For Quick Alerts
ALLOW NOTIFICATIONS  
For Daily Alerts

ಖಾಸಗೀಕರಣದ ವಿರುದ್ಧ ಆಕ್ರೋಶ: ರಾಷ್ಟ್ರವ್ಯಾಪ್ತಿ ಎರಡು ದಿನ ಬ್ಯಾಂಕ್‌ಗಳ ಮುಷ್ಕರ

|

ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆಯು (ಯುಎಫ್‌ಬಿಯು) ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ವಿರೋಧ ಮಾಡಿ ಡಿಸೆಂಬರ್ 16 ರಿಂದ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ಈ ಹಿನ್ನೆಲೆಯಿಂದಾಗಿ ಡಿಸೆಂಬರ್ 16 ಹಾಗೂ ಡಿಸೆಂಬರ್‌ 17 ರಂದು ಬ್ಯಾಂಕುಗಳು ಬಂದ್‌ ಆಗಿರುವ ಸಾಧ್ಯತೆಗಳು ಇದೆ ಎಂದು ವರದಿಯು ಉಲ್ಲೇಖ ಮಾಡಿದೆ.

 

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ ವೇಳೆ ತನ್ನ ಹೂಡಿಕೆಯ ಯೋಜನೆಯ ಭಾಗವಾಗಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು (ಪಿಎಸ್‌ಬಿ) ಖಾಸಗೀಕರಣಗೊಳಿಸುವುದಾಗಿ ಘೋಷಿಣೆ ಮಾಡಿದ್ದರು. ಈಗ ಹಲವಾರು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಾಗಿದೆ. ಇದನ್ನು ವಿರೋಧ ಮಾಡಿ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆಯು (ಯುಎಫ್‌ಬಿಯು) ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ.

ಎಚ್ಚರ: ಬ್ಯಾಂಕ್‌ ಖಾತೆಯಿಂದ ಹಣ ಎಗರಿಸಲು ವಂಚಕರ ಹೊಸ ಮಾರ್ಗ

ಸರ್ಕಾರವು ಕಳೆದ ಹಲವಾರು ವರ್ಷಗಳಿಂದ ಹಲವಾರು ಬ್ಯಾಂಕುಗಳನ್ನು ಖಾಸಗೀಕರಣ ಮಾಡಿದೆ. ಸರ್ಕಾರವು 2019 ರಲ್ಲೇ ಐಡಿಬಿಐ ಬ್ಯಾಂಕ್‌ ಅನ್ನು ಖಾಸಗೀಕರಣ ಮಾಡಿದೆ. ಎಲ್‌ಐಸಿಗೆ ಸರ್ಕಾರದ ಬಹು ಪಾಲನ್ನು ಮಾರಾಟ ಮಾಡುವ ಮೂಲಕ ಸರ್ಕಾರವು 2019 ರಲ್ಲೇ ಐಡಿಬಿಐ ಬ್ಯಾಂಕ್‌ ಅನ್ನು ಖಾಸಗೀಕರಣ ಮಾಡಿದೆ. ಇನ್ನು ಕಳೆದ ನಾಲ್ಕು ವರ್ಷದಲ್ಲಿ ಕೇಂದ್ರ ಸರ್ಕಾರವು ಸಾರ್ವಜನಿಕರ ಹಾಗೂ ಬ್ಯಾಂಕ್‌ ಒಕ್ಕೂಟಗಳ ಆಕ್ರೋಶದ ನಡುವೆಯೂ 14 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಿದೆ.

