For Quick Alerts
ALLOW NOTIFICATIONS  
For Daily Alerts

ಗಮನಿಸಿ: ಜನವರಿಯಲ್ಲಿ ಬ್ಯಾಂಕುಗಳಿಗೆ 16 ರಜಾದಿನಗಳು

|

ಹೊಸ ವರ್ಷದ ಆರಂಭ ತಿಂಗಳು ಜನವರಿಯಲ್ಲಿ ಖಾಸಗೀ ಬ್ಯಾಂಕುಗಳು ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಹಲವಾರು ದಿನಗಳ ಕಾಲ ಬಂದ್‌ ಆಗಿರಲಿದೆ. ಹೊಸ ವರ್ಷದ ಮೊದಲ ತಿಂಗಳಿನಲ್ಲೇ ಸುಮಾರು 16 ದಿನಗಳ ಕಾಲ ಬ್ಯಾಂಕ್‌ ರಜೆ ಇದೆ. ಆರ್‌ಬಿಐನ ಮಾರ್ಗಸೂಚಿ ಪ್ರಕಾರ ಜನವರಿ 2022 ರಲ್ಲಿ ಇರುವ ಒಟ್ಟು 31 ದಿನಗಳ ಪೈಕಿ ಬ್ಯಾಂಕ್‌ಗಳಿಗೆ ಸುಮಾರು 16 ದಿನಗಳು ರಜೆ ಇದೆ. ಅಂದರೆ ಜನವರಿ ತಿಂಗಳ ಅರ್ಧ ತಿಂಗಳು ಬ್ಯಾಂಕ್‌ಗೆ ರಜೆ ಇದ್ದ ಹಾಗೆ.

 

ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾವು 2022 ರ ವಾರ್ಷಿಕ ರಜಾ ದಿನಗಳನ್ನು ಬಿಡುಗಡೆ ಮಾಡಿದೆ. ಆರ್‌ಬಿಐ ಮಾರ್ಗಸೂಚಿಯಂತೆ ಎಲ್ಲಾ ಬ್ಯಾಂಕುಗಳಲ್ಲಿ ರಜಾ ದಿನಗಳು ಇರಲಿದೆ. ಆರ್‌ಬಿಐನ ಪಟ್ಟಿಯ ಪ್ರಕಾರ ಜನವರಿ 2022 ರಲ್ಲಿ ಒಟ್ಟು ಒಂಬತ್ತು ರಾಜ್ಯವಾರು ರಜೆಗಳು ಇದೆ. ಮುಂದಿನ ವಾರದಿಂದಲೇ ಆ ರಜೆಗಳು ಇರಲಿದೆ. ಜನವರಿ ಒಂದರಂದೇ ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ ಮುಚ್ಚರಲಿದೆ. ಇನ್ನು ಉಳಿದಂತೆ ಏಳು ರಜಾ ದಿನಗಳು ವಾರದ ರಜಾದ ದಿನಗಳು ಆಗಿದೆ. ಈ ವಾರದ ರಜಾ ದಿನಗಳ ಸಂದರ್ಭದಲ್ಲಿ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಿರಲಿದೆ. ಆದ್ದರಿಂದಾಗಿ ನಿಮಗೆ ಯಾವುದೇ ಬ್ಯಾಂಕಿನ ವಹಿವಾಟು ಇದ್ದರೆ ಈ ರಜಾ ದಿನಗಳ ಬಗ್ಗೆ ಮಾಹಿತಿ ತಿಳಿದು ಕೊಳ್ಳಿ, ಮುಂದೆ ಓದಿ..

ಇನ್ನು ಈ 16 ದಿನ ರಜೆಗಳ ಪೈಕಿ ಸುಮಾರು ಒಂಬತ್ತು ವಾರದ ರಜೆಗಳು ಆಗಿರಲಿದೆ. ಈ ಹಿನ್ನೆಲೆಯಿಂದಾಗಿ ಎಲ್ಲಾ ರಾಜ್ಯಗಳ ಮೇಲೆ ಈ ರಜೆಗಳು ಪ್ರಭಾವ ಬೀರಲಾರದು. ಉದಾಹರಣೆಗೆ ಹೇಳುವುದಾದರೆ, ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಕೋಲ್ಕತ್ತಾದಲ್ಲಿ ರಜೆ ಇರಲಿದೆ. ಆದರೆ ಬೇರೆ ರಾಜ್ಯಗಳಲ್ಲಿ ಈ ದಿನ ಎಂದಿನಂತೆ ಕಾರ್ಯ ನಿರ್ವಹಣೆ ಆಗಲಿದೆ.

