For Quick Alerts
ALLOW NOTIFICATIONS  
For Daily Alerts

ಮಾರ್ಚ್ ತ್ರೈಮಾಸಿಕದಲ್ಲಿ 1,779 ಕೋಟಿ ರೂ. ಲಾಭ ಗಳಿಸಿದ ಬ್ಯಾಂಕ್ ಆಫ್ ಬರೋಡಾ

|

ಬ್ಯಾಂಕ್ ಆಫ್ ಬರೋಡಾ ಶುಕ್ರವಾರ ಮಾರ್ಚ್ 2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ 1,778.77 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದೆ. ಹಿಂದಿನ ವರ್ಷದಲ್ಲಿ ಇದೇ ಅವಧಿಯಲ್ಲಿ ಬ್ಯಾಂಕ್ ರೂ 1,046.50 ಕೋಟಿ ನಿವ್ವಳ ನಷ್ಟವನ್ನು ಅನುಭವಿಸಿತ್ತು. ಆದರೆ ಈಗ ಆದಾಯದಲ್ಲಿ ಭಾರೀ ಬೆಳವಣಿಗೆ ಕಂಡು ಬಂದಿದೆ.

 

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಬ್ಯಾಂಕ್ ಶೇಕಡ 21.18ರಷ್ಟು ಬೆಳವಣಿಗೆ ಕಂಡಿದೆ. ಬ್ಯಾಂಕ್‌ನ ಆದಾಯ 8,611.67 ಕೋಟಿಗೆ ಏರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 7,106.62 ಕೋಟಿ ರೂ ಆದಾಯವಾಗಿತ್ತು.

ಎಸ್‌ಬಿಐ Q4: ನಿವ್ವಳ ಲಾಭ ರೂ 9,113 ಕೋಟಿಗೆ ಹೆಚ್ಚಳ

ಆದಾಗ್ಯೂ, ಬಡ್ಡಿಯೇತರ ಆದಾಯವು ಶೇಕಡ 47ರಷ್ಟು ಏರಿಕೆಯಾಗಿ 2,522.29 ಕೋಟಿ ರೂಪಾಯಿಗೆ ತಲುಪಿದೆ. ಹಣಕಾಸು ವರ್ಷ 2021ರ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಶೇಕಡ 2.72ರಿಂದ ಶೇಕಡ 3.08ಕ್ಕೆ ಹೆಚ್ಚಿದೆ. 36 ಮೂಲ ಅಂಕಗಳು ಹೆಚ್ಚಾಗಿದೆ. ಕ್ವಾರ್ಟರ್-ಆನ್-ಕ್ವಾರ್ಟರ್ ಆಧಾರದ ಮೇಲೆ, ಇದು ಶೇಕಡ 3.13ರಿಂದ 5 ಬಿಪಿಎಸ್ ಕುಸಿತವನ್ನು ಕಂಡಿದೆ.

 1,779 ಕೋಟಿ ರೂ. ಲಾಭ ಗಳಿಸಿದ ಬ್ಯಾಂಕ್ ಆಫ್ ಬರೋಡಾ

Q4FY21 ಕ್ಕೆ 3,555.06 ಕೋಟಿ ರೂಪಾಯಿ ಆದಾಯಕ್ಕೆ ಹೋಲಿಕೆ ಮಾಡಿದಾಗ ಈ ತ್ರೈಮಾಸಿಕದಲ್ಲಿ ಶೇಕಡ 5.10 ಏರಿಕೆಯಾಗಿ 3,736.38 ಕೋಟಿ ರೂಪಾಯಿ ಆಗಿದೆ. ಒಟ್ಟು ಎನ್‌ಪಿಎ 54,059 ಕೋಟಿಗೆ ಕಡಿಮೆಯಾದ ಕಾರಣ ಆಸ್ತಿ ಗುಣಮಟ್ಟ ಸುಧಾರಿಸಿದೆ. ಒಟ್ಟು ಎನ್‌ಪಿಎ ಅನುಪಾತವು ಶೇಕಡ 8.87ರಿಂದ ಶೇಕಡ 6.61ಕ್ಕೆ ಸುಧಾರಿಸಿದೆ.