ಖಾಸಗೀಕರಣದ ವಿರುದ್ಧ ಆಕ್ರೋಶ: ಈ ದಿನಗಳು ಬ್ಯಾಂಕ್‌ ಮುಷ್ಕರ

ಚಳಿಗಾಲದ ಅಧಿವೇಶನದಲ್ಲಿ ಬ್ಯಾಂಕಿಂಗ್‌ ಕಾನೂನು ತಿದ್ದುಪಡಿ ಮಸೂದೆ ಮಂಡನೆ

ಬ್ಯಾಂಕುಗಳನ್ನು ವಿಲೀನ ಮಾಡುವುದು ಹಾಗೂ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದರ ವಿರುದ್ಧವಾಗಿ ಸಾರ್ವಜನಿಕ ವಲಯ ಹಾಗೂ ಬ್ಯಾಂಕುಗಳ ಒಕ್ಕೂಟದಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಆಕ್ರೋಶಗಳ ನಡುವೆಯೂ ಸರ್ಕಾರವು 14 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಿದೆ. ಹಾಗೆಯೇ ಖಾಸಗೀಕರಣವನ್ನು ಮಾಡಿದೆ. ಈ ನಡುವೆ ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಬ್ಯಾಂಕಿಂಗ್‌ ಕಾನೂನು ತಿದ್ದುಪಡಿ ಮಸೂದೆ (2021) ಮಂಡಿಸಲು ಕೇಂದ್ರ ಸರ್ಕಾರವು ಮುಂದಾಗಿದೆ. ಸರ್ಕಾರದ ಈ ನಡೆಯು ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆಯ (ಯುಎಫ್‌ಬಿಯು) ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ ಎಚ್‌ ವೆಂಕಟಾಚಲಂ ಮಾಹಿತಿ ನೀಡಿದ್ದಾರೆ.

 

ಡಿ.1ರಿಂದ ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಇಎಂಐ ವಹಿವಾಟಿಗೆ ಶುಲ್ಕ

"ಎಲ್ಲಾ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವ ಸರ್ಕಾರದ ನಡೆಯನ್ನು ಯುಎಫ್‌ಬಿಯು ವಿರೋಧ ಮಾಡುವ ನಿರ್ಧಾರ ಕೈಗೊಂಡಿದೆ," ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ ಎಚ್ ವೆಂಕಟಾಚಲಂ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಬ್ಯಾಂಕುಗಳ ಮುಷ್ಕರವು ಡಿಸೆಂಬರ್ 16 ಹಾಗೂ ಡಿಸೆಂಬರ್‌ 17 ರಂದು ನಡೆಯಲಿದೆ," ಎಂದು ಕೂಡಾ ಸಿ ಎಚ್ ವೆಂಕಟಾಚಲಂ ಮಾಹಿತಿ ನೀಡಿದರು.

ಇನ್ನು ಈ ಬಗ್ಗೆ ಅಧಿಕ ಮಾಹಿತಿ ನೀಡಿರುವ ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ ಎಚ್ ವೆಂಕಟಾಚಲಂ, "ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ, ಬ್ಯಾಂಕುಗಳ ಬೃಹತ್‌ ಸಾರ್ವಜನಿಕ ಉಳಿತಾಯದ ವಹಿವಾಟು ಮಾಡುತ್ತದೆ. ದೇಶದ ವಿಶಾಲವಾದ ಆರ್ಥಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಕಾರ್ಯವನ್ನು ಬ್ಯಾಂಕುಗಳು ಮಾಡುತ್ತದೆ. ಸಾಮಾಜಿಕ ದೃಷ್ಟಿಕೋನದಿಂದ ನಾವು ನೋಡುವುದಾದರೆ ನಮಗೆ ಸಾರ್ವಜನಿಕ ವಲಯದ ಬ್ಯಾಂಕಿಂಗ್‌ ವ್ಯವಸ್ಥೆಯು ಅತ್ಯಂತ ಸೂಕ್ತವಾದು, ಹಾಗೆಯೇ ಅನಿವಾರ್ಯ ಅಗತ್ಯವೂ ಕೂಡಾ ಹೌದು," ಎಂದು ವಿವರಿಸಿದರು.

"ನಾವು ಕಳೆದ 25 ವರ್ಷಗಳಿಂದ ಯುಎಫ್‌ಬಿಯು ಬ್ಯಾನರ್‌ ಅಡಿಯಲ್ಲಿ ಬ್ಯಾಂಕುಗಳ ಖಾಸಗೀಕರಣವನ್ನು ವಿರೋಧ ಮಾಡುತ್ತಾ ಬಂದಿದ್ದೇವೆ. ಬ್ಯಾಂಕಿಂಗ್‌ ವಲಯವನ್ನು ಕುಗ್ಗಿಸುವ ಸುಧಾರಣೆಗಳನ್ನು ನಾವು ನಿರಂತರವಾಗಿ ವಿರೋಧ ಮಾಡುತ್ತಾ ಬಂದಿದ್ದೇವೆ," ಎಂದೂ ಹೇಳಿದರು.

English summary

Bank unions threaten two-day nationwide strike against proposed PSB privatisation

Bank unions threaten two-day nationwide strike against proposed PSB privatisation.
Story first published: Thursday, December 2, 2021, 20:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X