ಗಮನಿಸಿ: ಜನವರಿಯಲ್ಲಿ ಬ್ಯಾಂಕುಗಳಿಗೆ 16 ರಜಾದಿನಗಳು

ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ ಅಥವಾ ಆರ್‌ಬಿಐನ ಮಾರ್ಗಸೂಚಿಯಂತೆ ಬ್ಯಾಂಕ್‌ ರಜೆಗಳು ಇರಲಿದೆ. ಕೇಂದ್ರ ಬ್ಯಾಂಕ್‌ನ ಪಟ್ಟಿಯ ಪ್ರಕಾರ ಈ ತಿಂಗಳಿನಲ್ಲಿ 11 ರಜಾ ದಿನಗಳು ಇರಲಿದೆ. ಉಳಿದವುಗಳು ವಾರದ ರಜೆಗಳು ಆಗಿರಲಿದೆ. ತಿಂಗಳಿನ ಎಲ್ಲಾ ಭಾನುವಾರಗಳು ಕೂಡಾ ಈ ಪಟ್ಟಿಯಲ್ಲಿ ಸೇರ್ಪಡೆ ಆಗಿದೆ. ಹಾಗೆಯೇ ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡಾ ಸೇರ್ಪಡೆ ಆಗಿದೆ. ಬ್ಯಾಂಕುಗಳು ಮೊದಲ ಹಾಗೂ ಮೂರನೇ ಶನಿವಾರ ಮಾತ್ರ ತೆರೆದಿರುತ್ತದೆ. ಎರಡನೇ ಹಾಗೂ ನಾಲ್ಕನೇ ಶನಿವಾರ ಮುಚ್ಚಿರಲಿದೆ.

 

ಆರ್‌ಬಿಐ ಮೂರು ಹಂತಗಳಲ್ಲಿ ಬ್ಯಾಂಕ್‌ ರಜೆಗಳನ್ನು ವಿಂಗಡನೆ ಮಾಡಲಿದೆ. ರಾಜ್ಯವಾರು ರಜೆಗಳು, ಧಾರ್ಮಿಕ ರಜೆಗಳು ಹಾಗೂ ಹಬ್ಬದ ಹಿನ್ನೆಲೆ ರಜೆಗಳು ಎಂದು ಆರ್‌ಬಿಐ ವಿಂಗಡನೆ ಮಾಡುತ್ತದೆ. ಇನ್ನು ಮುಂದಿನ ತಿಂಗಳು ಅಂದರೆ ಜನವರಿಯಲ್ಲಿ ರಾಷ್ಟ್ರೀಯ ರಜೆಯೂ ಕೂಡಾ ಇರಲಿದೆ. ಜನವರಿ 26 ರಂದು ಗಣರಾಜ್ಯ ದಿನವಾದ ಹಿನ್ನೆಲೆಯಿಂದಾಗಿ ರಾಷ್ಟ್ರೀಯ ರಜೆ ಇರಲಿದೆ. ಆದರೆ ಇಂಫಾಲ್‌, ಜೈಪುರ, ಶ್ರೀನಗರ, ಭೋಪಾಲ್‌, ಭುವನೇಶ್ವರ, ಚಂಡೀಗಢ, ಅಗರ್ತಾಲದಲ್ಲಿ ಜನವರಿ 26 ರಂದು ಬ್ಯಾಂಕುಗಳು ತೆರೆದಿರಲಿದೆ. ಹಾಗಾದರೆ ದೇಶದಲ್ಲಿ ಮುಂದಿನ ಹೊಸ ವರ್ಷದ ಆರಂಭದ ಜನವರಿ ತಿಂಗಳಿನಲ್ಲಿ ಯಾವೆಲ್ಲಾ ದಿನಗಳು ಬ್ಯಾಂಕ್‌ ರಜೆ ಇರಲಿದೆ ಎಂಬುವುದನ್ನು ತಿಳಿಯಲು ಮುಂದೆ ಓದಿ.. ಈ ಕೆಳಗಿದೆ ಪಟ್ಟಿ

