For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಗಳಿಗೆ ಅಕ್ಟೋಬರ್ ನಲ್ಲಿ 14 ದಿನ ರಜಾ: ಇಲ್ಲಿದೆ ಬ್ಯಾಂಕ್ ಗಳ ರಜಾ ಪಟ್ಟಿ

|

ಬ್ಯಾಂಕಿಂಗ್ ವ್ಯವಹಾರಗಳು ಈಗ ಬೆರಳ ತುದಿಯಲ್ಲೇ ಮುಗಿದು ಹೋಗುತ್ತವೆ. ಮುಂಚಿನ ರೀತಿಯಲ್ಲಿ ಬ್ಯಾಂಕ್ ಶಾಖೆಗೆ ಹೋಗಬೇಕು, ಅಲ್ಲಿಂದಲೇ ಎಲ್ಲ ಕೆಲಸ ಆಗಬೇಕು ಎಂಬ ಕಡ್ಡಾಯ ಇಲ್ಲ. ಆದರೂ ಕೆಲವು ಬ್ಯಾಂಕಿಂಗ್ ವ್ಯವಹಾರಗಳಿಗೆ ಬ್ಯಾಂಕ್ ಶಾಖೆಗೆ ಹೋಗಬೇಕಾಗುತ್ತದೆ. ಅಂಥ ವ್ಯವಹಾರಗಳನ್ನು ಮಾಡುವವರಿಗೆ ಅಕ್ಟೋಬರ್ ತಿಂಗಳ ಬ್ಯಾಂಕ್ ರಜಾ ದಿನಗಳ ಮಾಹಿತಿ ನೀಡಲಾಗುತ್ತಿದೆ.

ಐಸಿಐಸಿಐ ಬ್ಯಾಂಕ್ ನಿಂದ ವಿವಿಧ ಸಾಲಗಳ ಮೇಲೆ ಆಕರ್ಷಕ ಬಡ್ಡಿ ದರ, ಆಫರ್

ಸಾರ್ವಜನಿಕ ಬ್ಯಾಂಕ್ ಇರಲಿ ಅಥವಾ ಖಾಸಗಿಯೇ ಇರಲಿ, ಬ್ಯಾಂಕಿಂಗ್ ವ್ಯವಹಾರಗಳಿಗೆ ತೆರಳುವ ಮುನ್ನ ಈ ಪಟ್ಟಿಯ ಬಗ್ಗೆ ಮಾಹಿತಿ ನಿಮ್ಮಲ್ಲಿ ಇರಲಿ. ಸುಖಾ ಸುಮ್ಮನೆ ಅಲೆದಾಟ ತಪ್ಪುತ್ತದೆ. 2020ರ ಅಕ್ಟೋಬರ್ ತಿಂಗಳಲ್ಲಿ 14 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜಾ ಇರುತ್ತದೆ. ಇನ್ನು ರಜಾ ದಿನಗಳ ಪಟ್ಟಿ ಹೀಗಿದೆ:

ಬ್ಯಾಂಕ್ ಗಳಿಗೆ ಅಕ್ಟೋಬರ್ ನಲ್ಲಿ 14 ದಿನ ರಜಾ: ಬ್ಯಾಂಕ್ ಗಳ ರಜಾಪಟ್ಟಿ

 

ಅ. 2: ಶುಕ್ರವಾರ- (ಗಾಂಧೀ ಜಯಂತಿ)

ಅ. 4: ಭಾನುವಾರ- (ಸಾರ್ವಜನಿಕ ರಜಾ)

ಅ. 8: ಗುರುವಾರ- ಚೆಲ್ಲಂ (ಪ್ರಾದೇಶಿಕ ರಜಾ)

ಅ. 10: ಶನಿವಾರ- (ಎರಡನೇ ಶನಿವಾರ)

ಅ. 11: ಭಾನುವಾರ- (ಸಾರ್ವಜನಿಕ ರಜಾ)

ಅ. 17: ಶನಿವಾರ- ಅಸ್ಸಾಂನಲ್ಲಿ ಕತಿ ಬಿಹು

ಅ. 18: ಭಾನುವಾರ (ಸಾರ್ವಜನಿಕ ರಜಾ)

ಅ. 23: ಶುಕ್ರವಾರ- ಮಹಾಸಪ್ತಮಿ (ಪ್ತಾದೇಶಿಕ ರಜಾ)

ಅ. 24: ಶನಿವಾರ- ಮಹಾಷ್ಟಮಿ (ಪ್ರಾದೇಶಿಕ ರಜಾ)

ಅ. 25: ಭಾನುವಾರ- (ಸಾರ್ವಜನಿಕ ರಜಾ)

ಅ. 26: ಸೋಮವಾರ- ವಿಜಯ ದಶಮಿ

ಅ. 29: ಗುರುವಾರ- ಮಿಲಾದ್ ಇ ಶರೀಫ್ (ಪ್ರಾದೇಶಿಕ ರಜಾ)

ಅ. 30: ಶುಕ್ರವಾರ- ಈದ್ ಮಿಲಾದ್

ಅ. 31: ಶನಿವಾರ- ಮಹರ್ಷಿ ವಾಲ್ಮೀಕಿ, ಸರ್ದಾರ್ ಪಟೇಲ್ ಜಯಂತಿ (ಪ್ರಾದೇಶಿಕ ರಜಾ)

English summary

List of Bank Holidays In October 2020

Here is the list of Bank holidays October 2020. Total 14 days holidays for public and private banks.
Company Search
COVID-19