For Quick Alerts
ALLOW NOTIFICATIONS  
For Daily Alerts

ವಿಪ್ರೋ ಉದ್ಯೋಗಿಗಳಿಗೆ ಜನವರಿ 1ರಿಂದ ವೇತನ ಹೆಚ್ಚಳ ಜಾರಿ

|

ಥಿಯೆರಿ ಡೆಲಪೊರ್ಟೆ ನೇತೃತ್ವದ ವಿಪ್ರೋದಿಂದ ಉದ್ಯೋಗಿಗಳಿಗೆ ಹೊಸ ವರ್ಷಕ್ಕೆ ಶುಭ ಸುದ್ದಿ ಇದೆ. ಬೆಂಗಳೂರು ಮೂಲದ ವಿಪ್ರೋದಿಂದ ಅರ್ಹ ಉದ್ಯೋಗಿಗಳು, ಜೂನಿಯರ್ ಬ್ಯಾಂಡ್ ನಲ್ಲಿ ಇರುವವರಿಗೆ (B3 ಮತ್ತು ಅದಕ್ಕಿಂತ ಕೆಳಗಿನವರು) ಜನವರಿ 1ರಿಂದ ವೇತನ ಹೆಚ್ಚಳ ಜಾರಿಗೆ ಬರಲಿದೆ. ವಿಪ್ರೋದಲ್ಲಿ ಇರುವ 1.8 ಲಕ್ಷ ಸಿಬ್ಬಂದಿಯಲ್ಲಿ 80 ಪರ್ಸೆಂಟ್ ನಷ್ಟು B3 ಬ್ಯಾಂಡ್ ನವರಿದ್ದಾರೆ.

 

ಮಧ್ಯಮ ಹಂತದಲ್ಲಿ ಇರುವ ಎಲ್ಲ ಅರ್ಹ ಉದ್ಯೋಗಿಗಳಿಗೆ (C1 ಬ್ಯಾಂಡ್ ಮತ್ತು ಮೇಲ್ಪಟ್ಟವರು) ಮುಂದಿನ ವರ್ಷ ಜೂನ್ 1ರಿಂದ ವೇತನ ಹೆಚ್ಚಳ ಆಗಲಿದೆ. ದೇಶದ ಹೊರಗೆ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ 6- 8%, ಭಾರತದೊಳಗೆ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ 3ರಿಂದ 4 ಪರ್ಸೆಂಟ್ ವೇತನ ಹೆಚ್ಚಳ ಆಗಲಿದೆ ಎಂದು ಮೂಲಗಳು ಹೇಳಿವೆ.

ದಿನಕ್ಕೆ 22 ಕೋಟಿಯಂತೆ ದಾನ ಮಾಡಿದ ಮಹಾನ್ ದಾನಿ ಆತ

ಆದರೆ, ಯಾವ ಪ್ರಮಾಣದಲ್ಲಿ ಸಂಬಳ ಹೆಚ್ಚಾಗುತ್ತದೆ ಎಂದು ವಿಪ್ರೋದಿಂದ ಮಾಹಿತಿ ಹೊರಬಂದಿಲ್ಲ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ವೇತನ ಬಡ್ತಿಯ ಅವಧಿಯನ್ನೇ ಮತ್ತೊಮ್ಮೆ ಲೆಕ್ಕ ಹಾಕಿಕೊಳ್ಳುವ ಸ್ಥಿತಿ ಐಟಿ ಸಂಸ್ಥೆಗಳಿಗೆ ಬಂದಿದೆ. ಸಾಮಾನ್ಯವಾಗಿ ವಿಪ್ರೋದಿಂದ ಜೂನ್ ತಿಂಗಳಲ್ಲಿ ವಾರ್ಷಿಕ ವೇತನ ಹೆಚ್ಚಳ ಆಗುತ್ತಿತ್ತು. C1 ಬ್ಯಾಂಡ್ ಮತ್ತು ಮೇಲ್ಪಟ್ಟವರಿಗೆ ಒಂದು ಅವಧಿಯ ವೇತನ ಹೆಚ್ಚಳ ಕೈ ತಪ್ಪಿದಂತಾಗಿದೆ.

ವಿಪ್ರೋ ಉದ್ಯೋಗಿಗಳಿಗೆ ಜನವರಿ 1ರಿಂದ ವೇತನ ಹೆಚ್ಚಳ ಜಾರಿ

ಇನ್ನು ಕಂಪೆನಿಯಲ್ಲಿ B3 ಬ್ಯಾಂಡ್ ನೊಳಗೆ ಇರುವ ಹತ್ತಿರಹತ್ತಿರ ಏಳು ಸಾವಿರದಷ್ಟು ಸಿಬ್ಬಂದಿಗೆ ಬಡ್ತಿ ನೀಡಲಾಗಿದೆ ಎಂದು ಕಂಪೆನಿ ಹೇಳಿದೆ. ಕಳೆದ ಮೂರು ವರ್ಷದಲ್ಲೇ ಇದು ಗರಿಷ್ಠ ಪ್ರಮಾಣದ ಬಡ್ತಿ ಎಂದು ಹೇಳಲಾಗಿದೆ.

ಈ ಮಧ್ಯೆ ವಿಪ್ರೋ ಸಿಐಒ ರೋಹಿತ್ ಅದ್ಲಖ ಕಂಪೆನಿ ತೊರೆದಿದ್ದಾರೆ. ಇಪ್ಪತ್ತೈದು ವರ್ಷಗಳ ಕಾಲ ಅವರು ಕಂಪೆನಿಯಲ್ಲಿ ಸೇವೆ ಸಲ್ಲಿಸಿದ್ದರು. ಮುಖ್ಯ ಡಿಜಿಟಲ್ ಅಧಿಕಾರಿ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪ್ಲಾಟ್ ಫಾರ್ಮ್ಸ್ ಗ್ಲೋಬಲ್ ಹೆಡ್ ಕೂಡ ಆಗಿದ್ದರು. ಈ ಇಪ್ಪತ್ತೈದು ವರ್ಷದ ಅವಧಿಯಲ್ಲಿ ಸೇಲ್ಸ್, ಡೆಲಿವರಿ ಹಾಗೂ ಪ್ರಾಫಿಟ್ ಅಂಡ್ ಲಾಸ್ ಮ್ಯಾನೇಜ್ ಮೆಂಟ್ ನಲ್ಲಿ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದರು.

English summary

Bengaluru Based IT Firm Wipro To Roll Out Pay Hike From January 1, 2021

Bengaluru based IT firm Wipro company to roll out pay hike to employees from January 1, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X