For Quick Alerts
ALLOW NOTIFICATIONS  
For Daily Alerts

ಚೀನಾ ಸರ್ವರ್‌ಗಳೊಂದಿಗೆ ಡೇಟಾ ಹಂಚಿಕೊಳ್ಳುತ್ತಿದ್ಯಾ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ?

|

ಇತ್ತೀಚೆಗಷ್ಟೇ ಪಬ್‌ಜಿ ಮಾದರಿಯ ಆನ್‌ಲೈನ್ ಗೇಮ್ ಬ್ಯಾಟಲ್‌ಗ್ರೌಂಡ್ ಮೊಬೈಲ್ ಇಂಡಿಯಾ, ಭಾರತದ ಬಳಕೆದಾರರ ಡೇಟಾವನ್ನ ಚೀನಾದ ಸರ್ವರ್‌ಗಳಿಗೆ ಕಳುಹಿಸುತ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಕಾರಣಕ್ಕಾಗಿ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾವನ್ನ ನಿಷೇಧಿಸಿ ಎಂದು ಸಿಎಐಟಿ ಆಗ್ರಹಿಸಿತ್ತು.

 

ಈ ಹಿಂದೆ ಡೇಟಾ ಸೋರಿಕೆಯಾಗುತ್ತಿದೆ ಎಂಬ ಕಾರಣದಿಂದಲೇ 2020 ರ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ PUBG ಅನ್ನು ನಿಷೇಧಿಸಲಾಗಿದೆ. ಇದೇ ಮಾದರಿಯಲ್ಲಿ ಬ್ಯಾಟಲ್‌ ಗ್ರೌಂಡ್‌ ಕೂಡ ನಡೆದಿದೆಯೇ ಎಂಬ ಅನುಮಾನ ಸೃಷ್ಟಿಸಿದೆ.

ಈ ಕುರಿತು ಗೇಮಿಂಗ್ ತಯಾರಕ ಕ್ರಾಫ್ಟನ್ ಹಲವಾರು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಹೇಳಿಕೆಯನ್ನ ನೀಡಿದೆ. ''ಮೂರನೇ ವ್ಯಕ್ತಿಗಳಿಗೆ ಹಂಚಲಾದ ಡೇಟಾವು ಕೆಲವು ಆಟದ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸಲು ಮಾತ್ರ" ಎಂದು ಆಟದ ತಯಾರಕ ಕ್ರಾಫ್ಟನ್ ಹೇಳಿದೆ.

ಚೀನಾ ಸರ್ವರ್‌ಗೆ ಡೇಟಾ ಹಂಚಿಕೊಳ್ಳುತ್ತಿದ್ಯಾ ಬ್ಯಾಟಲ್ ಗ್ರೌಂಡ್?

ಅಧಿಕೃತ ಹೇಳಿಕೆಯಲ್ಲಿ, ಆಟದ ಡೆವಲಪರ್ "ಅಧಿಕೃತ ಗೇಮಿಂಗ್ ಶುರುವಾಗುವುದಕ್ಕೂ ಮುಂಚಿತವಾಗಿ ಅನಿರೀಕ್ಷಿತ ಮತ್ತು ನಿರ್ಬಂಧಿತ ಐಪಿ ವಿಳಾಸಗಳಿಗೆ ವರ್ಗಾವಣೆಯಾಗುವ ಯಾವುದೇ ಡೇಟಾವನ್ನು ಕ್ರಾಫ್ಟನ್ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ ಮತ್ತು ರಕ್ಷಿಸುತ್ತದೆ" ಎಂದು ಹೇಳಿದೆ.

"ಕ್ರಾಫ್ಟನ್ ದತ್ತಾಂಶ ಸುರಕ್ಷತೆಗಾಗಿ ಉದ್ಯಮದ ಕಠಿಣ ಮಾನದಂಡಗಳನ್ನು ಜಾರಿಗೊಳಿಸುತ್ತಿದೆ ಮತ್ತು ಬ್ಯಾಟಲ್‌ಗ್ರೌಂಡ್ ಮೊಬೈಲ್ ಇಂಡಿಯಾದ ಅಧಿಕೃತವಾಗಿ ಆರಂಭವಾದಾಗಿನಿಂದ ಯಾವುದೇ ನ್ಯೂನತೆಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದೆ" ಎಂದು ಗೇಮಿಂಗ್ ಡೆವಲಪರ್ ಸ್ಪಷ್ಟಪಡಿಸಿದ್ದಾರೆ.

"ಇತರ ಜಾಗತಿಕ ಮೊಬೈಲ್ ಗೇಮ್‌ಗಳು ಮತ್ತು ಅಪ್ಲಿಕೇಶನ್‌ಗಳಂತೆ, ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಕೂಡ ಅನನ್ಯ ಆಟದ ಸೇವೆಗಳನ್ನು ಒದಗಿಸಲು ಮೂರನೇ ವ್ಯಕ್ತಿಯ ಪರಿಹಾರಗಳನ್ನು ಬಳಸುತ್ತದೆ. ಈ ಪರಿಹಾರಗಳನ್ನು ಬಳಸುವ ಪ್ರಕ್ರಿಯೆಯಲ್ಲಿ, ಕೆಲವು ಗೇಮ್‌ಗಳನ್ನು ಮತ್ತು ಡೇಟಾವನ್ನು ಮೂರನೇ ವ್ಯಕ್ತಿಗಳಿಗೆ ಹಂಚಿಕೊಳ್ಳಲಾಗಿದೆ" ಎಂದು ಕ್ರಾಫ್ಟನ್ ಹೇಳಿದೆ.

ಇದರ ಜೊತೆಗೆ ಬಳಕೆದಾರರು ಗೌಪ್ಯತೆ ನೀತಿಗೆ ಒಪ್ಪಿಗೆಯೊಂದಿಗೆ ಕೆಲವು ಬಳಕೆದಾರರ ಡೇಟಾವನ್ನು ವರ್ಗಾಯಿಸಬಹುದು ಮತ್ತು ಅವರ ಖಾತೆಯನ್ನು ಸ್ಥಳಾಂತರಿಸಲು ಆಯ್ಕೆ ಮಾಡಬಹುದು. ಗೌಪ್ಯತೆ ನೀತಿಯನ್ನು ಉಲ್ಲಂಘಿಸುವ ಯಾರಾದರೂ ಡೇಟಾವನ್ನು ಹಂಚಿಕೊಳ್ಳಲಾಗುವುದಿಲ್ಲ ಎಂದು ಗೇಮಿಂಗ್ ಡೆವಲಪರ್ ಕ್ರಾಫ್ಟನ್ ಹೇಳಿದೆ.

English summary

Battlegrounds Mobile India: Krafton Opens Up On Sending Players Data To China: Know more

The report claimed that the data of Battlegrounds Mobile India players was being sent to a China Mobile Communications server. Crafton answer here
Story first published: Wednesday, June 23, 2021, 15:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X