For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಮೂಲದ ಕಂಪೆನಿಯ 870 ಕೋಟಿ ರು.ಗೂ ಹೆಚ್ಚು ಮೌಲ್ಯದ ಅನಧಿಕೃತ ಆಸ್ತಿ ಪತ್ತೆ ಹಚ್ಚಿದ ಐ.ಟಿ.

By ಅನಿಲ್ ಆಚಾರ್
|

ಆದಾಯ ತೆರಿಗೆ ಇಲಾಖೆಯು ಬೆಂಗಳೂರು ಮೂಲದ ಮದ್ಯ ತಯಾರಿಕೆ ಕಂಪೆನಿಯ 870 ಕೋಟಿ ರುಪಾಯಿಗೂ ಹೆಚ್ಚು ಅನಧಿಕೃತ ಆದಾಯವನ್ನು ಪತ್ತೆ ಮಾಡಿದೆ ಎಂದು ಸಿಬಿಡಿಟಿ ಗುರುವಾರ ತಿಳಿಸಿದೆ. ಫೆಬ್ರವರಿ 9ನೇ ತಾರೀಕಿನಂದು ದೊಡ್ಡ ಪ್ರಮಾಣದಲ್ಲಿ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆದಿತ್ತು. ಅಷ್ಟೇ ಅಲ್ಲ, ಭಾರತದಾದ್ಯಂತ 26 ಪ್ರತ್ಯೇಕ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆದಿತ್ತು.

 

ಈ ಕಂಪೆನಿಯು ದೊಡ್ಡ ಮಟ್ಟದಲ್ಲಿ ಭೂಮಿಯನ್ನು ಹೊಂದಿದ್ದು, ಬೆಂಗಳೂರು ಮೂಲದ ಕಟ್ಟಡ ನಿರ್ಮಾಣ ಸಂಸ್ಥೆ ಜತೆ ಸೇರಿ ಅದನ್ನು ಗೃಹ ಬಳಕೆಗೆ ಹಾಗೂ ವಾಣಿಜ್ಯ ಬಳಕೆ ಅಭಿವೃದ್ಧಿ ಮಾಡುತ್ತಿದೆ. ಬೆಂಗಳೂರು ಮೂಲದ ದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆ ಸೇರಿ ಕೈಗೊಂಡ ಜಂಟಿ ಅಭಿವೃದ್ಧಿ ವ್ಯವಹಾರದಲ್ಲಿ 692.82 ಕೋಟಿ ರುಪಾಯಿಗೂ ಹೆಚ್ಚು ಮೊತ್ತದ ಲಾಭ ಮುಚ್ಚಿಡಲಾಗಿದೆ.

309 ಕೋಟಿ ರುಪಾಯಿಯ ಲೆಕ್ಕಕ್ಕೆ ನೀಡದ ಆಸ್ತಿ ಪತ್ತೆ ಮಾಡಿದ ಐ.ಟಿ. ಇಲಾಖೆ

ಇದರ ಜತೆಗೆ ಸಮೂಹ ಸಂಸ್ಥೆಗಳಿಂದ ರು. 86 ಕೋಟಿ ವೆಚ್ಚವನ್ನು ತಪ್ಪಾಗಿ ಕ್ಲೇಮ್ ಮಾಡಲಾಗಿದೆ. ಮದ್ಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಘಟಕದಿಂದ 74 ಕೋಟಿ ರುಪಾಯಿಯ ಮಾರಾಟ ಲೆಕ್ಕ ನೀಡದಿರುವುದು ಪತ್ತೆಯಾಗಿದೆ. ಇದರ ಜತೆಗೆ ಬೋಗಸ್ ವೆಚ್ಚದ ರು. 17 ಕೋಟಿಯನ್ನು ಕೂಡ ಕ್ಲೇಮ್ ಮಾಡಲಾಗಿದೆ.

870 ಕೋಟಿ ರು.ಗೂ ಹೆಚ್ಚು ಮೌಲ್ಯದ ಅನಧಿಕೃತ ಆಸ್ತಿ ಪತ್ತೆ ಹಚ್ಚಿದ ಐ.ಟಿ

ಸಿಬಿಡಿಟಿಯಿಂದ ಬಿಡುಗಡೆ ಮಾಡಲಾದ ಹೇಳಿಕೆಯಿಂದ ತಿಳಿದುಬರುವ ಪ್ರಮುಖಾಂಶಗಳಿವು:
* ಸಮೂಹದ ನಿರ್ದೇಶಕರು ವಿವರಣೆ ನೀಡ ವೆಚ್ಚ ರು. 9 ಕೋಟಿ ಮಾಡಿದ್ದಾರೆ. ಅದಕ್ಕೆ ಆದಾಯ ತೆರಿಗೆ ಕಾಯ್ದೆ 1961ಯ ಸೆಕ್ಷನ್ 69C ಅಡಿಯಲ್ಲಿ ಪ್ರಾವಿಷನ್ಸ್ ಇದೆ.

* ಹಲವು ವರ್ಷಗಳಿಂದ ಕಂಪೆನಿಯ ಕಾರ್ಮಿಕರು ಮತ್ತು ಸಹೋದ್ಯೋಗಿಗಳ ಹೆಸರಲ್ಲಿ ಬೇನಾಮಿ ಆಸ್ತಿಗಳ ಮೇಲೆ ಸಾಕಷ್ಟು ಮೊತ್ತವನ್ನು ಹೂಡಿಕೆ ಮಾಡಲಾಗುತ್ತಿದೆ.

* ಒಟ್ಟಾರೆ 35 ಬೇನಾಮಿ ಆಸ್ತಿಗಳನ್ನು ಅವರ ಕುಟುಂಬಸ್ಥರು, ಸಹೋದ್ಯೋಗಿಗಳ ಹೆಸರಲ್ಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅದರ ಅಂದಾಜು ಮೌಲ್ಯ ರು. 150 ಕೋಟಿಗೂ ಹೆಚ್ಚು.

 

* ಕಂಪೆನಿ ಸಮೂಹದ ನಿರ್ದೇಶಕರ ಹೆಸರಲ್ಲಿ ಅಂತರರಾಷ್ಟ್ರೀಯ ಮಟ್ಟದ ಹೂಡಿಕೆ ಮಾಡಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ.

English summary

Bengaluru Based Liquor Manufacturer Company's Rs 870 Crore Unrecognised Asser Unearthed By IT

Bengaluru based liquor manufacturing company's Rs 870 crore unrecorganised asset unearth by Income Tax department.
Story first published: Friday, February 12, 2021, 15:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X