ಈ ಲಾಭದ ಬಗ್ಗೆ ಘೋಷಿಸಿದ ನಂತರ ವರ್ಚುವಲ್ ಪ್ರೆಸ್ ಮೀಟ್‌ನಲ್ಲಿ ಮಾತನಾಡಿದ ಎಂಡಿ ಮತ್ತು ಸಿಇಒ ಸಂಜೀವ್ ಚಡ್ಡಾ, ಬ್ಯಾಂಕ್ ಉತ್ತಮ ಮಾರ್ಜಿನ್‌ಗಳನ್ನು ನೀಡುವುದನ್ನು ಮುಂದುವರಿಸಿದ ಆ ವಿಭಾಗಗಳಲ್ಲಿ ಆಸ್ತಿ ಬೆಳವಣಿಗೆ ಸಂಭವಿಸಿದೆ ಎಂದು ಖಚಿತಪಡಿಸಿದೆ ಎಂದು ಹೇಳಿದರು.

ಎಸ್‌ಬಿಐ ನಿವ್ವಳ ಲಾಭ ರೂ 9,113 ಕೋಟಿಗೆ ಹೆಚ್ಚಳ

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶುಕ್ರವಾರ ತನ್ನ ಗಳಿಕೆಯನ್ನು ವರದಿ ಮಾಡಿದೆ. ಎಸ್‌ಬಿಐ Q4 ನಿವ್ವಳ ಲಾಭ ರೂ 9,113 ಕೋಟಿಗೆ ಹೆಚ್ಚಳವಾಗಿದೆ. ಹಣಕಾಸು ವರ್ಷ 2022ರ ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಸ್ವತಂತ್ರ ನಿವ್ವಳ ಲಾಭವು ರೂ. 9113.53 ಕೋಟಿಗೆ ಏರಿದೆ. ಶೇಕಡ 41.2ರಷ್ಟು ಹೆಚ್ಚಳವಾಗಿದೆ. Q4 ಹಣಕಾಸು ವರ್ಷ 2021 ಅವಧಿಯಲ್ಲಿ 6450.75 ಕೋಟಿ ವರದಿಯಾಗಿದೆ.

 

ಪರಿಶೀಲನೆಯ ತ್ರೈಮಾಸಿಕದಲ್ಲಿ ಬ್ಯಾಂಕ್‌ನಲ್ಲಿನ ನಿವ್ವಳ ಬಡ್ಡಿ ಆದಾಯವು ಶೇಕಡ 15.3ರಷ್ಟು ಏರಿಕೆ ದಾಖಲಿಸಿ ರೂ. 31,198 ಕೋಟಿ ಆಗಿದೆ. ಈ ಹಿಂದೆ ರೂ. 27,067 ಕೋಟಿ ಆಗಿತ್ತು. ಹಿಂದಿನ ತ್ರೈಮಾಸಿಕದಲ್ಲಿ ಶೇಕಡ 4.5ರಿಂದ ಒಟ್ಟು ಎನ್‌ಪಿಎ ಅನುಪಾತವು ಶೇಕಡ 3.97ಕ್ಕೆ ಇಳಿಕೆಯಾಗಿದೆ.

ಬ್ಯಾಂಕ್‌ನಲ್ಲಿ ನಿವ್ವಳ ಎನ್‌ಪಿಎ ಅನುಪಾತವು ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಶೇಕಡ 1.34ರಿಂದ ಶೇಕಡ 1.02ಕ್ಕೆ ಇಳಿದಿದೆ. ಮಾರ್ಚ್ 31, 2022 ರಂತೆ ಪ್ರಾವಿಷನ್ ಕವರೇಜ್ ಅನುಪಾತ (ಪಿಸಿಆರ್) ಶೇಕಡ 90.20 ರಷ್ಟಿದೆ.

English summary

Bank of Baroda posts Rs 1,779-cr profit in March quarter

Bank of Baroda posts Rs 1,779-cr profit in March quarter.
Story first published: Saturday, May 14, 2022, 18:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X