಯಾಂಕ್‌ಗಳು ತಮ್ಮ ಎನ್‌ಪಿಎ ಸಮಸ್ಯೆಗಳು ಮತ್ತು ಹಿಂದೆ ಕೋವಿಡ್-19 ಬಿಕ್ಕಟ್ಟಿನಿಂದ ಕೊಂಚ ಹೊರಬರುತ್ತಿದೆ. ಈಗಷ್ಟೇ ಕೊಂಚ ಚೇತರಿಕೆ ಕಾಣುತ್ತಿದೆ. ಈ ಸಂದರ್ಭದಲ್ಲಿ ಉದ್ಯೋಗಿಗಳು ಮತ್ತು ಒಕ್ಕೂಟಗಳ ನಿಜವಾದ ಕಾಳಜಿಯನ್ನು ತೆಗೆದುಕೊಳ್ಳಲು ಸರ್ಕಾರ ಮತ್ತು ಬ್ಯಾಂಕಿಂಗ್ ಉದ್ಯಮವು ಕ್ರಮವನ್ನು ಕೈಗೊಳ್ಳಬೇಕು ಎಂದು ಬ್ಯಾಂಕ್ ನೌಕರರ ಆಗ್ರಹವಾಗಿದೆ. ಹಾಗೆಯೇ ಹೊರಗುತ್ತಿಗೆಯನ್ನು ಕೈಬಿಡಬೇಕು, ಹೊಸ ನೇಮಕಾತಿ ಮಾಡಬೇಕು ಈ ಮೂಲಕ ಉದ್ಯೋಗಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಕೂಡಾ ಬ್ಯಾಂಕ್ ನೌಕರರು ಒತ್ತಾಯ ಮಾಡಿದ್ದಾರೆ.

English summary

Bank Employees Threaten Strikes in May-End as New Discontent Brews Among Employees

Bank strike in May month end; Central Bank of India staffers shall strike work on May 30-31 to protest against large-scale shutting down of branches, bypassing employees in crucial decision-making processes, large-scale transfers, etc.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X