ಜನವರಿ ತಿಂಗಳಿನ ಬ್ಯಾಂಕ್‌ ರಜೆಗಳು

ಜನವರಿ 1: ಹೊಸ ವರ್ಷ ಐಜ್ವಾಲ್‌, ಚೆನ್ನೈ, ಗ್ಯಾಂಗ್ಟಾಕ್ ಹಾಗೂ ಶಿಲಾಂಗ್‌
ಜನವರಿ 3: ಹೊಸ ವರ್ಷ ಆಚರಣೆ/ಲೂಸುಂಗ್‌ - ಐಸ್ವಾಲ್‌ ಹಾಗೂ ಗ್ಯಾಂಗ್ಟಾಕ್
ಜನವರಿ 4: ಲೂಸುಂಗ್‌ - ಗ್ಯಾಂಗ್ಟಾಕ್
ಜನವರಿ 11: ಮಿಷನರಿ ದಿನ - ಐಜ್ವಾಲ್‌
ಜನವರಿ 12: ಸ್ವಾಮಿ ವಿವೇಕಾನಂದರ ಜನ್ಮದಿನ - ಕೋಲ್ಕತ್ತಾ
ಜನವರಿ 14: ಮಕರ ಸಂಕ್ರಾಂತಿ/ಪೊಂಗಲ್‌ - ಅಹಮದಾಬಾದ್‌ ಹಾಗೂ ಚೆನ್ನೈ
ಜನವರಿ 15: ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಾಂತಿ ಹಬ್ಬ/ಮಘೆ ಸಂಕ್ರಾಂತಿ/ಸಂಕ್ರಾಂತಿ/ಪೊಂಗಲ್‌/ತಿರುವಲ್ಲೂರು ದಿನ - ಬೆಂಗಳೂರು, ಚೆನ್ನೈ, ಗ್ಯಾಂಗ್ಟಾಕ್ ಹಾಗೂ ಹೈದರಾಬಾದ್‌
ಜನವರಿ 18: ಥಾಯ್‌ ಪೂಸಮ್‌ - ಚೆನ್ನೈ
ಜನವರಿ 26: ಗಣರಾಜ್ಯ ದಿನ- ಇಂಫಾಲ್‌, ಜೈಪುರ, ಶ್ರೀನಗರ, ಭೋಪಾಲ್‌, ಭುವನೇಶ್ವರ, ಚಂಡೀಗಢ, ಅಗರ್ತಾಲ ಹೊರತುಪಡಿಸಿ ದೇಶದೆಲ್ಲೆಡೆ

ಜನವರಿ ತಿಂಗಳ ವಾರದ ರಜೆಗಳು

ಜನವರಿ 2: ಭಾನುವಾರ (ವಾರದ ರಜೆ)
ಜನವರಿ 8: ತಿಂಗಳಿನ ಎರಡನೇ ಶನಿವಾರ
ಜನವರಿ 9: ಭಾನುವಾರ (ವಾರದ ರಜೆ)
ಜನವರಿ 16: ಭಾನುವಾರ (ವಾರದ ರಜೆ)
ಜನವರಿ 22: ತಿಂಗಳ ನಾಲ್ಕನೇ ಶನಿವಾರ
ಜನವರಿ 23: ಭಾನುವಾರ (ವಾರದ ರಜೆ)
ಜನವರಿ 30: ಭಾನುವಾರ (ವಾರದ ರಜೆ)

English summary

Bank Holidays in January 2022: Banks will be closed for 16 days in this month

Bank Holidays In January 2022 : Let's have a look at important bank dates when banks will remain closed in the month of January. Take a look.
Story first published: Monday, December 27, 2021, 14:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X